ಶಾಮನೂರು ಶಿವಶಂಕರಪ್ಪ ಮಗನ BMW ಕಾರು ಅಪಘಾತ, ಬೈಕ್ ಸವಾರ ಸಾವು

  • TV9 Web Team
  • Published On - 13:22 PM, 20 Nov 2019
ಶಾಮನೂರು ಶಿವಶಂಕರಪ್ಪ ಮಗನ BMW ಕಾರು ಅಪಘಾತ, ಬೈಕ್ ಸವಾರ ಸಾವು

ನೆಲಮಂಗಲ: ಶಾಮನೂರು ಶಿವಶಂಕರಪ್ಪ ಮಗ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ದಾಬಸ್​ಪೇಟೆ ಕೈಗಾರಿಕಾ ಪ್ರದೇಶದ ಬಳಿ ಮಾಜಿ ಸಜಿವ ಶಾಮನೂರು ಶಿವಶಂಕರಪ್ಪನವರ ಮೂರನೇ ಮಗ ಗಣೇಶ್, ವಿರೇಂದ್ರ ಮತ್ತು ಕಾರ್ ಚಾಲಕ ಮಂಜುನಾಥ್ ಅವರುಗಳು ಬಿಎಂಡಬ್ಲ್ಯು ಕಾರಿನಲ್ಲಿ ತುಮಕೂರು ರಸ್ತೆಯಿಂದ ಸಂಚರಿಸುವಾಗ ಬೈಕ್​ಗೆ ಕಾರು ಡಿಕ್ಕಿಯಾಗಿದೆ.

ಅಪಘಾತದಲ್ಲಿ ಬೈಕ್ ಚಾಲಕ 50 ವರ್ಷದ ಯೋಗಾನಂದ ಮೃತಪಟ್ಟಿದ್ದು, ಶಾಮನೂರು ಶಿವಶಂಕರಪ್ಪ ಮಗನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.