ಕ್ಲಿನಿಕಲ್‌ ಸೈಕಾಲಜಿಸ್ಟ್‌ ಹುದ್ದೆಗೆ ನೇಮಕಾತಿ: RIMS ನಿಂದ ವಿಶೇಷ ಚೇತನ ಯುವಕನಿಗೆ ಅನ್ಯಾಯ

ರಾಯಚೂರು: ಆ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಅಧಿಕಾರಿಗಳ ಕಳ್ಳಾಟದಿಂದ ವಿಕಲಚೇತನ ವ್ಯಕ್ತಿಯೋರ್ವನ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ನ್ಯಾಯಯುತವಾಗಿ ಸಿಗಬೇಕಿದ್ದ ಹುದ್ದೆಗೆ ನೇಮಕಾತಿ ಆದೇಶ ನೀಡದೇ ಅಲ್ಲಿನ ವೈದ್ಯಕೀಯ ಅಧಿಕಾರಿಗಳು ವಂಚಿಸ್ತಿದ್ದಾರೆ. ಹೀಗಾಗಿ ಉದ್ಯೋಗ ವಂಚಿತ ವ್ಯಕ್ತಿ ಡಿಸಿಎಂ ಸವದಿ ಬಳಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ಕ್ಲಿನಿಕಲ್‌ ಸೈಕಾಲಜಿಸ್ಟ್‌ ಹುದ್ದೆಗೆ ನೇಮಕಾತಿಯಲ್ಲಿ ಗೋಲ್‌ಮಾಲ್! ಅಂದುಕೊಂಡಂತೆ ನಡೆದಿದ್ರೆ, ಇಷ್ಟೊತ್ತಿಗಾಗ್ಲೇ ರಾಯಚೂರು ನಗರದ ಯರಮರಸ ನಿವಾಸಿಯಾಗಿರೋ ವಿಶೇಷಚೇತನ ಸಿದ್ದಪ್ಪ ಬಾಳು ಬೆಳಕಾಗಬೇಕಿತ್ತು. ಆದ್ರೆ, ರಾಯಚೂರಿನ ರಿಮ್ಸ್ ವೈದ್ಯಕೀಯ ಆಸ್ಪತ್ರೆ ಆಡಳಿತ […]

ಕ್ಲಿನಿಕಲ್‌ ಸೈಕಾಲಜಿಸ್ಟ್‌ ಹುದ್ದೆಗೆ ನೇಮಕಾತಿ: RIMS ನಿಂದ ವಿಶೇಷ ಚೇತನ ಯುವಕನಿಗೆ ಅನ್ಯಾಯ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Oct 07, 2020 | 4:15 PM

ರಾಯಚೂರು: ಆ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಅಧಿಕಾರಿಗಳ ಕಳ್ಳಾಟದಿಂದ ವಿಕಲಚೇತನ ವ್ಯಕ್ತಿಯೋರ್ವನ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ನ್ಯಾಯಯುತವಾಗಿ ಸಿಗಬೇಕಿದ್ದ ಹುದ್ದೆಗೆ ನೇಮಕಾತಿ ಆದೇಶ ನೀಡದೇ ಅಲ್ಲಿನ ವೈದ್ಯಕೀಯ ಅಧಿಕಾರಿಗಳು ವಂಚಿಸ್ತಿದ್ದಾರೆ. ಹೀಗಾಗಿ ಉದ್ಯೋಗ ವಂಚಿತ ವ್ಯಕ್ತಿ ಡಿಸಿಎಂ ಸವದಿ ಬಳಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾನೆ.

