ಹಣಕ್ಕಾಗಿ ಇಬ್ಬರ ಕಚ್ಚಾಟ.. ಜನರಿಗೆ ದೊಂಬರಾಟ.. ವಾಹನ ಸವಾರರಿಗೆ ಪರದಾಟ

ನೆಲಮಂಗಲ: ಹಣದ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾದ ಹಿನ್ನೆಲೆಯಲ್ಲಿ ಗಲಾಟೆ ನೋಡಲು ಜನ ಮುಗಿಬಿದ್ದು ಟ್ರಾಫಿಕ್​ ಜಾಮ್ ಉಂಟಾದ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ನೆಲಮಂಗಲ ಟೌನ್​ನ ಟಿ.ಬಿ. ಸ್ಟಾಪ್ ಬಳಿ ನಡೆದಿದೆ. ರವಿ ಹಾಗೂ ನಾಗೇಂದ್ರ ಎಂಬ ಸುಭಾಷ್ ನಗರದ ನಿವಾಸಿಗಳು ಹಣದ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಬ್ಯಾಗ್ ಹೊಲಿಯುವ  ವೃತ್ತಿಯಲ್ಲಿದ್ದು ರವಿಗೆ ಕೊಡಬೇಕಿದ್ದ ಹಣವನ್ನು ಕೊಡದೆ ನಾಗೇಂದ್ರ ಸತಾಯಿಸುತ್ತಿದ್ದನಂತೆ. ಹಾಗಾಗಿ, ಇಂದು ಬೈಕ್​ನಲ್ಲಿ ಬರುತ್ತಿದ್ದ ನಾಗೇಂದ್ರನನ್ನ ಅಡ್ಡಗಟ್ಟಿದ ರವಿ ಆತನ ಕೊರಳ ಪಟ್ಟಿ ಹಿಡಿದು ಕೈ […]

ಹಣಕ್ಕಾಗಿ ಇಬ್ಬರ ಕಚ್ಚಾಟ.. ಜನರಿಗೆ ದೊಂಬರಾಟ.. ವಾಹನ ಸವಾರರಿಗೆ ಪರದಾಟ

Updated on: Oct 21, 2020 | 12:53 PM

ನೆಲಮಂಗಲ: ಹಣದ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾದ ಹಿನ್ನೆಲೆಯಲ್ಲಿ ಗಲಾಟೆ ನೋಡಲು ಜನ ಮುಗಿಬಿದ್ದು ಟ್ರಾಫಿಕ್​ ಜಾಮ್ ಉಂಟಾದ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ನೆಲಮಂಗಲ ಟೌನ್​ನ ಟಿ.ಬಿ. ಸ್ಟಾಪ್ ಬಳಿ ನಡೆದಿದೆ.

ರವಿ ಹಾಗೂ ನಾಗೇಂದ್ರ ಎಂಬ ಸುಭಾಷ್ ನಗರದ ನಿವಾಸಿಗಳು ಹಣದ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಬ್ಯಾಗ್ ಹೊಲಿಯುವ  ವೃತ್ತಿಯಲ್ಲಿದ್ದು ರವಿಗೆ ಕೊಡಬೇಕಿದ್ದ ಹಣವನ್ನು ಕೊಡದೆ ನಾಗೇಂದ್ರ ಸತಾಯಿಸುತ್ತಿದ್ದನಂತೆ.

ಹಾಗಾಗಿ, ಇಂದು ಬೈಕ್​ನಲ್ಲಿ ಬರುತ್ತಿದ್ದ ನಾಗೇಂದ್ರನನ್ನ ಅಡ್ಡಗಟ್ಟಿದ ರವಿ ಆತನ ಕೊರಳ ಪಟ್ಟಿ ಹಿಡಿದು ಕೈ ಕೈಮಿಲಾಯಿಸಲು ಯತ್ನಿಸಿದ್ದಾನೆ. ಇಬ್ಬರ ಜಗಳ ನೋಡಲು ಸೇರಿದ್ದ ಮಂದಿಯಿಂದ ಟ್ರಾಫಿಕ್ ಜಾಮ್ ಉಂಟಾಯಿತು.

Published On - 12:40 pm, Wed, 21 October 20