
ನೆಲಮಂಗಲ:ಹಾಡಹಗಲೇ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಇಬ್ಬರು ವೃದ್ಧೆಯರ ಬಂಗಾರದ ಸರಗಳನ್ನು ಕದ್ದೊಯ್ದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೇನಹಳ್ಳಿ, ತಿಮ್ಮಭೋವಿಪಾಳ್ಯದಲ್ಲಿ ಈ ಎರಡೂ ಪ್ರತ್ಯೇಕ ಪ್ರಕರಣಗಳು ನಡೆದಿವೆ.
ರಸ್ತೆ ಬಳಿ ನಡೆದು ಹೋಗುವಾಗ ಸರ ಕಿತ್ಕೊಂಡು ಪರಾರಿ
ಗಿಡ್ಡೇನಹಳ್ಳಿ ಬಳಿ ಮುನಿಯಮ್ಮ(60) ಎಂಬುವವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮುನಿಯಮ್ಮ ಅವರ ಚಿನ್ನದ ಸರ 2 ಲಕ್ಷ ಬೆಲೆಬಾಳುವುದೆಂದು ಅಂದಾಜಿಸಲಾಗಿದೆ. ನಂತರ ತಿಮ್ಮಭೋವಿಪಾಳ್ಯದಲ್ಲಿ ಹೊನ್ನಮ್ಮ(72) ಎಂಬುವವರು ಧರಿಸಿದ್ದ 30 ಗ್ರಾಂ ಮಾಂಗಲ್ಯಕ್ಕೆ ಕೈಹಾಕಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:34 am, Thu, 8 October 20