ಕೆಲಸದ ಅವಧಿ 8 ಗಂಟೆಗೆ ಇಳಿಸಲು ಮಹಿಳಾ ಕಂಡಕ್ಟರ್ಸ್ ಮನವಿ
ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ವಿಡಿಯೋ ಮಾಡಿ ಕೆಲಸದ ಸಮಯವನ್ನು 8 ಗಂಟೆಗೆ ಇಳಿಸುವಂತೆ ಮುಖ್ಯಮಂತ್ರಿಗೆ ಮತ್ತು ಸಾರಿಗೆ ಸಚಿವರಿಗೆ ಮಹಿಳಾ ಕಂಡಕ್ಟರ್ಸ್ ಮನವಿ ಮಾಡಿದ್ದಾರೆ.
ಬೆಂಗಳೂರು: ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಲು ರಾಜ್ಯದ ಮುಖ್ಯಮಂತ್ರಿ ಹಾಗು ಸಾರಿಗೆ ಸಚಿವರಿಗೆ ಮಹಿಳಾ ಬಸ್ ಕಂಡಕ್ಟರ್ಗಳು ಕೈಮುಗಿದು ಮನವಿ ಮಾಡಿದ್ದಾರೆ.
ಸದ್ಯ 12 ರಿಂದ 16 ಗಂಟೆ ಕಾಲ ಡ್ಯೂಟಿ ಮಾಡಲಾಗುತ್ತಿದೆ. ಬೆಳಗ್ಗೆ 6 ಗಂಟೆಗೆ ಹೋದರೆ ರಾತ್ರಿ 8 ಆದರೂ ಕೆಲಸದಲ್ಲಿರುತ್ತೇವೆ. ಇದರಿಂದ ಮಹಿಳೆಯರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಅಲ್ಲದೇ ಬಹಳಷ್ಟು ಕಡೆ ಮಹಿಳಾ ಶೌಚಾಲಯಗಳ ಕೊರತೆ ಇದೆ. ಇದರ ಜೊತೆಗೆ ಸಂಬಳ ಕೂಡ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಮಕ್ಕಳಿಗೆ ಶಾಲೆ ಫೀಸ್, ಮನೆ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್ ಕಟ್ಟಬೇಕು. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ವಿಡಿಯೋ ಮಾಡಿ ಕೆಲಸದ ಸಮಯವನ್ನು 8 ಗಂಟೆಗೆ ಇಳಿಸಯವಂತೆ ಮುಖ್ಯಮಂತ್ರಿಗೆ ಮತ್ತು ಸಾರಿಗೆ ಸಚಿವರಿಗೆ ಮಹಿಳಾ ಕಂಡಕ್ಟರ್ಗಳು ಮನವಿ ಮಾಡಿದ್ದಾರೆ.
Chakka Jam ಮತ್ತೆ ಮೊಳಗಲಿದೆ ರೈತರ ಕಹಳೆ.. ದೇಶಾದ್ಯಂತ ನಾಳೆ ಹೈವೇಗಳು ಬಂದ್
Published On - 10:36 am, Fri, 5 February 21