Sign In

By signing in or creating an account, you agree with Associated Broadcasting Company's Terms & Conditions and Privacy Policy.

BR Shetty | ಉದ್ಯಮಿ ಡಾ.B.R.ಶೆಟ್ಟಿ ವಿರುದ್ಧ ಲುಕ್​ಔಟ್ ನೋಟಿಸ್ ರದ್ದತಿಗೆ ಹೈಕೋರ್ಟ್ ನಕಾರ

BR Shetty: ಡಾ.B.R.ಶೆಟ್ಟಿ ವಿರುದ್ಧ ಲುಕ್​ಔಟ್ ನೋಟಿಸ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ. ಇದಲ್ಲದೆ, ಉದ್ಯಮಿ ಡಾ.B.R.ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

BR Shetty | ಉದ್ಯಮಿ ಡಾ.B.R.ಶೆಟ್ಟಿ ವಿರುದ್ಧ ಲುಕ್​ಔಟ್ ನೋಟಿಸ್ ರದ್ದತಿಗೆ ಹೈಕೋರ್ಟ್ ನಕಾರ
B.R.ಶೆಟ್ಟಿ
Follow us
KUSHAL V
| Updated By: ಆಯೇಷಾ ಬಾನು

Updated on:Feb 17, 2021 | 12:42 PM

ಬೆಂಗಳೂರು: ಡಾ.B.R.ಶೆಟ್ಟಿ ವಿರುದ್ಧ ಲುಕ್​ಔಟ್ ನೋಟಿಸ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ. ಇದಲ್ಲದೆ, ಉದ್ಯಮಿ ಡಾ.B.R.ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಏನಿದು ಪ್ರಕರಣ? ಉದ್ಯಮಿ B.R.ಶೆಟ್ಟಿ 2 ಬ್ಯಾಂಕ್​ಗಳಿಂದ ಸುಮಾರು 2,800 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಪಡೆದಿದ್ದ ಸಾಲ ತೀರಿಸದ ಕಾರಣಕ್ಕೆ ಉದ್ಯಮಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಅಬುದಾಭಿಗೆ ಪ್ರಯಾಣಿಸಲು ಶೆಟ್ಟಿಗೆ ಅನುಮತಿ ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿ B.R.ಶೆಟ್ಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ, ಭದ್ರತೆ ಇಲ್ಲದೆ ಭಾರಿ ಸಾಲ ವಿತರಣೆಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದೇಶದ ನಾಗರಿಕರಿಗೆ ಪ್ರಯಾಣಿಸುವ ಹಕ್ಕಿರುವುದು ನಿಜ. ಆದರೆ ಪಡೆದ ಸಾಲ ತೀರಿಸುವುದು ಅವರ ಆದ್ಯ ಕರ್ತವ್ಯ. ಸಾಲ ನೀಡುವುದಕ್ಕೂ ಮುನ್ನ ಭದ್ರತೆ ಖಾತ್ರಿಗೊಳಿಸಬೇಕು. RBI ಈ ಬಗ್ಗೆ ಅಗತ್ಯ ನಿಯಮಾವಳಿ ರೂಪಿಸಬೇಕು ಎಂದು ಹೈಕೋರ್ಟ್ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

B.R.ಶೆಟ್ಟಿಯ ಎನ್‌ಎಂಸಿ ಹೆಲ್ತ್‌ಕೇರ್ ಕಂಪನಿಗೆ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ 7,500 ಕೋಟಿ ರೂ.ಗೂ ಹೆಚ್ಚು ಸಾಲ ನೀಡಿತ್ತು. ಆದ್ರೆ ಬಿ.ಆರ್.ಶೆಟ್ಟಿ ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 2020ರ ಏ.15ರಂದು ಬಿ.ಆರ್.ಶೆಟ್ಟಿ ಸೇರಿ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಆಗ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ ಇಂಗ್ಲೆಂಡ್ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ಇಂಗ್ಲೆಂಡ್ ಕೋರ್ಟ್‌ ಉದ್ಯಮಿ ಬಿ.ಆರ್.ಶೆಟ್ಟಿ, ಕಂಪನಿಯ ಸಿಇಒ ಪ್ರಶಾಂತ್, ನಿರ್ದೇಶಕರ ಆಸ್ತಿ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ವಿಶ್ವದ ಎಲ್ಲೆಡೆ ಇರುವ ಆಸ್ತಿಗಳಿಗೂ ಈ ನಿರ್ಬಂಧ ಅನ್ವಯವಾಗಲಿದ್ದು ಇವಱರೂ ತಮ್ಮ ಆಸ್ತಿ ಮಾರುವುದಕ್ಕೂ ಅವಕಾಶವಿಲ್ಲ.

ಇದನ್ನೂ ಓದಿ: Bengaluru Power Cut: ಬುಧವಾರ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ; ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಕಟ್?

Published On - 11:24 pm, Tue, 16 February 21