ಸುಧಾಮೂರ್ತಿ ಬಗ್ಗೆ ಅವಹೇಳನ ಆರೋಪ: ವೆಬ್ ಸೀರೀಸ್ ನಿರ್ದೇಶಕ ವಿರುದ್ಧ ದೂರು ದಾಖಲು
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಬಗ್ಗೆ ಅವಹೇಳನ ಮಾಡಿರುವ ಆರೋಪದಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸೀರೀಸ್‌ನಲ್ಲಿ ಸುಧಾಮೂರ್ತಿಗೆ ಅವಹೇಳನ ಮಾಡಿರುವ ಆರೋಪ ಕೇಳಿಬಂದಿದೆ. ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸೀರೀಸ್ ನಿರ್ದೇಶಕ ಅಮರ್ ಹಾಗೂ ಸೀರೀಸ್ನ ನಿರ್ಮಾಪಕರ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೆಬ್ ಸೀರೀಸ್‌ನಲ್ಲಿ ಬರುವ ಸನ್ನಿವೇಶದಲ್ಲಿ ಸುಧಾಮೂರ್ತಿಯವರ ಹೆಸರು ಬದಲಿಸಿ ಅವಹೇಳನಕಾರಿಯಾಗಿ ಬಳಕೆ ಮಾಡಿರುವ ಆರೋಪ […]

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಬಗ್ಗೆ ಅವಹೇಳನ ಮಾಡಿರುವ ಆರೋಪದಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸೀರೀಸ್‌ನಲ್ಲಿ ಸುಧಾಮೂರ್ತಿಗೆ ಅವಹೇಳನ ಮಾಡಿರುವ ಆರೋಪ ಕೇಳಿಬಂದಿದೆ.
ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸೀರೀಸ್ ನಿರ್ದೇಶಕ ಅಮರ್ ಹಾಗೂ ಸೀರೀಸ್ನ ನಿರ್ಮಾಪಕರ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೆಬ್ ಸೀರೀಸ್‌ನಲ್ಲಿ ಬರುವ ಸನ್ನಿವೇಶದಲ್ಲಿ ಸುಧಾಮೂರ್ತಿಯವರ ಹೆಸರು ಬದಲಿಸಿ ಅವಹೇಳನಕಾರಿಯಾಗಿ ಬಳಕೆ ಮಾಡಿರುವ ಆರೋಪ ಕೇಳಿಬಂದಿದ್ದು ಈ ಕುರಿತು ನಮ್ಮ ಕರವೇ ಸಂಸ್ಥಾಪಕ ಅಧ್ಯಕ್ಷ ಜಯರಾಜ್ ನಾಯ್ಡು ರಾಣೆಗೆ ದೂರು ನೀಡಿದ್ದಾರೆ.



