ಪ್ರಕಾಶ್ ಹುಕ್ಕೇರಿ ಹೇಳಿಕೆ ನಿಜಕ್ಕೂ ಆಶ್ಚರ್ಯಕರವಾಗಿದೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕುಸ್ತಿ ಹಿಡಿಯಲು ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ. ಪ್ರಕಾಶ್ ಹುಕ್ಕೇರಿ ಬೇಕಿದ್ದರೆ ಚಿಕ್ಕೋಡಿ ಕ್ಷೇತ್ರದಲ್ಲಿಯೇ ಕುಸ್ತಿ ಹಿಡಿಯಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪ್ರಕಾಶ ಹುಕ್ಕೇರಿ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಹೇಳಿಕೆಗೆ ಗೋಕಾಕ ನಗರದ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಸತೀಶ್ ಚಿಕ್ಕೋಡಿ ಕ್ಷೇತ್ರ ಪ್ರಕಾಶ್ಗೆ ಯಾವಾಗಲೂ ಓಪನ್ ಇದೆ. ಅಲ್ಲಿ ಹಿಡಿತ ಸಾಧಿಸಲು ಇನ್ನು ಮೂರು ವರ್ಷ ಸಮಯವಿದೆ. ಅದಷ್ಟರಲ್ಲಿ ಗಟ್ಟಿ ಮಾಡಿಕೊಂಡು ಕುಸ್ತಿ ಹಿಡಿಯಲಿ ಎಂದು ಹೇಳಿದರು. […]

ಬೆಳಗಾವಿ: ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕುಸ್ತಿ ಹಿಡಿಯಲು ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ. ಪ್ರಕಾಶ್ ಹುಕ್ಕೇರಿ ಬೇಕಿದ್ದರೆ ಚಿಕ್ಕೋಡಿ ಕ್ಷೇತ್ರದಲ್ಲಿಯೇ ಕುಸ್ತಿ ಹಿಡಿಯಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪ್ರಕಾಶ ಹುಕ್ಕೇರಿ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಹೇಳಿಕೆಗೆ ಗೋಕಾಕ ನಗರದ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಸತೀಶ್ ಚಿಕ್ಕೋಡಿ ಕ್ಷೇತ್ರ ಪ್ರಕಾಶ್ಗೆ ಯಾವಾಗಲೂ ಓಪನ್ ಇದೆ. ಅಲ್ಲಿ ಹಿಡಿತ ಸಾಧಿಸಲು ಇನ್ನು ಮೂರು ವರ್ಷ ಸಮಯವಿದೆ. ಅದಷ್ಟರಲ್ಲಿ ಗಟ್ಟಿ ಮಾಡಿಕೊಂಡು ಕುಸ್ತಿ ಹಿಡಿಯಲಿ ಎಂದು ಹೇಳಿದರು.
ಒಂದು ಪಕ್ಷದಲ್ಲಿ ಇದ್ದುಕೊಂಡು ಮತ್ತೊಂದು ಪಕ್ಷಕ್ಕೆ ಸಪೋರ್ಟ್ ಮಾಡುವುದು ಸರಿಯಲ್ಲ. ಹಿರಿಯ ಮುಖಂಡರಾಗಿರುವ ಹುಕ್ಕೇರಿ ಜಿಲ್ಲಾ ಪಂಚಾಯಿತಿಯಿಂದ ಹಿಡಿದು ಎಲ್ಲ ಹುದ್ದೆಗಳನ್ನು ಕಾಂಗ್ರೆಸ್ನಲ್ಲಿರುವುವಾಗ ಅನುಭವಿಸಿದ್ದಾರೆ. ಇನ್ನೊಂದು ಪಕ್ಷಕ್ಕೆ ಸಪೋರ್ಟ್ ಮಾಡುವುದಾಗಿ ಹೇಳಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಹೈಕಮಾಂಡ್ ಕೂಡ ಇದನ್ನು ಗಮನಿಸಿರುತ್ತದೆ. ನಿರ್ಧಾರ ತಗೆದುಕೊಳ್ಳುವುರು ಅವರಿಗೆ ಬಿಟ್ಟದ್ದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಂಗಡಿ ಮನೇವ್ರಿಗೆ ಬಿಜೆಪಿ ಟಿಕೆಟ್ ಕೊಡ್ಲಿ.. ನಾನು ಗೆಲ್ಲಿಸ್ತೇನೆ- ಕೈ ನಾಯಕ ಹುಕ್ಕೇರಿ ಹೈಕಮಾಂಡಿಗೆ ಸವಾಲ್!
‘ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ’ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಇನ್ನು ಸಭೆ ನಡೆಸಬೇಕಿದೆ. ಶಿರಾ, ಆರ್.ಆರ್. ನಗರ ಬೈ ಎಲೆಕ್ಷನ್ ಬಳಿಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಸತೀಶ್ ಹೇಳಿದರು.
ಇತ್ತ, ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಲಖನ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ. ಸ್ಪರ್ಧೆ ಮಾಡುವುದಾಗಿಯೂ ಆಸಕ್ತಿ ತೋರಿಲ್ಲ. ಅವರು ಸ್ಪರ್ಧೆ ಮಾಡಲ್ಲ ಅಂತಾ ಹೇಳಿದರು..
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ಚುನಾವಣೆಯಲ್ಲಿ ಮೊದಲು ಕಾಂಗ್ರೆಸ್ ಪಕ್ಷದಿಂದ 113 ಶಾಸಕರು ಆಯ್ಕೆಯಾಗಬೇಕು. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಸಿಎಂ ಆಯ್ಕೆ ಮಾಡುತ್ತದೆ. ಇದು ಪಕ್ಷದ ನಿಯಮ. ಮುಂದಿನ ಮುಖ್ಯಮಂತ್ರಿ ಎಂಬ ಪ್ರಶ್ನೆಯೇ ಮಹತ್ವದಲ್ಲ. ಯಾರಿದ್ದರೂ ಪಕ್ಷ ಸಂಘಟನೆ ಮಾಡಬೇಕು. ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.