ಏ ಹಿಂದಿ ಮೇ ನಕೊ: ದೆಹಲಿಯಲ್ಲೂ ಹಿಂದಿಯಲ್ಲಿ ಮಾತಾಡಲ್ಲ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಕಾರನ್ನು ಸುತ್ತುಗಟ್ಟುವ ಮಾಧ್ಯಮ ಸಿಬ್ಬಂದಿ ಚರ್ಚೆಯ ವಿವರ ನೀಡುವಂತೆ ಹಿಂದಿಯಲ್ಲಿ ವಿನಂತಿಸಿದ್ದಾರೆ. ‘ಏ ಹಿಂದಿ ಮೇ ನಕೊ. ಯು ಪ್ಲೀಸ್ ಆಸ್ಕ್ ಇನ್ ಇಂಗ್ಲಿಷ್’ ಎಂದು ಪ್ರತಿಹೇಳಿದ್ದಾರೆ.

ಏ ಹಿಂದಿ ಮೇ ನಕೊ: ದೆಹಲಿಯಲ್ಲೂ ಹಿಂದಿಯಲ್ಲಿ ಮಾತಾಡಲ್ಲ ಎಂದ ಸಿದ್ದರಾಮಯ್ಯ
ಸುಮಲತಾ ಹೆಚ್​ಡಿಕೆ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿಕೆ
Updated By: ganapathi bhat

Updated on: Apr 06, 2022 | 7:57 PM

ಬೆಂಗಳೂರು: ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸಲು ಮಂಗಳವಾರ (ಫೆ.16) ದೆಹಲಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅಲ್ಲಿನ ಮಾಧ್ಯಮ ಪ್ರತಿನಿಧಿಗಳು ಹಿಂದಿಯಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸಲು ನಿರಾಕರಿಸಿದ ವಿಡಿಯೊ ವೈರಲ್ ಆಗಿದೆ.

ಸಿದ್ದರಾಮಯ್ಯ ಅವರ ಕಾರನ್ನು ಸುತ್ತುಗಟ್ಟುವ ಮಾಧ್ಯಮ ಸಿಬ್ಬಂದಿ ಚರ್ಚೆಯ ವಿವರ ನೀಡುವಂತೆ ಹಿಂದಿಯಲ್ಲಿ ವಿನಂತಿಸಿದ್ದಾರೆ. ‘ಏ ಹಿಂದಿ ಮೇ ನಕೊ. ಯು ಪ್ಲೀಸ್ ಆಸ್ಕ್ ಇನ್ ಇಂಗ್ಲಿಷ್’ ಎಂದು ಪ್ರತಿಹೇಳಿದ್ದಾರೆ.

ಸಿದ್ದರಾಮಯ್ಯ ಪ್ರತಿಕ್ರಿಯೆಯಿಂದ ತಬ್ಬಿಬ್ಬಾದ ಮಾಧ್ಯಮ ಪ್ರತಿನಿಧಿಗಳು ತುಸುಹೊತ್ತು ಮೌನತಾಳಿದಾಗ, ‘ಪ್ರಶ್ನೆ ಕೇಳ್ತೀರೇನ್ರೀ’ ಎಂದು ಕನ್ನಡದಲ್ಲಿಯೇ ಕೇಳಿದ್ದಾರೆ.

‘ನಾನು ರಾಹುಲ್ ಜೊತೆಗೆ ಏನು ಮಾತನಾಡಿದೆ ಅಂತ ಎಲ್ಲವನ್ನೂ ಹೇಳೋಕೆ ಆಗಲ್ಲ. ರಾಜ್ಯದ (ಕರ್ನಾಟಕ) ವಿದ್ಯಮಾನಗಳನ್ನು ಮಾತನಾಡಿದೆವು. ಪಕ್ಷದ ಚಟುವಟಿಕೆಗಳ ಬಗ್ಗೆ ಮಾತನಾಡಿದೆ. ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆಯೂ ಚರ್ಚಿಸಿದೆವು’ ಎಂದು ಇಂಗ್ಲಿಷಿನಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Siddaramaiah | ಅಹಿಂದ ಸಮಾವೇಶ: ಸಿದ್ದರಾಮಯ್ಯ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್

Published On - 10:38 pm, Tue, 16 February 21