ಮಹಿಳಾ ಕಂಡಕ್ಟರ್ಸ್​ಗೆ BMTCಯಿಂದ ಗುಡ್‌ ನ್ಯೂಸ್.. ಇವತ್ತಿನಿಂದ ಶಿಫ್ಟ್​ ವೈಸ್ ಕೆಲಸ

|

Updated on: Feb 12, 2021 | 9:57 AM

Shift Wise Work for BMTC Women Conductors | ಇವತ್ತಿನಿಂದ ಮಹಿಳಾ ಸಿಬ್ಬಂದಿಗೆ ಶಿಫ್ಟ್ ಹಾಕಲು ಬಿಎಂಟಿಸಿ ನಿರ್ಧರಿಸಿದೆ. ವಿಶೇಷವಾಗಿ ಗರ್ಭಿಣಿಯರು, ಚಿಕ್ಕ ಮಕ್ಕಳಿರುವ ಮಹಿಳಾ ಸಿಬ್ಬಂದಿಗೆ ಅನುಕೂಲವಾಗುವ ಶಿಫ್ಟ್‌ಗೆ ಒಪ್ಪಿಗೆ ನೀಡಿದ್ದು ಬಿಎಂಟಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ಸಿಟಿಎಂರಿಂದ ಎಲ್ಲಾ ಬಿಎಂಟಿಸಿ ಡಿಸಿಗಳಿಗೆ ಸುತ್ತೋಲೆ ಕಳಿಸಲಾಗಿದೆ.

ಮಹಿಳಾ ಕಂಡಕ್ಟರ್ಸ್​ಗೆ BMTCಯಿಂದ ಗುಡ್‌ ನ್ಯೂಸ್.. ಇವತ್ತಿನಿಂದ ಶಿಫ್ಟ್​ ವೈಸ್ ಕೆಲಸ
BMTC ಮಹಿಳಾ ನಿರ್ವಾಹಕಿಯರಿಗೆ ಮೊದಲ ಪಾಳಿ, ಸಾಮಾನ್ಯ ಪಾಳಿ ನೀಡುವುದಕ್ಕೆ ಸುತ್ತೋಲೆ
Follow us on

ಬೆಂಗಳೂರು: ಮಹಿಳಾ ನಿರ್ವಾಹಕಿಯರಿಗೆ BMTC ಕೊನೆಗೂ ಗುಡ್ ‌ನ್ಯೂಸ್ ಕೊಟ್ಟಿದೆ. ಇವತ್ತಿನಿಂದ ಮಹಿಳಾ ಸಿಬ್ಬಂದಿಗೆ ಶಿಫ್ಟ್ ಹಾಕಲು ಬಿಎಂಟಿಸಿ ನಿರ್ಧರಿಸಿದೆ. ಮೊದಲ ಪಾಳಿ, ಸಾಮಾನ್ಯ ಪಾಳಿ ನೀಡುವುದಕ್ಕೆ ಸುತ್ತೋಲೆ ಕಳಿಸಿದೆ. ವಿಶೇಷವಾಗಿ ಗರ್ಭಿಣಿಯರು, ಚಿಕ್ಕ ಮಕ್ಕಳಿರುವ ಮಹಿಳಾ ಸಿಬ್ಬಂದಿಗೆ ಅನುಕೂಲವಾಗುವ ಶಿಫ್ಟ್‌ಗೆ ಒಪ್ಪಿಗೆ ನೀಡಿದ್ದು ಬಿಎಂಟಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ CTMರಿಂದ ಎಲ್ಲಾ BMTC ಡಿಸಿಗಳಿಗೆ ಸುತ್ತೋಲೆ ಕಳಿಸಲಾಗಿದೆ.