ಕ್ಲಿನಿಕಲ್‌ ಸೈಕಾಲಜಿಸ್ಟ್‌ ಹುದ್ದೆಗೆ ನೇಮಕಾತಿಯಲ್ಲಿ ಗೋಲ್‌ಮಾಲ್! ಅಂದುಕೊಂಡಂತೆ ನಡೆದಿದ್ರೆ, ಇಷ್ಟೊತ್ತಿಗಾಗ್ಲೇ ರಾಯಚೂರು ನಗರದ ಯರಮರಸ ನಿವಾಸಿಯಾಗಿರೋ ವಿಶೇಷಚೇತನ ಸಿದ್ದಪ್ಪ ಬಾಳು ಬೆಳಕಾಗಬೇಕಿತ್ತು. ಆದ್ರೆ, ರಾಯಚೂರಿನ ರಿಮ್ಸ್ ವೈದ್ಯಕೀಯ ಆಸ್ಪತ್ರೆ ಆಡಳಿತ ಮಂಡಳಿ ಅನ್ಯಾಯ ಮಾಡಿದೆ. ರಿಮ್ಸ್ ಅಧಿಕಾರಿಗಳ ಮೋಸದಾಟದಿಂದ ಈ ವಿಶೇಷಚೇತನ ಸಿದ್ದಪ್ಪ ಸದ್ಯ ಕಂಗಾಲಾಗಿ ಹೋಗಿದ್ದಾನೆ.

ಪುನರ್ವಸತಿ ಯೋಜನೆಯಡಿ ರಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಖಾಲಿ ಇದ್ದ ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಸೇವಾನುಭವ ಸೇರಿದಂತೆ ಎಲ್ಲಾ ರೀತೀಯ ವಿದ್ಯಾರ್ಹತೆ ಹೊಂದಿರುವ ಏಕೈಕ ಅಭ್ಯರ್ಥಿ ಮಾತ್ರ ಅರ್ಜಿ ಹಾಕಿದ್ದ. ನೇಮಕಾತಿ ಆದೇಶ ನೀಡುವಂತೆ ರಾಜ್ಯ ವಿಶೇಷಚೇತನ ಕಲ್ಯಾಣ ಆಯುಕ್ತರು ಮೇ ತಿಂಗಳಲ್ಲೇ ಆದೇಶ ನೀಡಿದ್ರು. ಆದ್ರೆ ಇದುವರೆಗೂ ಆ ಆದೇಶ ಪಾಲನೆ ಆಗಿಲ್ಲ.

ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಎಂ.ಎ ಸೈಕಾಲಜಿ ರ್ಯಾಂಕ್‌ ಅಭ್ಯರ್ಥಿಯಾಗಿದ್ದಲ್ಲದೇ ಕ್ಲಿನಿಕಲ್ ಸೈಕಾಲಜಿಸ್ಟ್‌ ವಿಶೇಷ ವಿಷ್ಯವನ್ನಾಗಿ ಅಭ್ಯಾಸ ಮಾಡಿದ್ದಾನೆ. ಮೇಲಾಗಿ ಗುತ್ತಿಗೆ ಆಧಾರದ ಮೇಲೆ ರಿಮ್ಸ್ ಆಸ್ಪತ್ರೆಯಲ್ಲೇ 3 ವರ್ಷದಿಂದ ಸೇವೆ ಸಹ ಸಲ್ಲಿಸಿದ್ದಾನೆ. ಆದ್ರೂ ಈತನ ಸೇವಾವಧಿಯನ್ನ ಪರಿಗಣಿಸದ ರಿಮ್ಸ್ ವೈದ್ಯಕೀಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದ್ರಿಂದ ರೋಸಿಹೋದ ಸಿದ್ದಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು ತನಗೆ ನ್ಯಾಯ ಒದಗಿಸುವಂತೆ ಕೋರಿದ್ದಾನೆ. ಈತನ ಕೋರಿಕೆಗೆ ಸ್ಪಂದಿಸಿದ ಡಿಸಿಎಂ ಸವದಿ, ಕೂಡಲೇ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಒಟ್ನಲ್ಲಿ ವಿಶೇಷಚೇತನ ಸಿದ್ದಪ್ಪನಿಗೆ ಕಾನೂನು ಬದ್ಧವಾಗಿ ಸಿಗಬೇಕಿದ್ದ ಹುದ್ದೆಯನ್ನ ವಂಚಿಸಲು ರಿಮ್ಸ್ ಯತ್ನಿಸಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಇನ್ನಾದ್ರೂ ಅಂಗವಿಕಲರ ಪುನರ್ವಸತಿ ಯೋಜನೆಯ ಜಿಲ್ಲಾಧ್ಯಕ್ಷರು ಆಗಿರೋ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಹುದ್ದೆ ವಂಚಿತನಿಗೆ ನ್ಯಾಯ ಒದಗಿಸಬೇಕಿದೆ.

Published On - 4:14 pm, Wed, 7 October 20

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