ಅಚ್ಚರಿ.. ಈ ಗ್ರಾಮದಲ್ಲಿ ಆ ಸಮುದಾಯದ ಜನ ಬಿಟ್ರೆ ಬೇರೆ ಯಾರೂ ವಾಸಿಸುವಂತಿಲ್ಲ!

ಮಂಡ್ಯ: ಇಲ್ಲೊಂದು ಗ್ರಾಮವಿದೆ. ಅಲ್ಲಿ ಕೇವಲ ಒಂದೇ ಒಂದು ಸಮುದಾಯದ ಜನ ಮಾತ್ರ ಜೀವಿಸುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಯಾವ ಸಮುದಾಯದವರಿಗೂ ಎಂಟ್ರಿ ಇಲ್ಲ. ಈ ಗ್ರಾಮ ಯಾರಪ್ಪನ ಮನೆ ಆಸ್ತಿ, ಯಾಕೆ ಇಲ್ಲಿ ಬೇರೆ ಸಮುದಾಯದವರು ಜೀವಿಸಬಾರದು ಎಂದು ವಾಸಿಸೋಕೆ ಈ ಗ್ರಾಮಕ್ಕೆ ಬಂದ್ರೆ ಎರಡು ಮೂರು ದಿನಗಳಲ್ಲಿ ನೀವಾಗಿ ನೀವೇ ಗಂಟು ಮೂಟೆ ಕಟ್ಟಿ ಗ್ರಾಮ ಬಿಡಬೇಕಾಗುತ್ತಂತೆ. ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಒಂದು ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಅವಕಾಶವಿದೆ. […]

ಅಚ್ಚರಿ.. ಈ ಗ್ರಾಮದಲ್ಲಿ ಆ ಸಮುದಾಯದ ಜನ ಬಿಟ್ರೆ ಬೇರೆ ಯಾರೂ ವಾಸಿಸುವಂತಿಲ್ಲ!
Edited By:

Updated on: Sep 02, 2020 | 4:16 PM

ಮಂಡ್ಯ: ಇಲ್ಲೊಂದು ಗ್ರಾಮವಿದೆ. ಅಲ್ಲಿ ಕೇವಲ ಒಂದೇ ಒಂದು ಸಮುದಾಯದ ಜನ ಮಾತ್ರ ಜೀವಿಸುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಯಾವ ಸಮುದಾಯದವರಿಗೂ ಎಂಟ್ರಿ ಇಲ್ಲ. ಈ ಗ್ರಾಮ ಯಾರಪ್ಪನ ಮನೆ ಆಸ್ತಿ, ಯಾಕೆ ಇಲ್ಲಿ ಬೇರೆ ಸಮುದಾಯದವರು ಜೀವಿಸಬಾರದು ಎಂದು ವಾಸಿಸೋಕೆ ಈ ಗ್ರಾಮಕ್ಕೆ ಬಂದ್ರೆ ಎರಡು ಮೂರು ದಿನಗಳಲ್ಲಿ ನೀವಾಗಿ ನೀವೇ ಗಂಟು ಮೂಟೆ ಕಟ್ಟಿ ಗ್ರಾಮ ಬಿಡಬೇಕಾಗುತ್ತಂತೆ.
ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಒಂದು ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಅವಕಾಶವಿದೆ. ಅಲ್ಲಿರೋ 350 ಕುಟುಂಬದವರು ಒಕ್ಕಲಿಗ ಸಮುದಾಯದವರು. ಅಲ್ಲಿ ಒಕ್ಕಲಿಗರನ್ನು ಹೊರತು ಪಡಿಸಿ ಬೇರೆ ಯಾರೂ ವಾಸವಾಗುವಂತಿಲ್ಲ. ಬೇರೆಯರೂ ಇಲ್ಲಿ ಬಂದು ವಾಸ ಮಾಡೋದಿಕ್ಕೆ ಆಗೋದಿಲ್ಲವಂತೆ. ಹಾಗೊಂದು ವೇಳೆ ವಾಸ ಮಾಡಲು ಬಂದ್ರೆ ಅವರಿಗೆ ಏಳಿಗೆ ಇಲ್ಲ.

ಬಂದ ದಿನದಿಂದಲೇ ಅವರಿಗೆ ವಿಚಿತ್ರ ಸಮಸ್ಯೆಗಳು ಕಾಡುತ್ತವೆಯಂತೆ. ಹಾವು ಕಾಣಿಸಿಕೊಳ್ಳುವುದು, ನಾಯಿಗಳು ಕಚ್ಚಲು ಬರುವ ಅನುಭವ, ಆರೋಗ್ಯದಲ್ಲೂ ಹಲವಾರು ರೀತಿಯ ಸಮಸ್ಯೆಗಳು ಕಾಣುತ್ತವೆಯಂತೆ.

ಹೀಗಾಗಿ ಬಂದು ಎರಡೇ ದಿನದಲ್ಲಿ ಗ್ರಾಮವನ್ನ ಖಾಲಿ ಮಾಡ್ತಾರಂತೆ. ಈಗಾಗಲೆ ಹಲವಾರು ಜನರಿಗೆ ಈ ರೀತಿಯ ಅನುಭವ ಆಗಿದೆಯಂತೆ. ಆದ್ರೆ ಯಾಕೆ ಹೀಗೆ ಅನ್ನೋದು ಈ ಗ್ರಾಮದ ಜನರಿಗೂ ಗೊತ್ತಿಲ್ಲ. ವಿಚಿತ್ರವಾ, ದೈವ ಲೀಲೆಯಾ ಅಥವಾ ಯಾರಾದರೂ ಬೇಕು ಅಂತಾನೇ ಮಾಡ್ತಾ ಇರುವ ಷಡ್ಯಂತ್ರನಾ ಎಂಬ ಅನುಮಾನಗಳು ಎದ್ದಿವೆ.