ಒಂದಲ್ಲ-ಎರಡಲ್ಲ, ಸ್ಯಾಮ್ಸಂಗ್ನ ಈ 4 ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ
Samsung Galaxy Mobile Price Cut: ಸ್ಯಾಮ್‌ಸಂಗ್ ಗ್ಯಾಲಕ್ಸಿ M14 , ಗ್ಯಾಲಕ್ಸಿ F14 , ಗ್ಯಾಲಕ್ಸಿ M04 ಮತ್ತು ಗ್ಯಾಲಕ್ಸಿ F04 ಬೆಲೆಗಳನ್ನು ಅಧಿಕೃತವಾಗಿ ಕಡಿಮೆ ಮಾಡಲಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು.
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್‌ಸಂಗ್ (Samsung) ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವ ಕಂಪನಿ ಆಗಿದೆ. ಪ್ರತಿ ತಿಂಗಳು ಈ ಕಂಪನಿಯ ಫೋನುಗಳು ದೇಶದಲ್ಲಿ ರಿಲೀಸ್ ಆಗುತ್ತವೆ. ಹೀಗೆ ಮೊಬೈಲ್ಗಳು ಅನಾವರಣಗೊಂಡಾಗ ಸ್ಯಾಮ್‌ಸಂಗ್ ತನ್ನ ಹಳೆಯ ಫೋನುಗಳ ಬೆಲೆಯಲ್ಲಿ ಇಳಿಕೆ ಮಾಡುತ್ತದೆ. ಆದರೀಗ ಯಾವುದೇ ಸ್ಮಾರ್ಟ್ಫೋನ್ಸ್ ಬಿಡುಗಡೆ ಮಾಡಿಲ್ಲದಿದ್ದರೂ ಕಂಪನಿ ತನ್ನ ನಾಲ್ಕು ಫೋನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M14 , ಗ್ಯಾಲಕ್ಸಿ F14 , ಗ್ಯಾಲಕ್ಸಿ M04 ಮತ್ತು ಗ್ಯಾಲಕ್ಸಿ F04 ಬೆಲೆಗಳನ್ನು ಅಧಿಕೃತವಾಗಿ ಕಡಿಮೆ ಮಾಡಲಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಈ ಫೋನ್‌ಗಳನ್ನು ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M14, F14, M04 ಮತ್ತು F04 ಭಾರತದ ಬೆಲೆಗಳು:
ಫೋನ್ ಸ್ಟೋರೇಜ್ ಬಿಡುಗಡೆ ಬೆಲೆ ಹೊಸ ಬೆಲೆ
ಗ್ಯಾಲಕ್ಸಿ M14 4GB/128GB 13,490 ರೂ 12,490 ರೂ
ಗ್ಯಾಲಕ್ಸಿ M14 6GB/128GB 14,990 ರೂ 13,990 ರೂ
ಗ್ಯಾಲಕ್ಸಿ F14 4GB/128GB 14,490 ರೂ 11,990 ರೂ
ಗ್ಯಾಲಕ್ಸಿ F14 6GB/128GB 15,990 ರೂ 13,490 ರೂ
ಗ್ಯಾಲಕ್ಸಿ M04 4GB/64GB 8,499 ರೂ 7,999 ರೂ
ಗ್ಯಾಲಕ್ಸಿ F04 4GB/64GB 9,499 ರೂ 7,999 ರೂ
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಫೀಚರ್ಸ್
ಡಿಸ್‌ಪ್ಲೇ : 6.6-ಇಂಚಿನ FHD+ IPS LCD ಜೊತೆಗೆ 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್, ಮತ್ತು ಸೆಲ್ಫಿ ಸ್ನ್ಯಾಪರ್ ಅನ್ನು ಇರಿಸಲು ವಾಟರ್‌ಡ್ರಾಪ್ ನಾಚ್ ನೀಡಲಾಗಿದೆ.
Vivo Y100i Power 5G: ವಿವೋ ಸ್ಮಾರ್ಟ್ಫೋನ್ ಸರಣಿಗೆ ಮತ್ತೊಂದು ಹೊಸ ಸೇರ್ಪಡೆ
ಬ್ಯಾಟರಿ : 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ.
