ನಟನಾಗುವ ಮೊದಲು ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶರಣ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2021 | 6:48 PM

ಸೆಟ್​ಗಳಲ್ಲಿ ಅವರು ಸಿನಿಮಾ ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿರುತ್ತಾರಂತೆ, ಪುರಷೋತ್ತಮ ಚಿತ್ರಕ್ಕೆ ಮ್ಯೂಸಿಕ್ ಸಂಯೋಜನೆ ಮಾಡುತ್ತಿರುವವರು ಶ್ರೀಧರ್ ಸಂಭ್ರಮ್. ಶರಣ್ ಅವರ ‘ಜಯಲಲಿತಾ’ ಚಿತ್ರಕ್ಕೂ ಶ್ರೀಧರ್ ಅವರೇ ಸಂಗೀತ ನಿರ್ದೇಶನ ಮಾಡಿದವರು.

ಮತ್ತೊಮ್ಮೆ ಶರಣ್ ಅವರ ಬಗ್ಗೆ ಮಾತು. ‘ಪುರುಷೋತ್ತಮ’ ಚಿತ್ರದ ಆಡಿಯೋ ರಿಲೀಸ್ ಸಂದರ್ಭದಲ್ಲಿ ಅವರು ಕೇವಲ ಜಿಮ್ ರವಿ ಕೇವಲ ತನ್ನ ದಾಖಲೆ ಮುರಿದ ಬಗ್ಗೆ ಮಾತಾಡದೆ ತಮ್ಮ ಸಿನಿಮಾ ಲೋಕದ ಪಯಣದ ಬಗ್ಗೆಯೂ ಮಾತಾಡಿದರು. ಶರಣ್ ಅಭಿಮಾನಿಗಳಿಗೆ ಅವರೊಬ್ಬ ಉತ್ತಮ ಗಾಯಕ ಅಂತ ಗೊತ್ತಿರುತ್ತೆ. ತಾನು ಚಿತ್ರರಂಗ ಪ್ರವೇಶಿಸುವ ಮೊದಲು ಆರ್ಕೆಸ್ಟ್ರಾ ಒಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಶರಣ್ ಸೋಮವಾರ ಹೇಳಿದರು. ಅವರೇ ಹೇಳುವಂತೆ ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಶರಣ್ ತಮ್ಮ ಸ್ಟ್ರಗ್ಲಿಂಗ್ ದಿನಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಮಾತಾಡುತ್ತಾರೆ. ಅವರದ್ದು ಡೌನ್ ಟು ಅರ್ಥ್ ಸ್ವಭಾವ ಅನ್ನೋದಿಕ್ಕೆ ಬೇರೆ ಉದಾಹರಣೆ ಬೇಕೆ?

ಸೆಟ್​ಗಳಲ್ಲಿ ಅವರು ಸಿನಿಮಾ ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿರುತ್ತಾರಂತೆ, ಪುರಷೋತ್ತಮ ಚಿತ್ರಕ್ಕೆ ಮ್ಯೂಸಿಕ್ ಸಂಯೋಜನೆ ಮಾಡುತ್ತಿರುವವರು ಶ್ರೀಧರ್ ಸಂಭ್ರಮ್. ಶರಣ್ ಅವರ ‘ಜಯಲಲಿತಾ’ ಚಿತ್ರಕ್ಕೂ ಶ್ರೀಧರ್ ಅವರೇ ಸಂಗೀತ ನಿರ್ದೇಶನ ಮಾಡಿದವರು. ಆ ಚಿತ್ರದ ‘ದಿಲ್ ಗೆ ದಿಲ್ ಗೆ..’ ಜನಪ್ರಿಯ ಹಾಡನ್ನು ಶರಣ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ನಾನು ಮೊದಲಿ ಗಾಯಕ ನಂತರ ನಟ ಅಂತ ಬಹಳ ಹೆಮ್ಮೆಯಿಂದ ಅವರು ಹೇಳಿಕೊಂಡರು.

ಅಂದಹಾಗೆ, ‘ಪುರುಷೋತ್ತಮ’ ಚಿತ್ರದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಬಾಡಿ ಬಿಲ್ಡರ್ ರವಿ (ಇವರು ಚಿತ್ರರಂಗದಲ್ಲಿ ಜಿಮ್ ರವಿ ಅಂತಲೇ ಖ್ಯಾತರು) ಮೊದಲ ಬಾರಿಗೆ ನಾಯಕ ನಟನಾಗಿ ನಟಿಸನಿದ್ದಾರೆ. ಚಿತ್ರದ ನಿರ್ಮಾಣ ಸಹ ಅವರದ್ದೇ ಹೊಣೆಗಾರಿಕೆ. ದಿಲ್ದಾರ್ ಚಿತ್ರದ ಮೂಲಕ ಹೆಸರು ಮಾಡಿದ್ದ ಎಸ್ ವಿ ಅಮರನಾಥ ‘ಪುರುಷೋತ್ತಮ’ ಚಿತ್ರವನ್ನು ದಿಗ್ದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: Kichcha Sudeepa: ಕಿಚ್ಚನಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ ರಾಜಸ್ಥಾನ್ ರಾಯಲ್ಸ್; ವಿಡಿಯೊ ನೋಡಿ