ಮೈಸೂರು: ಇದು ಮೈಸೂರು ದಸರಾ ಅಲ್ಲ, ಯಡಿಯೂರಪ್ಪ ದಸರಾ. ಅರಮನೆಯಲ್ಲಿ ಮಾತ್ರ ಮೆರವಣಿಗೆ ಮಾಡ್ತಿದ್ದಾರೆ. ಜಂಬೂ ಸವಾರಿ, ಚಾಮುಂಡೇಶ್ವರಿ ದೇವಿಯನ್ನು ಅರಮನೆಯೊಳಗೆ ಬಂಧಿಸಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅರಮನೆ ಪ್ರವೇಶಕ್ಕೂ ಮುಂದಾಗಿದ್ದರು. ಸದ್ಯ ಪೊಲೀಸರು ವಾಟಾಳ್ ನಾಗರಾಜ್ನನ್ನು ಬಂಧಿಸಿದ್ದಾರೆ.
ಮೈಸೂರಿನ ದೊಡ್ಡ ಗಡಿಯಾರ ರಸ್ತೆಯಲ್ಲಿ ಇಂದು ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಅದ್ದೂರಿ ದಸರಾ ಆಚರಣೆಯಾಗಬೇಕೆಂದು ಆಗ್ರಹಿಸಿದರು. ತಮ್ಮ ಆಗ್ರಹಕ್ಕೆ ಮಣಿಯದಿದ್ದರೆ ತಾವೇ ಸಾರೋಟಿನಲ್ಲಿ ಚಾಮುಂಡಿ ಮೆರವಣಿಗೆ ಮಾಡೋದಾಗಿ ಎಚ್ಚರಿಕೆ ನೀಡಿದ್ರು. ಇದು ಯಡಿಯೂರಪ್ಪ ದಸರಾ. ಅರಮನೆಯಲ್ಲಿ ಮಾತ್ರ ಮೆರವಣಿಗೆ ಮಾಡ್ತಿದ್ದಾರೆ. ಜಂಬೂ ಸವಾರಿ, ಚಾಮುಂಡೇಶ್ವರಿ ದೇವಿಯನ್ನು ಅರಮನೆಯೊಳಗೆ ಬಂಧಿಸಿದ್ದಾರೆ. ಮೈಸೂರಿನ ಪರಂಪರೆ ಗೌರವ ಉಳಿಸಬೇಕು.
ಯಡಿಯೂರಪ್ಪ ಜೈಲಿಗೆ ಹೋಗಿ ಬಂದ್ರು ಬುದ್ದಿ ಬಂದಿಲ್ಲ. ದರ್ಪ, ದುರಾಹಂಕಾರ, ದ್ವೇಷ ಬಿಡಿ, ಚಾಡಿ ಮಾತು ಕೇಳಬೇಡಿ. ನೀವು ಹಿಟ್ಲರ್ ಅಲ್ಲ, ಹಿಟ್ಲರ್ ಬಗ್ಗೆ ಇತ್ತೀಚೆಗೆ ಒಳ್ಳೆಯ ಮಾತು ಕೇಳಿ ಬಂದಿದೆ. ನಾನು ಪೊಲೀಸ್ ಪರ, ನಿಮ್ಮ ತರಹ ಅಲ್ಲ. ಪೊಲೀಸ್ ಬಗ್ಗೆ ಗೌರವ, ಪ್ರೀತಿ ಇದ್ರೆ ಔರದ್ಕರ್ ವರದಿ ಜಾರಿ ಮಾಡಿ. ನೀವು ಅಧಿಕಾರದಿಂದ ಕೇಳಗಿಳಿದ್ರೆ ಬೀದಿ ನಾಯಿ ಕೂಡ ನಿಮ್ಮನ್ನು ಕೇಳಲ್ಲ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.