OS : ಈ ಫೋನ್ ಆಂಡ್ರಾಯ್ಡ್ 13-ಆಧಾರಿತ OneUI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರೊಸೆಸರ್ : Exynos 1330 SoC ಗ್ರಾಫಿಕ್ಸ್‌ಗಾಗಿ Mali-G68 MP2 GPU ಜೊತೆಗೆ ಜೋಡಿಸಲಾಗಿದೆ.
RAM/ಸ್ಟೋರೇಜ್ : 4GB LPDDR4x RAM ಮತ್ತು 64GB/128GB ಸಂಗ್ರಹಣೆಯನ್ನು ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾಗಿದೆ.
ಕನೆಕ್ಟಿವಿಟಿ : ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, NFC, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ.
ಇತರೆ : ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್.
ಕ್ಯಾಮೆರಾಗಳು : 50MP ಮುಖ್ಯ ಕ್ಯಾಮೆರಾ, 2MP ಡೆಪ್ತ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಸಂವೇದಕ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 13MP ಸ್ನ್ಯಾಪರ್ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೀಚರ್ಸ್
ಡಿಸ್ ಪ್ಲೇ: 6.6-ಇಂಚಿನ FHD+ ಇನ್ಫಿನಿಟಿ-V LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ.
ಪ್ರೊಸೆಸರ್ : ಎಕ್ಸಿನೊಸ್ 1330 5nm ಪ್ರೊಸೆಸರ್ ಜೊತೆಗೆ Mali-G68 MP2 GPU
RAM/ಸ್ಟೋರೇಜ್ : 4GB/6GB LPDDR4x RAM ಮತ್ತು 128GB ಆಂತರಿಕ ಸಂಗ್ರಹಣೆ, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.
ಕ್ಯಾಮೆರಾಗಳು : f/1.8 ದ್ಯುತಿರಂಧ್ರದೊಂದಿಗೆ 50MP ಪ್ರಾಥಮಿಕ ಸಂವೇದಕ, 2MP ಡೆಪ್ತ್ ಮತ್ತು 2MP ಮ್ಯಾಕ್ರೋ ಸಂವೇದಕ. 13MP ಫ್ರಂಟ್ ಕ್ಯಾಮೆರಾ ಇದೆ.
ಇತರೆ : ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಂಪರ್ಕ : 5G SA/ NSA, ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.2, GPS, ಮತ್ತು USB ಟೈಪ್-C.
ಬ್ಯಾಟರಿ : 6000mAh (ವಿಶಿಷ್ಟ) ಬ್ಯಾಟರಿ ಜೊತೆಗೆ 25W ವೇಗದ ಚಾರ್ಜಿಂಗ್.
ಸ್ಯಾಮ್‌ಸಂಗ್ ಗ್ಯಾಲಕ್ಸಿ F04 ಫೀಚರ್ಸ್
ಡಿಸ್‌ಪ್ಲೇ : 6.5-ಇಂಚಿನ HD+ LCD ಜೊತೆಗೆ 1600x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಸೆಲ್ಫಿ ಶೂಟರ್‌ಗಾಗಿ ವಾಟರ್‌ಡ್ರಾಪ್ ನಾಚ್.
ಪ್ರೊಸೆಸರ್ : IMG PowerVR GE8320 GPU ನೊಂದಿಗೆ ಜೋಡಿಯಾಗಿರುವ ಮೀಡಿಯಾಟೆಕ್ ಹಿಲಿಯೊ P35 SoC ನಿಂದ ಫೋನ್ ಚಾಲಿತವಾಗಿವೆ.
RAM ಮತ್ತು ಸಂಗ್ರಹಣೆ : 4GB RAM ಮತ್ತು 128GB ವರೆಗಿನ ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಕ್ಯಾಮೆರಾಗಳು : f/2.2 ದ್ಯುತಿರಂಧ್ರದೊಂದಿಗೆ 13MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಇದೆ. ಸೆಲ್ಫಿ ಶೂಟರ್‌ಗಾಗಿ ಮುಂಭಾಗದಲ್ಲಿ 5MP ಶೂಟರ್ ಇದೆ.
ಬ್ಯಾಟರಿ : 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Thu, 11 January 24