ಬೆಂಗಳೂರು: ಕೊರೊನಾಗೆ ಕೆಂಗೆಟ್ಟಿರುವ ಸರ್ಕಾರ SSLC ಪರೀಕ್ಷೆ ಮುಗಿಯುವುದನ್ನೇ ಕಾಯ್ತಿತ್ತು ಅನ್ಸುತ್ತೆ. ಇಂದು SSLC ವಿದ್ಯಾರ್ಥಿಗಳ ಕೊನೆಯ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ನಗರದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಕ್ಕೆ ಒಂದೊಂದೆ ಹೆಜ್ಜೆ ಇಡುತ್ತಿದೆ. ಈಗಾಗಲೇ ಕೆ.ಆರ್ ಮಾಡುಕಟ್ಟೆ ಬಂದ್ ಆಗಿದೆ. ಈಗ ಅದೇ ಹಾದಿಯಲ್ಲಿ ಬೆಂಗಳೂರಿನ 2 ವಾರ್ಡ್ಗಳ ಮಾರ್ಕೆಟ್ ಬಂದ್ ಮಾಡಲು ಮುಂದಾಗಿದೆ.
ಶಾಕಾಂಬರಿನಗರ, ಬನಶಂಕರಿ ವಾರ್ಡ್ ಮಾರ್ಕೆಟ್ ಹಾಗೂ ಸಾರಕ್ಕಿ ಮಾರ್ಕೆಟ್ ಬಂದ್ ಮಾಡಲು ಬಿಬಿಎಂಪಿ ಆದೇಶ ನೀಡಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ. ಅಲ್ಲದೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ವ್ಯಾಪಾರ-ವಹಿವಾಟು ನಡೆಯುತ್ತೆ. ಇದ್ರಿಂದ ಕೊರೊನಾ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಾರಕ್ಕಿ ಮಾರುಕಟ್ಟೆ ಬಂದ್ ಮಾಡಲು ನಿರ್ಧರಿಸಲಾಗಿದೆ.
Published On - 1:39 pm, Fri, 3 July 20