ಭಯ ಇದ್ದವರು Mask ಹಾಕ್ಕೊಳ್ಳಲಿ ಅಷ್ಟೇ; ದಂಡದ ಮೊತ್ತ ಕಡಿಮೆ ಮಾಡೋಲ್ಲ: ಕಮಿಷನರ್
ಬೆಂಗಳೂರು: ಕೊರೊನಾ ಹೋಗಲಾಡಿಸಲು ಮಾಸ್ಕ್ ಅಸ್ತ್ರ ಪ್ರಯೋಗಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ದಂಡದ ಮೊತ್ತ ವಿಪರೀತವಾಯಿತು; ಅದಕ್ಕಿಂತ ಹೆಚ್ಚಾಗಿ ದಂಡ ವಿಧಿಸುವ ಪ್ರಕ್ರಿಯೆಯೂ ವಿಪರೀತಕ್ಕೆ ಇಟ್ಟುಕೊಂಡಿದೆ ಎಂದು ಜನ ಅಸಮಾಧಾನಗೊಂಡಿದ್ದಾರೆ. ಆದ್ರೆ ಜನ ಎಷ್ಟೇ ಅಲವತ್ತುಕೊಂಡರೂ ಅದು ಸರ್ಕಾರದ ಕಿವಿ ಮೇಲೆ ಬಿದ್ದಿಲ್ಲ. ಬದಲಿಗೆ ಪೊಲೀಸರನ್ನೂ ಅಖಾಡಕ್ಕೆ ಇಳಿಸಿದ್ದು, ಮಾಸ್ಕ್ ಇಲ್ಲಾಂದ್ರೆ ದಂಡ ಹಾಕಿ ಎಂದು ದಂಡ ಪ್ರಯೋಗಕ್ಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ […]
ಬೆಂಗಳೂರು: ಕೊರೊನಾ ಹೋಗಲಾಡಿಸಲು ಮಾಸ್ಕ್ ಅಸ್ತ್ರ ಪ್ರಯೋಗಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ದಂಡದ ಮೊತ್ತ ವಿಪರೀತವಾಯಿತು; ಅದಕ್ಕಿಂತ ಹೆಚ್ಚಾಗಿ ದಂಡ ವಿಧಿಸುವ ಪ್ರಕ್ರಿಯೆಯೂ ವಿಪರೀತಕ್ಕೆ ಇಟ್ಟುಕೊಂಡಿದೆ ಎಂದು ಜನ ಅಸಮಾಧಾನಗೊಂಡಿದ್ದಾರೆ. ಆದ್ರೆ ಜನ ಎಷ್ಟೇ ಅಲವತ್ತುಕೊಂಡರೂ ಅದು ಸರ್ಕಾರದ ಕಿವಿ ಮೇಲೆ ಬಿದ್ದಿಲ್ಲ. ಬದಲಿಗೆ ಪೊಲೀಸರನ್ನೂ ಅಖಾಡಕ್ಕೆ ಇಳಿಸಿದ್ದು, ಮಾಸ್ಕ್ ಇಲ್ಲಾಂದ್ರೆ ದಂಡ ಹಾಕಿ ಎಂದು ದಂಡ ಪ್ರಯೋಗಕ್ಕೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾತನಾಡಿದ್ದು, (ಕೊರೊನಾ ಸೋಂಕಿನ) ಭಯ ಇದ್ದವರು ಮಾಸ್ಕ್ ಹಾಕಿಕೊಳ್ಳಲಿ ಅಷ್ಟೇ; ದಂಡದ ಮೊತ್ತ ಮಾತ್ರ ಕಡಿಮೆ ಮಾಡುವುದಿಲ್ಲ ಎಂದು ಸಾರಿದ್ದಾರೆ.
ಮಾಸ್ಕ್ ಧರಿಸದವರಿಗೆ 1000 ರೂ. ದಂಡ ವಿಧಿಸುವುದು ಖಚಿತ. ಒಂದು ಸಾವಿರ ರೂಪಾಯಿ ದಂಡದ ಮೊತ್ತ ಮಾತ್ರ ಕಡಿಮೆಯಾಗುವುದಿಲ್ಲ. ಜನರಿಗೆ ಭಯ ಇದ್ದರೆ ಖಂಡಿತವಾಗಿ ಮಾಸ್ಕ್ ಹಾಕಿಕೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ಮಾರ್ಷಲ್‌ಗಳ ಜೊತೆಗೂಡಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.