HDKಗೆ ಇಮೇಜ್ ಇದ್ದರಲ್ವಾ ಹೋಗೋದಕ್ಕೆ -ಸಿದ್ದರಾಮಯ್ಯ ಟಾಂಗ್​

|

Updated on: Dec 06, 2020 | 5:04 PM

HDKಗೆ ಇಮೇಜ್ ಇದ್ದರಲ್ವಾ ಹೋಗುವುದಕ್ಕೆ. ಇವರಿಗೆ ಇಮೇಜ್ ಇದ್ದಿದ್ದರೆ 110 ಸೀಟು ಬರಬೇಕಿತ್ತಲ್ವಾ? ನನ್ನ ಇಮೇಜ್ ಹೋಯ್ತು ಅನ್ನುವ HDK ಎಷ್ಟು ಸೀಟು ಗೆದ್ರು ಎಂದು ತಿರುಗೇಟು ನೀಡಿದರು.

HDKಗೆ ಇಮೇಜ್ ಇದ್ದರಲ್ವಾ ಹೋಗೋದಕ್ಕೆ -ಸಿದ್ದರಾಮಯ್ಯ ಟಾಂಗ್​
ಸಿದ್ದರಾಮಯ್ಯ(ಎಡ); H.D.ಕುಮಾರಸ್ವಾಮಿ (ಬಲ)
Follow us on

ಬೆಂಗಳೂರು: ನನ್ನ ಗುಡ್​ ವಿಲ್ ಹಾಳು ಮಾಡಿದರೆಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ತಿರುಗೇಟು ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಮಗೆ ಗುಡ್ ವಿಲ್ ಇದ್ದಿದ್ರೆ, ಬಹಳ ಜನಪ್ರಿಯತೆ ಇದ್ದಿದ್ರೆ  59 ಸೀಟಿನಿಂದ 28 ಕ್ಕೆ ಯಾಕಪ್ಪ ಬಂದ್ರಿ ಎಂದು ಪ್ರಶ್ನಿಸಿದರು.

HDKಗೆ ಇಮೇಜ್ ಇದ್ದರಲ್ವಾ ಹೋಗುವುದಕ್ಕೆ. ಇವರಿಗೆ ಇಮೇಜ್ ಇದ್ದಿದ್ದರೆ 110 ಸೀಟು ಬರಬೇಕಿತ್ತಲ್ವಾ? ನಾನು ಡಿಸಿಎಂ ಆಗಿದ್ದಾಗ ಜೆಡಿಎಸ್ 59 ಸ್ಥಾನ ಗೆದ್ದಿತ್ತು. JDSನಿಂದ ನನ್ನನ್ನ ಹೊರ ಹಾಕಿದಾಗ 28 ಸ್ಥಾನಗಳನ್ನು ಗೆದ್ದರು. ನನ್ನ ಇಮೇಜ್ ಹೋಯ್ತು ಅನ್ನುವ HDK ಎಷ್ಟು ಸೀಟು ಗೆದ್ರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಜೆಡಿಎಸ್​ನ ರಾಜಕೀಯ ವೈರತ್ವ ಇರುವುದು ಕಾಂಗ್ರೆಸ್ ಜೊತೆಗೆ ಮಾತ್ರ. ಯಾವತ್ತೂ ಬಿಜೆಪಿ ಜೊತೆಗೆ ಸಾಫ್ಟ್ ಆಗಿಯೇ ಇರ್ತಾರೆ. ಹಾಗೇ ಬಿಜೆಪಿ ಜತೆ ಹೋಗಿದ್ರೆ ಸಿಎಂ ಆಗಿರುತ್ತಿದ್ದೆ ಅಂತಾ ಹೇಳ್ತಾರೆ. ಅಂದ ಮೇಲೆ ಇವರು ಬಿಜೆಪಿಯ ಬಿ ಟೀಂ ಅಂತಾಯ್ತಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಯವಾಗಿ ತಿರುಗೇಟು ಕೊಟ್ಟರು.

ಹೋಟೆಲ್ ಮಾಲೀಕರಿಗೆ ದಂಡ ವಿಧಿಸುವ ನಿರ್ಧಾರಕ್ಕೆ ಸಿದ್ದು ಕಿಡಿ:
ವರ್ಗಾವಣೆಗೆ ಇಷ್ಟು, ಉಪಕರಣಕ್ಕೆ ಇಷ್ಟು ಎಂದು ಅಂಗಡಿ ವಸೂಲಿಗಾಗಿ ಸರ್ಕಾರದವರು ಅಂಗಡಿ ತೆರೆದು ಕುಳಿತಿದ್ದಾರೆ ಎಂದು ಮಾಸ್ಕ್ ಧರಿಸದ ಹೋಟೆಲ್ ಮಾಲೀಕರಿಗೆ ದುಬಾರಿ ದಂಡ ವಿಧಿಸುವ ನಿರ್ಧಾರಕ್ಕೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಸದನದಲ್ಲಿ ಪ್ರಸ್ತಾಪಿಸುತ್ತೇವೆ:
ರಾಜ್ಯದಲ್ಲಿ ಈ ವರ್ಷ ಮೂರು ಬಾರಿ ಪ್ರವಾಹ ಬಂದಿದ್ದೂ, ಆಗಸ್ಟ್​ನಿಂದ‌ ಈವರೆಗೆ ಪರಿಹಾರ ನೀಡಿಲ್ಲ. ಕಳೆದ ಬಾರಿಯ ಪ್ರವಾಹ ಪೀಡಿತರಿಗೂ ಪರಿಹಾರ ನೀಡಿಲ್ಲ. ಇದನ್ನ ಬಹಳ ಗಂಭೀರವಾಗಿ ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಸಭೆ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಪಕ್ಷದವರಿಗೆ ಲಾಕ್ ಮಾಡ್ತಾರೆ ಎಂದ ಸಿದ್ದರಾಮಯ್ಯ:
ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಮನೆಗಳನ್ನು ಕಟ್ಟುವುದಕ್ಕೆ ಅನುದಾನವನ್ನ ಕೊಟ್ಟಿಲ್ಲ, ಬೇಕಾದವರಿಗೆ ಅನ್​ಲಾಕ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಪಕ್ಷದವರಿಗೆ ಲಾಕ್ ಮಾಡ್ತಾರೆ ಎಂದರು.

Published On - 4:43 pm, Sun, 6 December 20