ಆರತಿಗೆ ಸುಮ್ಮನಿದ್ದ ಸಿದ್ದರಾಮಯ್ಯ, ಕುಂಕುಮ ಹಚ್ಚೋದು ಬೇಡ ಅಂದ್ರು

ಮಂಡ್ಯ: ಅಸೆಂಬ್ಲಿ ಬೈ ಎಲಕ್ಷನ್​ನಲ್ಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಪಕ್ಷದ ಪರ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಹಿರಿಕಳಲೆ ಗ್ರಾಮದಲ್ಲಿಯೂ ಅವರು ಪ್ರಚಾರದಲ್ಲಿ ತೊಡಗಿದ್ದರು. ಆ ವೇಳೆ, ಕಾರಿನ ಮೇಲೇರಿದ್ದ ಸಿದ್ದರಾಮಯ್ಯಗೆ ಮಹಿಳೆಯರು ಆರತಿ ಎತ್ತಿದರು. ಜೊತೆಗೆ ಕುಂಕುಮ ಹಚ್ಚಲು ಮುಂದಾದರು. ಆಗ ಕುಂಕುಮ ಇಡಲು ಬಂದ ಮಹಿಳೆಯ ಕೈಯನ್ನು ಅಡ್ಡ ಹಿಡಿದು ಸಿದ್ದರಾಮಯ್ಯ ಬೇಡ ಅಂದರು. ನಂತರ, ಒಳ್ಳೆಯದಾಗಲಮ್ಮ ನಿಂಗೆ ಎಂದು ಮಹಿಳೆಯ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರು. ಅದಾಗತಾನೆ ಸಿದ್ದುಗೆ […]

ಆರತಿಗೆ ಸುಮ್ಮನಿದ್ದ ಸಿದ್ದರಾಮಯ್ಯ,  ಕುಂಕುಮ ಹಚ್ಚೋದು ಬೇಡ ಅಂದ್ರು

Updated on: Nov 21, 2019 | 1:40 PM

ಮಂಡ್ಯ: ಅಸೆಂಬ್ಲಿ ಬೈ ಎಲಕ್ಷನ್​ನಲ್ಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಪಕ್ಷದ ಪರ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಹಿರಿಕಳಲೆ ಗ್ರಾಮದಲ್ಲಿಯೂ ಅವರು ಪ್ರಚಾರದಲ್ಲಿ ತೊಡಗಿದ್ದರು. ಆ ವೇಳೆ, ಕಾರಿನ ಮೇಲೇರಿದ್ದ ಸಿದ್ದರಾಮಯ್ಯಗೆ ಮಹಿಳೆಯರು ಆರತಿ ಎತ್ತಿದರು. ಜೊತೆಗೆ ಕುಂಕುಮ ಹಚ್ಚಲು ಮುಂದಾದರು.

ಆಗ ಕುಂಕುಮ ಇಡಲು ಬಂದ ಮಹಿಳೆಯ ಕೈಯನ್ನು ಅಡ್ಡ ಹಿಡಿದು ಸಿದ್ದರಾಮಯ್ಯ ಬೇಡ ಅಂದರು. ನಂತರ, ಒಳ್ಳೆಯದಾಗಲಮ್ಮ ನಿಂಗೆ ಎಂದು ಮಹಿಳೆಯ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರು. ಅದಾಗತಾನೆ ಸಿದ್ದುಗೆ ಆರತಿ ಬೆಳಗಿದ್ದ ಮಹಿಳೆಯರು, ನಂತರ ಅಕ್ಷತೆ ಹಾಕಿ ಸಿದ್ದರಾಮಯ್ಯಗೆ ಹಾರೈಸಿದರು.

Published On - 1:38 pm, Thu, 21 November 19