
ಶನಿವಾರದಂದು ಕೊನೆಗೊಂಡ ಅಡಿಲೇಡ್ ಟೆಸ್ಟ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ಬೌನ್ಸರ್ ಒಂದರಿಂದ ಬಲಗೈ ಮೂಳೆ ಮುರಿದುಕೊಂಡಿರುವ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಉಳಿದ ಮೂರು ಟೆಸ್ಟ್ಗಳಿಂದ ಹೊರಬಿದ್ದಿದಾರೆ.
ಮೈದಾನದಲ್ಲಿ ಶಮಿ ಅನುಭವಿದ ಅಸಹನೀಯ ನೋವು ಮೂಳೆ ಮುರಿತದ ಪರಿಣಾಮ ಎಂದು ಟೀಮ್ ಇಂಡಿಯಾದ ಮೂಲದಿಂದ ಗೊತ್ತಾಗಿದೆ.
‘‘ಹೌದು, ಶಮಿಯ ಮೂಳೆ ಮುರಿದಿದೆ, ಹಾಗಾಗೆ ಅವರು ಬ್ಯಾಟನ್ನು ಹಿಡಿಯಲಾಗಲೀ ಎತ್ತಲಾಗಲೀ ಸಾಧ್ಯವಾಗಲಿಲ್ಲ, ಅವರು ಅನುಭವಿಸುತ್ತಿದ್ದ ನೋವು ಗಮನಿದಾಗಲೇ ನಮಗೆ ಗಂಭೀರವಾದ ಸಮಸ್ಯೆಯಿದೆ ಅಂತೆನಿಸಿತ್ತು. ನಮ್ಮ ಆತಂಕ ನಿಜವಾಗಿದೆ,’’ ಎಂದು ಮೂಲ ತಿಳಿಸಿದೆ.
ಇಂದು ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಶಮಿಯ ಗಾಯ ಕುರಿತು ಮಾತಾಡುವಾಗ ಸ್ಕ್ಯಾನಿಂಗ್ ಮಾಡುವ ಸಾಧ್ಯತೆಯನ್ನು ಹೇಳಿದ್ದರು.