ಶಾರದಾ ಚಿಟ್​ಫಂಡ್ ಹಗರಣದ ಪ್ರಮುಖ ಆರೋಪಿಯಿಂದ ಪ್ರಧಾನಿ ಮೋದಿಗೆ ಪತ್ರ; ಬಿಜೆಪಿಗೂ ಎದುರಾಗಲಿದೆಯಾ ಸಂಕಷ್ಟ?

ಸುದಿಪ್ತಾ ಸೇನ್​ ಡಿಸೆಂಬರ್​ 1ರಂದು ಬರೆದಿರುವ ಈ ಪತ್ರದಲ್ಲಿರುವ ಆರೋಪವನ್ನು ಕಾಂಗ್ರೆಸ್​, ಬಿಜೆಪಿ, ಸಿಪಿಐ(ಎಂ), ಅಲ್ಲಗಳೆದಿವೆ. ಇದು ಹಾಸ್ಯಾಸ್ಪದ ಎಂದು ಹೇಳಿವೆ. ಆದರೆ ಟಿಎಂಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ.

ಶಾರದಾ ಚಿಟ್​ಫಂಡ್ ಹಗರಣದ ಪ್ರಮುಖ ಆರೋಪಿಯಿಂದ ಪ್ರಧಾನಿ ಮೋದಿಗೆ ಪತ್ರ; ಬಿಜೆಪಿಗೂ ಎದುರಾಗಲಿದೆಯಾ ಸಂಕಷ್ಟ?
ಶಾರದಾ ಚಿಟ್​ಫಂಡ್ ಹಗರಣದ ಆರೋಪಿ ಸುದೀಪ್ತಾ ಸೇನ್​
Follow us
Lakshmi Hegde
|

Updated on:Dec 06, 2020 | 5:29 PM

ಕೋಲ್ಕತ್ತ: ಪಶ್ಚಿಮ ಬಂಗಾಳದ ಅತಿದೊಡ್ಡ ಹಗರಣವಾದ ಶಾರದಾ ಚಿಟ್​ಫಂಡ್ ಪೋಂಜಿ ಸ್ಕ್ಯಾಮ್​ನ ಪ್ರಮುಖ ಆರೋಪಿ ಸುದಿಪ್ತಾ ಸೇನ್​ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರ ಬರೆದು, ಹಲವು ಪ್ರಮುಖ ವ್ಯಕ್ತಿಗಳು, ರಾಜಕೀಯ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಬಹುಕೋಟಿ ಹಗರಣದಲ್ಲಿ ವಿಚಾರಣೆಗೆ ಒಳಪಟ್ಟಿರುವ ಸೇನ್​, ನಾನು ಶಾರದಾ ಗ್ರೂಪ್​ನ ಮಾಲೀಕ ಮತ್ತು ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು, ಬಿಜೆಪಿ, ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳ ಪ್ರಮುಖ ರಾಜಕಾರಣಿಗಳು ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ. ಆದರೆ ಅವರ ವಿರುದ್ಧ ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ ಹಗರಣದಲ್ಲಿ ಅವರೂ ಶಾಮೀಲಾಗಿದ್ದು, ಸಿಬಿಐ ಮತ್ತು ರಾಜ್ಯ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಹಾಗೂ ಸಿಎಂಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ನೈತಿಕತೆ ಬಗ್ಗೆ ದೊಡ್ಡದೊಡ್ಡ ಭಾಷಣ ಮಾಡುತ್ತಿರುವವರು ನಿಜಕ್ಕೂ ಬಡಜನರಿಗೆ ಮೋಸ ಮಾಡಿದ್ದಾರೆ. ಅವರ ಬಗ್ಗೆ ಸಿಬಿಐ, ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದರೆ ಅವರು ಮೌನವಾಗಿದ್ದಾರೆ. ದಯವಿಟ್ಟು ಶಾರದಾ ಚಿಟ್​ಫಂಡ್ ಹಗರಣವನ್ನು ಸೂಕ್ತರೀತಿಯಲ್ಲಿ ತನಿಖೆ ಮಾಡಲಿ ಎಂದೂ ಪ್ರೆಸಿಡೆನ್ಸಿ ಕರೆಕ್ಷನಲ್​ ಹೋಂ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸುದಿಪ್ತಾ ಸೇನ್​ ತಿಳಿಸಿದ್ದಾರೆ.

ಅಲ್ಲಗಳೆದ ರಾಜಕೀಯ ಪಕ್ಷಗಳು ಸುದಿಪ್ತಾ ಸೇನ್​ ಡಿಸೆಂಬರ್​ 1ರಂದು ಬರೆದಿರುವ ಈ ಪತ್ರದಲ್ಲಿರುವ ಆರೋಪವನ್ನು ಕಾಂಗ್ರೆಸ್​, ಬಿಜೆಪಿ, ಸಿಪಿಎಂ ಅಲ್ಲಗಳೆದಿವೆ. ಇದು ಹಾಸ್ಯಾಸ್ಪದ ಎಂದು ಹೇಳಿವೆ. ಆದರೆ ಟಿಎಂಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ.

ಏನಿದು ಹಗರಣ? ಹಣದುಪ್ಪಟ್ಟು ಮಾಡಿಕೊಡುವ ಆಮಿಷ ಒಡ್ಡಿದ್ದ ಶಾರದಾ ಗ್ರೂಪ್​, ಸುಮಾರು 17 ಲಕ್ಷ ಠೇವಣಿದಾರರಿಂದ 200-300 ಶತಕೋಟಿ ರೂಪಾಯಿ ಸಂಗ್ರಹಿಸಿತ್ತು. ಇದರಲ್ಲಿ 200 ಖಾಸಗಿ ಸಂಸ್ಥೆಗಳೂ ಶಾಮಿಲಾಗಿದ್ದವು. ಆದರೆ ನಂತರ ಇದರಲ್ಲಿ ಅಕ್ರಮ ಕಂಡುಬಂದಿದ್ದರಿಂದ ಸುಪ್ರೀಂಕೋರ್ಟ್ ಇದರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗಾಗಲೇ ಈ ಹಗರಣದಲ್ಲಿ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಸೇರಿ ಕೆಲವು ಗಣ್ಯರ ಹೆಸರು ಕೇಳಿಬಂದಿದೆ. ಈಗ ಪ್ರಮುಖ ಆರೋಪಿ ಸೇನ್​ ಮತ್ತೊಂದಷ್ಟು ಪ್ರಮುಖರು ಭಾಗಿಯಾಗಿದ್ದಾರೆಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ತಾಕತ್ತಿದ್ದರೆ ಅರೆಸ್ಟ್ ಮಾಡಿ, ಜೈಲಲ್ಲಿ ಇದ್ದುಕೊಂಡೇ ನನ್ನ ಪಕ್ಷವನ್ನು ಗೆಲ್ಲಿಸುತ್ತೇನೆ; ಬಿಜೆಪಿಗೆ ದೀದಿ ಓಪನ್​ ಚಾಲೆಂಜ್

ಧೈರ್ಯವಿದ್ದರೆ ಅರೆಸ್ಟ್ ಮಾಡಿ, ರೈತರಿಗಾಗಿ ನೇಣಿಗೇರಲೂ ಸಿದ್ಧ: ತೇಜಸ್ವಿ ಯಾದವ್​

India vs Australia 2020, 2nd T20, LIVE Scores : ಎರಡನೇ ಟಿ20 ಪಂದ್ಯದಲ್ಲೂ ಗೆಲ್ಲುತ್ತಾ ಭಾರತ?

Published On - 2:34 pm, Sun, 6 December 20