ಕೊವಿಡ್-19 ವ್ಯಾಧಿಯನ್ನು ಉಂಟು ಮಾಡುವ ‘ಸಾರ್ಸ್-ಕೊವ್-2’ ( SARS-CoV-2) ಸೋಂಕಿತರು ಚಿಕಿತ್ಸೆ ಪಡೆಯುವ ರೂಮಿನಲ್ಲಿ, ಬೆಡ್ ಮೇಲೆ, ಆ ರೂಮಿನ ನೆಲದ ಮೇಲೆ, ಅವರು ಬಳಸುವ ಬಾತ್ರೂಮು ಮೊದಲಾದ ಕಡೆಗಳಲ್ಲೂ ಇರುತ್ತದೆ ಅನ್ನವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇದುವರೆಗೆ ವಿಜ್ಞಾನಿಗಳಾಗಲೀ, ಸಂಶೋಧಕರಾಗಲೀ ಯಾವ್ಯಾವ ಮೇಲ್ಮೈಗಳ ಮೇಲೆ ವೈರಸ್ ಇರೋದಿಕ್ಕೆ ಸಾಧ್ಯ ಅಂತ ಖಚಿತವಾಗಿ ಹೇಳಿರಲಿಲ್ಲ. ಆದರೆ ಮೈಕ್ರೊಬಯೋಮಿ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದು ‘ಸಾರ್ಸ್-ಕೊವ್-2 ವೈರಸ್ ಆಸ್ಪತ್ರೆಯ ನೆಲ ಮತ್ತು ಗೋಡೆಗಳ ಮೇಲೆ ಇರೋದನ್ನು ವಿವರಿಸುತ್ತದೆ.
ಸಂಶೋಧಕರು ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮೊದಲು, ಅಲ್ಲಿ ಅವರು ಇರುವ ಅವಧಿ ಮತ್ತು ಡಿಸ್ಚಾರ್ಜ್ ಆದ ನಂತರ ಅವರ ಚರ್ಮ, ಮೂಗು ಮತ್ತು ಮಲದ ಸ್ಯಾಂಪಲ್ಗಳನ್ನು ಪದೇಪದೆ ಸಂಗ್ರಹಿಸಿದ್ದಾರೆ. ಅವರ ಸ್ಯಾಂಪಲ್ಗಳೊಂದಿಗೆ ಅವರಿಗೆ ಚಿಕಿತ್ಸೆ ನೀಡಿದ ಆರೋಗ್ಯ ಕಾರ್ಯಕರ್ತರ ಸ್ಯಾಂಪಲ್ಗಳನ್ನೂ ಅವರು ಕಲೆಕ್ಟ್ ಮಾಡಿದ್ದಾರೆ. ವರದಿಯಲ್ಲಿ ಪ್ರಕಟವಾಗಿರುವ ಹಾಗೆ, ಎರಡು ತಿಂಗಳ ಕಾಲ ‘ಸಾರ್ಸ್-ಕೊವ್-2 ವೈರಸ್ ಮತ್ತೆ ಮಾಡುವುದಕ್ಕೋಸ್ಕರ ಆಸ್ಪತ್ರೆಗೆ ಸಂಬಂಧಿಸಿದ 972 ಸ್ಯಾಂಪಲ್ಗಳನ್ನು ಸಂಶೋಧಕರು ಸಂಗ್ರಹಿಸಿದ್ದರು.