ಕೆಲ ದಿನಗಳ ಹಿಂದೆ ಟಿವಿ9 ವಾಹಿನಿ ಮಹಿಳಾ ಕಂಡಕ್ಟರ್‌ಗಳ ಸಮಸ್ಯೆ ಬಗ್ಗೆ ವರದಿ ಮಾಡಿತ್ತು. ಅವರ ನೋವನ್ನು ಬಿಚ್ಚಿಡುವ ಪ್ರಯತ್ನ ಮಾಡಿತ್ತು. ಅದಕ್ಕೆ ಫಲಶೃತಿಯಾಗಿ BMTC ಹೊಸ ನಿರ್ಧಾರ ಕೈಗೊಂಡಿದೆ. ಕೊನೆಗೂ ಬೇಡಿಕೆ ಈಡೇರಿಸಲು ಮುಂದಾಗಿದೆ. ಇವತ್ತಿನಿಂದ ಮಹಿಳಾ ಸಿಬ್ಬಂದಿಗೆ ಶಿಫ್ಟ್​ ವೈಸ್ ಕೆಲಸ ನೀಡಲು ನಿರ್ಧರಿಸಿದೆ. ಇತ್ತೀಚೆಗೆ BMTC ಅಧ್ಯಕ್ಷ ನಂದೀಶ್ ರೆಡ್ಡಿಯನ್ನ ಮಹಿಳಾ ಸಿಬ್ಬಂದಿ ಭೇಟಿಯಾಗಿ ಶಿಫ್ಟ್ ವಿಚಾರವಾಗಿ ಮಾತನಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಮಹಿಳಾ ಸಿಬ್ಬಂದಿಗೆ ಅನುಕೂಲವಾಗುವಂತ ಶಿಫ್ಟ್​ಗಳನ್ನ ನೀಡಲಾಗುತ್ತೆ ಎಂದು ನಂದೀಶ್ ರೆಡ್ಡಿ ಭರವಸೆ ನೀಡಿದ್ದರು. ಅದರಂತೆಯೇ ಈಗ ಅಧ್ಯಕ್ಷರ ಸೂಚನೆ ಮೇರೆಗೆ, CTMO ರಿಂದ ಎಲ್ಲಾ ಬಿಎಂಟಿಸಿ ಡಿಸಿಗಳಿಗೆ ಸುತ್ತೋಲೆ ಕಳಿಸಲಾಗಿದೆ.

ಇನ್ನು ಮುಂದೆ ಮಹಿಳಾ ಸಿಬ್ಬಂದಿಗೆ ಮಾರ್ನಿಂಗ್ ಹಾಗೂ ಜನರಲ್ ಶೀಫ್ಟ್ ನೀಡಲಾಗುತ್ತೆ. ಜೊತೆಗೆ ಬಸ್​ಗಳ ರೂಟ್ ನೀಡುವಾಗ ಮಹಿಳಾ ನಿರ್ವಾಹಕಿಯರಿಗೆ ಮೊದಲ ಆದ್ಯತೆ ನೀಡುವುದು. ವಿಶೇಷವಾಗಿ ಗರ್ಭಿಣಿಯರಿಗೆ ಹಾಗೂ ಚಿಕ್ಕ ಮಕ್ಕಳಿರುವ ಮಹಿಳಾ ಸಿಬ್ಬಂದಿಗೆ ಆದ್ಯತೆ ಕೊಡಲಾಗುತ್ತೆ. ಸಾಧ್ಯವಾದಷ್ಟು ಅವರು ಕೇಳುವ ಮಾರ್ಗ ನೀಡುವುದು. ನೈಟ್ ಔಟ್ ಶೆಡ್ಯೂಲ್ ಮಾಡಲು ಆಸಕ್ತಿಯಿದ್ದಲ್ಲಿ ಲಿಖಿತ ಮನವಿ ಪತ್ರವನ್ನು ಪಡೆದು ಡ್ಯೂಟಿ ನೀಡಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಕೆಲಸದ ಅವಧಿ 8 ಗಂಟೆಗೆ ಇಳಿಸಲು ಮಹಿಳಾ ಕಂಡಕ್ಟರ್ಸ್ ಮನವಿ