AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದ ಬಚ್ಚೇಗೌಡ ಪುತ್ರ-ಸೊಸೆಗೆ ಕೊರೊನಾ ಪಾಸಿಟೀವ್

ಬೆಂಗಳೂರು: ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಖುದ್ದು ಶರತ್​ ಬಚ್ಚೇಗೌಡ ಮಾಹಿತಿ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕೈ, ಕಾಲುಗಳಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಂಪತಿಯಿಬ್ಬರು ಕೊವಿಡ್​ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಪಾಸಿಟಿವ್ ಎಂದು ವರದಿಯಾಗಿದೆ. ಸದ್ಯಕ್ಕೆ, ಶರತ್​ ಮತ್ತು ಅವರ ಪತ್ನಿ ತಮ್ಮ ಬೆಂಗಳೂರಿನ ನಿವಾಸದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರವಷ್ಟೇ ಶಾಸಕ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ‌ ನೀಡಿ ಪರಿಶೀಲ‌ನೆ ನಡೆಸಿದ್ದರು. ಇದೇ […]

ಸಂಸದ ಬಚ್ಚೇಗೌಡ ಪುತ್ರ-ಸೊಸೆಗೆ ಕೊರೊನಾ ಪಾಸಿಟೀವ್
KUSHAL V
| Updated By: |

Updated on:Jul 08, 2020 | 10:35 PM

Share

ಬೆಂಗಳೂರು: ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಖುದ್ದು ಶರತ್​ ಬಚ್ಚೇಗೌಡ ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಕೈ, ಕಾಲುಗಳಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಂಪತಿಯಿಬ್ಬರು ಕೊವಿಡ್​ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಪಾಸಿಟಿವ್ ಎಂದು ವರದಿಯಾಗಿದೆ.

ಸದ್ಯಕ್ಕೆ, ಶರತ್​ ಮತ್ತು ಅವರ ಪತ್ನಿ ತಮ್ಮ ಬೆಂಗಳೂರಿನ ನಿವಾಸದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರವಷ್ಟೇ ಶಾಸಕ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ‌ ನೀಡಿ ಪರಿಶೀಲ‌ನೆ ನಡೆಸಿದ್ದರು. ಇದೇ ವೇಳೆ ಇವರಿಗೆ ಸೋಂಕು ತಗಲಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಜೊತೆಗೆ, ಶಾಸಕರ ಬೆಂಬಲಿಗರಿಗೂ ಸೋಂಕು ಹರಡಿರಬಹುದು ಎಂಬ ಸಂಶಯವೂ ಶುರುವಾಗಿದೆ.

https://www.facebook.com/SBG4Hosakote/posts/2738511076426389

Published On - 6:30 pm, Wed, 8 July 20