ಇಳಿಯಿತು, ಇಳಿಯಿತು Mask ದಂಡ ಪ್ರಮಾಣ: ಟಿವಿ9 ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ..
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆಂದು ಅಳವಡಿಸಿಕೊಂಡಿದ್ದ ಮಾಸ್ಕ್ ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಒಂದು ಹೆಜ್ಜೆ ಹಿಂದಿಟ್ಟಿದೆ. ಮಾಸ್ಕ್ ಧರಿಸದಿದ್ದರೆ ಭಾರೀ ಮೊತ್ತದ ದಂಡ ಹಾಕುವುದರ ವಿರುದ್ಧ ಟಿವಿ9 ನಡೆಸಿದ ನಿರಂತರ ಅಭಿಯಾನಕ್ಕೆ ಸರ್ಕಾರ ಇದೀಗ ಮಣಿದಿದೆ. ದಂಡದ ಮೊತ್ತವನ್ನು ಅತಿರೇಕದ ಮೊತ್ತದಿಂದ ಭಾರೀ ಕಡಿತಗೊಳಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. 1000 ರೂಪಾಯಿ ದಂಡ 250 ರೂಪಾಯಿಗೆ ಇಳಿಕೆ: ಟಿವಿ9 ವರದಿ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 250 […]
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆಂದು ಅಳವಡಿಸಿಕೊಂಡಿದ್ದ ಮಾಸ್ಕ್ ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಒಂದು ಹೆಜ್ಜೆ ಹಿಂದಿಟ್ಟಿದೆ. ಮಾಸ್ಕ್ ಧರಿಸದಿದ್ದರೆ ಭಾರೀ ಮೊತ್ತದ ದಂಡ ಹಾಕುವುದರ ವಿರುದ್ಧ ಟಿವಿ9 ನಡೆಸಿದ ನಿರಂತರ ಅಭಿಯಾನಕ್ಕೆ ಸರ್ಕಾರ ಇದೀಗ ಮಣಿದಿದೆ. ದಂಡದ ಮೊತ್ತವನ್ನು ಅತಿರೇಕದ ಮೊತ್ತದಿಂದ ಭಾರೀ ಕಡಿತಗೊಳಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
1000 ರೂಪಾಯಿ ದಂಡ 250 ರೂಪಾಯಿಗೆ ಇಳಿಕೆ: ಟಿವಿ9 ವರದಿ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 250 ರೂಪಾಯಿ ದಂಡ ಮತ್ತು ಗ್ರಾಮೀಣ ಭಾಗದಲ್ಲಿ 100 ರೂಪಾಯಿ ದಂಡ ವಿಧಿಸಲು ಹೊಸ ಆದೇಶ ಹೊರಡಿಸಿದೆ.
ದುಬಾರಿ ದಂಡ ಹಾಕಿದ್ದಕ್ಕೆ ಸರ್ಕಾರದ ನೈತಿಕತೆ ಪ್ರಶ್ನಿಸಿದ್ದ ಟಿವಿ9, ಬೆಳಗ್ಗೆಯಿಂದಲೂ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ದಂಡದ ಮೊತ್ತವನ್ನು ಕಡಿತಗೊಳಿಸುವಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಎಂ BS ಯಡಿಯೂರಪ್ಪ ಆದೇಶ ನೀಡಿದ್ದಾರೆ.
Published On - 3:40 pm, Wed, 7 October 20