ಹೆಚ್ಚುತ್ತಲೇ ಇದೆ ಚೀನಾ ಉಪಟಳ; ಅರುಣಾಚಲ ಪ್ರದೇಶ ಸಮೀಪ 3 ಗ್ರಾಮಗಳ ನಿರ್ಮಾಣ
ಗಡಿಯಲ್ಲಿ ಚೀನಾದ ಉಪಟಳ ಹೆಚ್ಚುತ್ತಲೇ ಇದೆ. ಬ್ರಹ್ಮಪುತ್ರಾ ನದಿಗೆ ಟಿಬೆಟ್ನಲ್ಲಿ ಅಣೆಕಟ್ಟು ಕಟ್ಟಿ, ಜಲವಿದ್ಯುತ್ ಯೋಜನೆ ಪ್ರಾರಂಭ ಮಾಡುವುದಾಗಿ ಹೇಳಿಕೊಂಡಿರುವ ಚೀನಾ, ಅರುಣಾಚಲ ಪ್ರದೇಶ ಸಮೀಪ 3 ಗ್ರಾಮಗಳನ್ನು ಸದ್ದಿಲ್ಲದೆ ನಿರ್ಮಿಸಿ, ಜನ ವಸತಿಗೆ ಅನುವು ಮಾಡಿಕೊಟ್ಟಿದೆ.
ದೆಹಲಿ: ಗಡಿಯಲ್ಲಿ ಚೀನಾದ ಉಪಟಳ ಹೆಚ್ಚುತ್ತಲೇ ಇದೆ. ಬ್ರಹ್ಮಪುತ್ರಾ ನದಿಗೆ ಟಿಬೆಟ್ನಲ್ಲಿ ಅಣೆಕಟ್ಟು ಕಟ್ಟಿ, ಜಲವಿದ್ಯುತ್ ಯೋಜನೆ ಪ್ರಾರಂಭ ಮಾಡುವುದಾಗಿ ಹೇಳಿಕೊಂಡಿರುವ ಚೀನಾ, ಅರುಣಾಚಲ ಪ್ರದೇಶ ಸಮೀಪ 3 ಗ್ರಾಮಗಳನ್ನು ಸದ್ದಿಲ್ಲದೆ ನಿರ್ಮಿಸಿ, ಜನ ವಸತಿಗೆ ಅನುವು ಮಾಡಿಕೊಟ್ಟಿದೆ.
ಟಿಬೆಟ್ನ ಕೋನಾ ಕೌಂಟಿ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯನ್ನು ಬೇರ್ಪಡಿಸುವ ಗಡಿಯಾದ ಬುಮ್ ಲಾ ಪಾಸ್ನಿಂದ 5 ಕಿಮೀ ದೂರದಲ್ಲಿ ಚೀನಾದ ಮೂರು ಗ್ರಾಮಗಳು ತಲೆ ಎತ್ತಿವೆ. ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿ ಸೇರುವ ಬುಮ್ ಲಾ ಪಾಸ್ದಲ್ಲಿ ಹಳ್ಳಿಗಳನ್ನು ನಿರ್ಮಿಸುವ ಮೂಲಕ ಚೀನಾ, ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ತನ್ನ ಪ್ರಾದೇಶಿಕ ಹಕ್ಕು ಸ್ಥಾಪಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
ಭಾರತದ ಗಡಿಯುದ್ಧಕ್ಕೂ ಹಾನ್ (ಚೀನಿ) ಜನಾಂಗ ಮತ್ತು ಟಿಬೆಟ್ನಲ್ಲಿರುವ ಕಮ್ಯೂನಿಸ್ಟ್ ಪಾರ್ಟಿಯವರಿಗಾಗಿ ಗ್ರಾಮಗಳನ್ನು ನಿರ್ಮಿಸಿ, ಅವರನ್ನು ನೆಲೆಗೊಳಿಸುವ ಮೂಲಕ ತನ್ನ ಪ್ರಾದೇಶಿಕ ಹಕ್ಕು ಬಲಪಡಿಸುತ್ತಿದೆ. ಹಾಗೇ, ಗಡಿಯಲ್ಲಿ ಒಳನುಸುಳುವಿಕೆಯನ್ನೂ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಚೀನಾ ವೀಕ್ಷಕ ಡಾ. ಬ್ರಹ್ಮ ಚೆಲ್ಲಾನಿ ತಿಳಿಸಿದ್ದಾರೆ.
2017ರಲ್ಲಿ ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ಸ್ಥಳವಾದ ಡೋಕ್ಲಾಮ್ನಿಂದ ಏಳು ಕಿಮೀ ದೂರದಲ್ಲಿ, ಭೂತಾನ್ ಸಾರ್ವಭೌಮತ್ವ ಇರುವ ಪ್ರದೇಶದಲ್ಲಿ ಚೀನಾ ಇತ್ತೀಚೆಗೆ ಹಳ್ಳಿ ನಿರ್ಮಾಣ ಮಾಡಿದ್ದು, ಹೈ ರೆಸಲ್ಯೂಶನ್ ಇರುವ ಉಪಗ್ರಹ ಚಿತ್ರದಿಂದ ಗೊತ್ತಾಗಿತ್ತು. ಅದರ ಬೆನ್ನಲ್ಲೇ ಇನ್ನೊಂದು ಸೆಟಲೈಟ್ ಚಿತ್ರ ಹೊರಬಿದ್ದಿದ್ದು, ಮತ್ತೆ ಮೂರು ಹಳ್ಳಿಗಳು ತಲೆ ಎತ್ತಿದ್ದು ಕಂಡುಬಂದಿದೆ.
ವಾಪಸ್ ಬರುವಾಗ ಚಂದ್ರನ ಅಂಗಳದಲ್ಲಿ ಧ್ವಜ ನೆಟ್ಟು ಬಂದ ಚೀನಾ ಗಗನನೌಕೆ!