ರಾಹುಲ್ ನಾಯಕತ್ವದ ಬಗ್ಗೆ ಶರದ್ ಪವಾರ್ ಆಕ್ಷೇಪ: ಟೀಕೆ ಬೇಡ ಎಂದ ಯಶೋಮತಿ ಠಾಕುರ್
ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಮಹಾ ವಿಕಾಸ್ ಅಘಾಡಿ (MVA) ನಾಯಕರ ಬಳಿ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಕೇಳಿಕೊಂಡಿದ್ದಾರೆ.
ದೆಹಲಿ: ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಹಾಗೂ ಮಹಿಳಾ ಮತ್ತು ಕಲ್ಯಾಣ ಸಚಿವೆ ಯಶೋಮತಿ ಠಾಕುರ್, ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಆಕ್ಷೇಪಿಸಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಮಹಾ ವಿಕಾಸ್ ಅಘಾಡಿ (MVA) ನಾಯಕರ ಬಳಿ ಕೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಸುಸ್ಥಿರ ಆಡಳಿತ ಬೇಕಾದರೆ ಈ ರೀತಿ ನಡೆದುಕೊಳ್ಳಬಾರದು ಎಂದು ಪಕ್ಷದ ಇತರ ನಾಯಕರನ್ನು ಎಚ್ಚರಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಬೇಕೆಂದು ಹೇಳಿದ್ದಾರೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (MPCC)ಯ ಕಾರ್ಯನಿರ್ವಾಹಕ ಅಧ್ಯಕ್ಷೆಯಾಗಿ ಈ ಮಾತನ್ನು ಹೇಳಿರುವುದಾಗಿ ತಿಳಿಸಿದ್ದಾರೆ.
ಮಹಾ ವಿಕಾಸ್ ಅಘಾಡಿಯ ರಚನೆಯು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಾವು ನಂಬಿಕೆ ಇಟ್ಟಿದ್ದರಿಂದ ಸಾಧ್ಯವಾಗಿದೆ. ನಮ್ಮ ನಾಯಕತ್ವ ಸ್ಥಿರವಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಹಿಂದೆ, ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ನಾಯಕತ್ವವನ್ನು ಉದ್ದೇಶಿಸಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕೆಲವು ಸಮಸ್ಯೆಗಳಿವೆ. ಅವರು ನಾಯಕರಾಗಿ ಸ್ಥಿರತೆ ಹೊಂದಿಲ್ಲ ಎಂದು ಹೇಳಿದ್ದರು. ನಂತರದಲ್ಲಿ, ಶರದ್ ಪವಾರ್ ಹೇಳಿಕೆಯನ್ನು ರಾಹುಲ್ ಗಾಂಧಿಗೆ ನೀಡಿದ ಸಲಹೆ ಎಂದು ಎನ್ಸಿಪಿ ಹೇಳಿಕೊಂಡಿತ್ತು.
ಈ ಘಟನೆಯ ಬೆನ್ನಲ್ಲೇ ಯಶೋಮತಿ ಠಾಕೂರ್ ಅವರಿಂದ MVA ನಾಯಕರಿಗೆ ಮೇಲಿನ ಸೂಚನೆ ಸಿಕ್ಕಿದೆ.
Being a working president of MPCC I must appeal colleagues in MVA if you want stable govt in maharashtra then stop commenting leadership of Congress. Everybody should follow basic rules of coalition.
— Adv. Yashomati Thakur (@AdvYashomatiINC) December 5, 2020
Our leadership is very strong and stable. Formation of MVA is result of our strong belief in democratic values.@INCIndia @INCMaharashtra @RahulGandhi @kcvenugopalmp @HKPatil1953 @bb_thorat
— Adv. Yashomati Thakur (@AdvYashomatiINC) December 5, 2020
Published On - 4:33 pm, Sun, 6 December 20