ಹಾವೇರಿಯಲ್ಲಿ ಟಗರು ಫೈಟ್​: ಡಿಚ್ಚಿ ಸದ್ದಿಗೆ ರಂಗೇರಿದ ಅಖಾಡ

ಹಾವೇರಿ: ಸುತ್ತಲು ಜನ.. ಶಿಳ್ಳೆ, ಕೇಕೆಯ ಸದ್ದು. ನಡುವಲ್ಲಿ ಹುಚ್ಚೆದ್ದು ಗುದ್ದಾಡ್ತಿರೋ ಟಗರುಗಳು. ಇಷ್ಟೆಲ್ಲಾ ಇದ್ಮೇಲೆ ಇಲ್ಲಿ ಮನರಂಜನೆಗೆ ಕೊರತೆಯೇ ಇರಲ್ಲ. ಇಂತಹ ಟಗರು ಫೈಟ್​ಗೆ ಅಖಾಡ ಸಿದ್ಧವಾಗಿದ್ದು ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕನಗರದಲ್ಲಿ. ವಿನಾಯಕ ಸ್ನೇಹ ಬಳಗದವರು ರಾಜ್ಯಮಟ್ಟದ ಟಗರಿನ ಕಾಳಗ ನಡೆಸಿದ್ರು. ಹಾಲು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹೀಗೆ ವಿವಿಧ ಹಂತಗಳಲ್ಲಿ ಕಾಳಗ ನಡೀತು. ಶಿಳ್ಳೆ, ಕೇಕೆಗಳ ನಡುವೆ ಹೈವೋಲ್ಟೇಜ್ ಕಾಳಗ:  ಪ್ರಥಮ, ದ್ವಿತೀಯ ಮತ್ತು […]

ಹಾವೇರಿಯಲ್ಲಿ ಟಗರು ಫೈಟ್​: ಡಿಚ್ಚಿ ಸದ್ದಿಗೆ ರಂಗೇರಿದ ಅಖಾಡ
Follow us
ಸಾಧು ಶ್ರೀನಾಥ್​
|

Updated on: Jan 19, 2020 | 7:58 PM

ಹಾವೇರಿ: ಸುತ್ತಲು ಜನ.. ಶಿಳ್ಳೆ, ಕೇಕೆಯ ಸದ್ದು. ನಡುವಲ್ಲಿ ಹುಚ್ಚೆದ್ದು ಗುದ್ದಾಡ್ತಿರೋ ಟಗರುಗಳು. ಇಷ್ಟೆಲ್ಲಾ ಇದ್ಮೇಲೆ ಇಲ್ಲಿ ಮನರಂಜನೆಗೆ ಕೊರತೆಯೇ ಇರಲ್ಲ. ಇಂತಹ ಟಗರು ಫೈಟ್​ಗೆ ಅಖಾಡ ಸಿದ್ಧವಾಗಿದ್ದು ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕನಗರದಲ್ಲಿ. ವಿನಾಯಕ ಸ್ನೇಹ ಬಳಗದವರು ರಾಜ್ಯಮಟ್ಟದ ಟಗರಿನ ಕಾಳಗ ನಡೆಸಿದ್ರು. ಹಾಲು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹೀಗೆ ವಿವಿಧ ಹಂತಗಳಲ್ಲಿ ಕಾಳಗ ನಡೀತು.

ಶಿಳ್ಳೆ, ಕೇಕೆಗಳ ನಡುವೆ ಹೈವೋಲ್ಟೇಜ್ ಕಾಳಗ:  ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಟಗರುಗಳಿಗೆ ಬೆಳ್ಳಿ ಚೈನ್, ಬೆಳ್ಳಿ ಉಂಗುರ, ಬೆಳ್ಳಿ ಖಡ್ಗ ಹೀಗೆ ಬಹುಮಾನಗಳನ್ನ ಇಡಲಾಗಿತ್ತು. ಹೀಗಾಗಿ ಹಾವೇರಿ, ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಟಗರುಗಳು ಕಾಳಗದಲ್ಲಿ ಭಾಗವಹಿಸಿದ್ದವು. ಇನ್ನು, ಟಗರಿನ ಕಾಳಗಕ್ಕೆ ಅಂತ್ಲೇ ಮಾಲೀಕರು ಟಗರುಗಳನ್ನ ತಯಾರು ಮಾಡಿರ್ತಾರೆ. ಟಗರುಗಳಿಗೆ ಪೌಷ್ಠಿಕಾಂಶಭರಿತ ಪದಾರ್ಥಗಳನ್ನ ತಿನ್ನಿಸಿ ಬೆಳಸ್ತಾರೆ. ಅಷ್ಟೇ ಅಲ್ಲ, ಕೆಲವರು ಟಗರುಗಳಿಗೆ ಚಲನಚಿತ್ರದ ಹೆಸರುಗಳನ್ನ ಇಟ್ಟಿದ್ರೆ, ಕೆಲವರು ತಮ್ಮ ನೆಚ್ಚಿನ ನಟರ ಹೆಸರುಗಳನ್ನ ಇಟ್ಟಿದ್ರು. ಅದ್ರಂತೆ ಸಂಘಟಕರು ಟಗರಿನ ಹೆಸರು ಕೂಗಿ ಕತೀತಿದ್ದಂತೆ ಟಗರಿನ ಮಾಲೀಕರು ಟಗರುಗಳನ್ನ ಅಖಾಡಕ್ಕೆ ಕರೆತರುತ್ತಾರೆ.

ಕೆಲವು ಟಗರುಗಳು ಎದುರಾಳಿ ಟಗರಿನ ಹೆದರಿ ಅಖಾಡದಿಂದ ಓಡಿ ಹೋದ್ರೆ, ಕೆಲವು ಟಗರುಗಳು ಸಖತ್ ಆಗಿ ಡಿಚ್ಚಿ ಹೊಡಿತಿದ್ವು. ಕೆಲವಂತೂ ನಾನಾ.. ನೀನಾ ನೋಡೇ ಬಿಡೋಣ ಅಂತಾ ಡಿಚ್ಚಿ ಹೊಡೆದದ್ದೇ ಹೊಡೆದಿದ್ದು. ಅದೇನೆ ಇರಲಿ, ಟಗರು ಕಾಳಗ ನೋಡಿದ ಜನರಂತೂ ಫುಲ್ ಎಂಜಾಯ್ ಮಾಡಿದ್ರು. ಶಿಳ್ಳೆ ಹಾಗೂ ಚಪ್ಪಾಳೆ ಹೊಡೆದು ಖುಷಿಪಟ್ರು.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್