Siddaramaiah | ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಮೋದಿ ಎಲೆಕ್ಷನ್​ನಲ್ಲಿ ಮತ್ತೆ ಸೋಲಬೇಕಾ? -ಮತ್ತೆ ಪ್ರಧಾನಿ ಮೋದಿ ಜಪ ಮಾಡಿದ ಸಿದ್ದರಾಮಯ್ಯ!

|

Updated on: Feb 15, 2021 | 6:47 PM

Siddaramaiah: ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಮೋದಿ ಅವರು ಸೋಲಬೇಕಾ? ಹೇಳಿ ಎಂದು ಸಕ್ಕರೆ ನಾಡಲ್ಲಿ ಭಾಷಣ ಮಾಡುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಪ್ರಧಾನಿ ನರೇಂದ್ರ ಮೋದಿ ಜಪ ಮಾಡಿದ್ದಾರೆ.

Siddaramaiah | ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಮೋದಿ ಎಲೆಕ್ಷನ್​ನಲ್ಲಿ ಮತ್ತೆ ಸೋಲಬೇಕಾ? -ಮತ್ತೆ ಪ್ರಧಾನಿ ಮೋದಿ ಜಪ ಮಾಡಿದ ಸಿದ್ದರಾಮಯ್ಯ!
ಶ್ರೀರಾಮ ಜನರ ಧಾರ್ಮಿಕ ನಂಬಿಕೆ! ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ
Follow us on

ಮಂಡ್ಯ: ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಮೋದಿ ಅವರು ಸೋಲಬೇಕಾ.. ಹೇಳಿ!? ಎಂದು ಸಕ್ಕರೆ ನಾಡಲ್ಲಿ ಭಾಷಣ ಮಾಡುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಪ್ರಧಾನಿ ನರೇಂದ್ರ ಮೋದಿ ಜಪ ಮಾಡಿದ್ದಾರೆ.

ಸಿದ್ದರಾಮಯ್ಯರಿಗೆ ಪ್ರಧಾನಿ ಗುಂಗು ಯಾಕೆ?
ಅಂದ ಹಾಗೆ, ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಗ್ರಾ‌‌.ಪಂ. ಸದಸ್ಯರಿಗೆ ಅಭಿನಂದನೆ ಸಮಾರಂಭದಲ್ಲಿ ಸಿದ್ದರಾಮಯ್ಯ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನರೇಂದ್ರಸ್ವಾಮಿ ಅವರ ಪರ ಮಾತನಾಡಲು ಮುಂದಾದರು. ಈ ವೇಳೆ, ನರೇಂದ್ರಸ್ವಾಮಿ ಹೆಸರೇಳುವ ಬದಲು ಮೋದಿ ಹೆಸರು ಹೇಳಿದರು. ಆಗ, ಅಲ್ಲೇ ನೆರೆದಿದ್ದವರ ಅಚ್ಚರಿ ಕಂಡು ಕೂಡಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಅಲ್ಲ ಅಲ್ಲ ನರೇಂದ್ರಸ್ವಾಮಿ ಎಂದು ಹೇಳಿದರು.

ಬೈ ದಿ ಬೈ, ಸಿದ್ದರಾಮಯ್ಯ ಕಳೆದ ವಿಧಾನಸಭಾ ಚುನಾವಣಾ ಪ್ರಚಾರ ವೇಳೆಯೂ ಮಳವಳ್ಳಿಯಲ್ಲಿ ಇದೇ ರೀತಿ ಎಡವಟ್ಟು ಮಾಡಿದ್ರು. ಪ್ರಚಾರದ ವೇಳೆ ನರೇಂದ್ರಸ್ವಾಮಿ ಬದಲು ನರೇಂದ್ರ ಮೋದಿ ಹೆಸರು ಹೇಳಿದ್ದರು.

ಬಳಿಕ ತಮ್ಮ ಭಾಷಣ ಮುಂದುವರಿಸಿದ ಸಿದ್ದರಾಮಯ್ಯ ಪಂಚಾಯತ್​ ರಾಜ್​ ವ್ಯವಸ್ಥೆಗೆ ಬಿಜೆಪಿ ಕೊಡುಗೆ ಏನೆಂದು ಪ್ರಶ್ನೆ ಮಾಡಿದರು. ಅಧಿಕಾರ ವಿಕೇಂದ್ರೀಕರಣ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ ಸಿಗಬೇಕೆಂದು ಬಿಜೆಪಿ ಹೋರಾಡಿಲ್ಲ. ಹಿಂದುಳಿದವರಿಗೆ ಮೀಸಲಾತಿ ಕೊಟ್ಟೆ ಎಂದು HDD ಹೇಳುತ್ತಾರೆ. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಮಹಿಳೆಯರು, ಒಬಿಸಿ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. 73 ಮತ್ತು 74ನೇ ತಿದ್ದುಪಡಿ ಮೂಲಕ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಎಂದು ಹೇಳಿದರು.

ಪಂಚಾಯತ್​ ರಾಜ್ ವ್ಯವಸ್ಥೆಯಲ್ಲಿ ಜೆಡಿಎಸ್​ ಕೊಡುಗೆ ಶೂನ್ಯ. ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Siddaramaiah | ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ.. ನಂದು 46 ಇಂಚಿನ ಎದೆ ಎಂದ ಸಿದ್ದರಾಮಯ್ಯ

Published On - 6:21 pm, Mon, 15 February 21