
ಕೊಪ್ಪಳ: ಬೆಂಗಳೂರಲ್ಲಿ ನಡೆದ ಗಲಭೆಗೆ ಸಿದ್ದರಾಮಯ್ಯ ನೇರ ಕಾರಣ ಎಂದು ಕೊಪ್ಪಳದಲ್ಲಿ ಟಿವಿ9 ಜೊತೆ ಮಾತನಾಡುತ್ತಾ ನಳಿನ್‌ಕುಮಾರ್ ಕಟೀಲು ಆರೋಪಿಸಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಮಾತನಾಡಿದ ನಳಿನ್‌ಕುಮಾರ್ ಕಟೀಲು ಸಿದ್ದರಾಮಯ್ಯ ವಿರುದ್ಧ ಪ್ರಹಾರ ಮಾಡಿದ್ದಾರೆ.
ಸಿದ್ದರಾಮಣ್ಣ ಸಿಎಂ ಆಗಿದ್ದ 5 ವರ್ಷ ಅವಧಿಯಲ್ಲಿ ಇಂಥವರಿಗೆ ಹೆಚ್ಚು ಶಕ್ತಿ ತುಂಬಿದ್ದಾರೆ. ದೇಶದ್ರೋಹದ ಕೆಲಸ ಮಾಡಿದವರಿಗೆ ಬೆಂಗಾವಲಾಗಿದ್ದಾರೆ. ‘ಹಿಂದೂ-ಮುಸ್ಲಿಮರ ಮಧ್ಯೆ ಭೇದಭಾವ ಮಾಡುತ್ತಿದ್ದಾರೆ. ಅದರಿಂದಲೇ ಈಗಲೂ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕೊಪ್ಪಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಸಿದ್ದರಾಮಯ್ಯ ವಿರುದ್ಧ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿರುವ ಘಟನೆ ಪೂರ್ವಯೋಜಿತ ಕೃತ್ಯ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಅವರ ಬೆಂಗಾವಲಿಗೆ ನಿಂತ್ರೆ ಜನರು ಕಾಂಗ್ರೆಸ್ ಪಕ್ಷವನ್ನ ಅರಬ್ಬಿ ಸಮುದ್ರಕ್ಕೆ ಬಿಸಾಕುತ್ತಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವವರನ್ನು ಜೈಲಿಗೆ ಹಾಕಬೇಕು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇವರೆಲ್ಲ ಘಾತುಕರು, ಅವರಿಗೆ ಯಾವ ಮತ, ಧರ್ಮವಿಲ್ಲ. ಕಾಂಗ್ರೆಸ್ ದಲಿತರ ಪರವೋ, ಘಾತುಕರ ಪರವೋ ತಿಳಿಸಲಿ. ನವೀನ್ ನಮ್ಮ ಪಕ್ಷದ ಕಾರ್ಯಕರ್ತನಲ್ಲ ಎಂದು ತಿಳಿಸಿದ್ರು.