ನಾನು ಯಾವತ್ತೂ ವಿಲನ್ ಆಗಿಲ್ಲ.. ಹೀರೋ ಪಾತ್ರವನ್ನೇ ಮಾಡಿದ್ದೀನಿ -HDKಗೆ ಸಿದ್ದು ಟಾಂಗ್​

ಕಲಬುರಗಿ: ತಾಜ್‌ ವೆಸ್ಟೆಂಡ್‌ನಲ್ಲಿ ಕುಳಿತು ಸರ್ಕಾರ ನಡೆಸಲು ಆಗುತ್ತಾ? ನನ್ನ ಹೇಳಿಕೆಯಿಂದ ಕುಮಾರಸ್ವಾಮಿಗೆ ಮುಜುಗರ ಆಗುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್​ ಕೊಟ್ಟಿದ್ದಾರೆ. ನಾನು ಯಾವತ್ತೂ ವಿಲನ್ ಆಗಿಲ್ಲ. ನಾನು ಹೀರೋ ಪಾತ್ರವನ್ನೇ ಮಾಡಿದ್ದೇನೆ ಎಂದು ಸಹ ಹೇಳಿದರು. ‘ನೆರೆ ಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ’ ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು, ಜನ ಸಂಕಷ್ಟದಲ್ಲಿದ್ದರೂ ಸಚಿವರು ಇತ್ತ ತಲೆಹಾಕಿಲ್ಲ. ನೆರೆ ಸ್ಥಿತಿ ನಿಭಾಯಿಸುವಲ್ಲಿ […]

ನಾನು ಯಾವತ್ತೂ ವಿಲನ್ ಆಗಿಲ್ಲ.. ಹೀರೋ ಪಾತ್ರವನ್ನೇ ಮಾಡಿದ್ದೀನಿ -HDKಗೆ ಸಿದ್ದು ಟಾಂಗ್​

Updated on: Oct 26, 2020 | 12:44 PM

ಕಲಬುರಗಿ: ತಾಜ್‌ ವೆಸ್ಟೆಂಡ್‌ನಲ್ಲಿ ಕುಳಿತು ಸರ್ಕಾರ ನಡೆಸಲು ಆಗುತ್ತಾ? ನನ್ನ ಹೇಳಿಕೆಯಿಂದ ಕುಮಾರಸ್ವಾಮಿಗೆ ಮುಜುಗರ ಆಗುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್​ ಕೊಟ್ಟಿದ್ದಾರೆ. ನಾನು ಯಾವತ್ತೂ ವಿಲನ್ ಆಗಿಲ್ಲ. ನಾನು ಹೀರೋ ಪಾತ್ರವನ್ನೇ ಮಾಡಿದ್ದೇನೆ ಎಂದು ಸಹ ಹೇಳಿದರು.

‘ನೆರೆ ಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ’
ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು, ಜನ ಸಂಕಷ್ಟದಲ್ಲಿದ್ದರೂ ಸಚಿವರು ಇತ್ತ ತಲೆಹಾಕಿಲ್ಲ. ನೆರೆ ಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಇಂಥ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಇಲ್ಲೇ ಇರಬೇಕು. ಜಿಲ್ಲೆಗಳಲ್ಲಿಯೇ ಬೀಡುಬಿಟ್ಟು ಪರಿಹಾರ ಕೆಲಸ ಮಾಡಿಸಬೇಕು. ಆದ್ರೆ ಕಲಬುರಗಿ ಉಸ್ತುವಾರಿ ಸಚಿವರು ಈ ಕಡೆ ತಲೆ ಹಾಕಿಲ್ಲ. ಮೇ ತಿಂಗಳಿನಿಂದ ಜಿಲ್ಲೆಯ ಕಡೆ ಅವರು ತಲೆಯೇ ಹಾಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ ವಿರುದ್ಧ ಕಿಡಿಕಾರಿದರು.

ಕಂದಾಯ ಸಚಿವರು ಪಿಕ್‌ನಿಕ್‌ಗೆ ಬಂದಂತೆ ಬಂದುಹೋಗಿದ್ದಾರೆ. ಸಿಎಂ ಬಿಎಸ್‌ವೈ ಮೇಲೆಯೇ ಹಾರಾಟ ಮಾಡಿ ಹೋಗಿದ್ದಾರೆ. ಯಡಿಯೂರಪ್ಪಗೆ ಮೇಲಿಂದ ಅದು ಏನು ಕಾಣಿಸ್ತೋ ಗೊತ್ತಿಲ್ಲ. ಒಬ್ಬನೇ ಒಬ್ಬ ನೆರೆ ಸಂತ್ರಸ್ತನ ಕಷ್ಟವನ್ನು ಸಿಎಂ BSY ಆಲಿಸಿಲ್ಲ. ಸಿಎಂ ಬಿಎಸ್‌ವೈ, ಮಂತ್ರಿಗಳು ಈ ರೀತಿ ನಡೆದುಕೊಳ್ಳುತ್ತಿದ್ದರೆ ಅಧಿಕಾರಿಗಳಿಗೆ ಲಂಗು ಲಗಾಮಿಲ್ಲದಂತಾಗಿದೆ ಎದಂದು ಸಿದ್ದರಾಮಯ್ಯ ಹೇಳಿದರು. ಕೇಂದ್ರ, ರಾಜ್ಯ ಸರ್ಕಾರಗಳು ನಯಾಪೈಸೆ ಪರಿಹಾರ ನೀಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.