ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು
ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ. ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು. ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ […]
ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ.
ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು.
ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ ಪ್ರವಾಹದಿಂದ ಕಳೆದ 3 ದಿನದಿಂದ ಕಟ್ಟಡದಲ್ಲಿಯೇ ಸಿಲುಕಿಕೊಂಡಿದ್ದಾರೆ. ಇಷ್ಟು ದಿನ ಕಳೆದರೂ ಅವರ ಸಹಾಯಕ್ಕಾಗಿ ಯಾರು ಮುಂದಾಗಿಲ್ಲ.