ಸಂಶೋಧಕರು ಪರೀಕ್ಷೆಗಳನ್ನು ನಡೆಸಿ ವರದಿ ಮಾಡಿರುವ ಹಾಗೆ ವೈರಸ್ ಅಲ್ಲದಿದ್ದದರೂ ಅದರ ಆನುವಂಶಿಕ ಸ್ವರೂಪ ಪತ್ತೆಯಾಗಿದೆ. ಕೊವಿಡ್ ರೋಗಿಗಳ ಬೆಡ್ ಪಕ್ಕದ ನೆಲದ ಮೇಲೆ (ಟೆಸ್ಟ್ ಮಾಡಿದ ಶೇಕಡಾ 39 ಸ್ಯಾಂಪಲ್ಗಳಲ್ಲಿ), ರೋಗಿಯ ರೂಮಿನ ಹೊರಗಿನ ನೆಲದ ಮೇಲೆ (ಟೆಸ್ಟ್ ಮಾಡಿದ ಶೇಕಡಾ 29 ಸ್ಯಾಂಪಲ್ಗಳಲ್ಲಿ) ಮತ್ತು ರೂಮಿನ ಒಳಭಾಗದ ನೆಲದ ಮೇಲೆ (ಟೆಸ್ಟ್ ಮಾಡಿದ ಶೇಕಡಾ 16 ಸ್ಯಾಂಪಲ್ಗಳಲ್ಲಿ) ವೈರಸ್ ಪತ್ತೆಯಾಗಿದೆ, ರೋಗಿಯಲ್ಲಿ ಸೋಂಕು ಕಾಣಿಸಿಕೊಂಡ ಮೊದಲ ಐದು ದಿನಗಳ ಅವದಧಿಯಲ್ಲಿ ವೈರಸ್ನ ಪತ್ತೆ ಜಾಸ್ತಿಯಾಗಿತ್ತು ಎಂದು ಅವರ ಸಂಶೋಧನೆ ಹೇಳುತ್ತದೆ.
ತಾವು ವೈರಸ್ನ ಆನುವಂಶಿಕ ಸ್ವರೂಪವನ್ನು ನೆಲ ಮತ್ತು ಇತರ ಭಾಗಗಳಲ್ಲಿ ಪತ್ತೆ ಮಾಡಿರುವ ಹಿನ್ನೆಲೆಯಲ್ಲೇ ಅದಕ್ಕೆ ಜನರಲ್ಲಿ ಸೋಂಕು ಉಂಟುಮಾಡಲು ಸಾಧ್ಯವಾಗುತ್ತಿದೆ ಅಂತ ಭಾವಿಸಬಾರದೆಂದು ಸಂಶೋಧಕರು ಹೇಳಿದ್ದಾರೆ.
ವಿಜ್ಞಾನಿಗಳು ಕೊರೋನಾ ವೈರಸ್ ಬಗ್ಗೆ ಸಂಶೋಧನೆ ಶುರು ಮಾಡಿದಾಗಿನಿಂದ ಈ ಸೋಂಕು ಮಾನವರ ನಡುವಿನ ಒಡನಾಟ, ಸಂಪರ್ಕದಿಂದ ಹರಡುತ್ತದೆ ಎಂದು ಹೇಳುತ್ತಾ ಬಂದಿದ್ದಾರೆ. ನೆಲದ ಮೇಲಾಗಲಿ ಅಥವಾ ಇನ್ಯಾವುದೇ ವಸ್ತುವಿನ ಮೇಲ್ಮೈಯಲ್ಲಿರಬಹುದಾದ ವೈರಸ್ನಿಂದ ಸೋಂಕು ಹರಡೋದು ಬಹಳ ಅಪರೂಪ ಎಂದು ಅವರು ಹೇಳುತ್ತಾರೆ. ಅವರು ಸಂಶೋಧನೆಗಾಗಿ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗಳನ್ನು ನಡೆಸಿದಾಗ, ರೋಗಿಗಳ ಆರೈಕೆಯಲ್ಲಿದ್ದವರ ಪೈಕಿ ಯಾರೊಬ್ಬರೂ ಸೋಂಕಿಗೊಳಗಾಗಲಿಲ್ಲ ಅನ್ನುವುದು ಪತ್ತೆಯಾಗಿದೆ.
ಈ ಅಧ್ಯಯನಕ್ಕಾಗಿ ಸಂಶೋಧಕರು ಕೇವಲ ಒಂದು ಆಸ್ಪತ್ರೆಯಿಂದ ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದರು, ಅದರೆ ಅವರು ಹೇಳುವ ಪ್ರಕಾರ ಕೊವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಆರೈಕೆ ಮಾಡುತ್ತಿರುವ ಯಾವುದೇ ಆಸ್ಪತ್ರೆಗಳ ನೆಲ ಮತ್ತು ಇತರ ವಸ್ತುಗಳು ಮೇಲ್ಮೈಗಳನ್ನು ಪರಿಕ್ಷಿಸಿದರೂ ಇದೇ ಬಗೆಯ ಫಲಿತಾಂಶಗಳು ಲಭ್ಯವಾಗಲಿವೆ ಎಂದು ಅವರು ಹೇಳುತ್ತಾರೆ.