ಹೈದರಾಬಾದ್ ಚುನಾವಣೆಯಲ್ಲಿ ಬಿಜೆಪಿಗೆ ಆನೆಬಲ; ಟಿಆರ್ಎಸ್ಗಿಂತ ಕೇವಲ 10 ಸಾವಿರ ಮತಗಳ ಹಿನ್ನಡೆ
ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬಿಜೆಪಿ ಇದೆ. ಅಚ್ಚರಿ ವಿಚಾರ ಎಂದರೆ, ಎರಡೂ ಪಕ್ಷಗಳ ನಡುವಣ ಒಟ್ಟು ಮತಗಳ ಅಂತರ ಕೇವಲ 10 ಸಾವಿರ ಮಾತ್ರ!
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬಿಜೆಪಿ ಇದೆ. ಅಚ್ಚರಿ ವಿಚಾರ ಎಂದರೆ, ಎರಡೂ ಪಕ್ಷಗಳ ನಡುವಣ ಒಟ್ಟು ಮತಗಳ ಅಂತರ ಕೇವಲ 10 ಸಾವಿರ ಮಾತ್ರ!
150 ಸ್ಥಾನಗಳು ಇರುವ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ನಲ್ಲಿ, ಟಿಆರ್ಎಸ್ ಗಳಿಸಿದ್ದು 55 ಸ್ಥಾನ, ಬಿಜೆಪಿಗೆ ಸಿಕ್ಕಿದ್ದು 48 ಸ್ಥಾನ. ಎಐಎಮ್ಐಎಮ್ 44 ಮತ್ತು ಕಾಂಗ್ರೆಸ್ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಒಂದು ಸ್ಥಾನದ ಎಣಿಕೆ ನಿಲ್ಲಿಸಲಾಗಿದೆ. ಬಿಜೆಪಿ ಹಾಗೂ ಟಿಆರ್ಎಸ್ ನಡುವಣ ಸ್ಥಾನಗಳ ಅಂತರ ಏಳಿದ್ದರೂ, ಮತಗಳ ಅಂತರ ತುಂಬಾನೇ ಕಡಿಮೆ ಇರುವುದು ಕಮಲ ಪಾಳಯಕ್ಕೆ ಹೊಸ ಹುರುಪು ನೀಡಿದೆ.
ಒಟ್ಟು ಚಲಾವಣೆಯಾದ ಮತಗಳ ಪೈಕಿ ಟಿಆರ್ಎಸ್ಗೆ 12.06 ಲಕ್ಷ ಅಥವಾ ಶೇ.35.81 ಸಿಕ್ಕರೆ, ಬಿಜೆಪಿಗೆ 11.95 ಲಕ್ಷ ಅಥವಾ ಶೇ.35.56 ಮತಗಳು ಸಿಕ್ಕಿವೆ. ಇದು ನಿಜಕ್ಕೂ ಟಿಆರ್ಎಸ್ಗೆ ಆಘಾತ ನೀಡುವ ವಿಚಾರವಾಗಿದೆ.
ನಮಗೆ ಸಮುಯವಿರಲಿಲ್ಲ: ಚುನಾವಣೆಯಲ್ಲಿ ಸಾಧಾರಣ ಗೆಲುವು ದಾಖಲಿಸಿದ ನಂತರ ಟಿಆರ್ಎಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಟಿಆರ್ಎಸ್ ರಾಜ್ಯಾಧ್ಯಕ್ಷ ಸಂಜಯ್ ಬಂದಿ ಮಾತನಾಡಿ, ನಮಗೆ ಚುನಾವಣೆ ಎದುರಿಸೋಕೆ ಸಮಯ ಸಿಗಲಿಲ್ಲ. ಹೀಗಾಗಿ ಸೂಕ್ತ ಅಭ್ಯರ್ಥಿ ಆಯ್ಕೆ ಕೂಡ ನಮ್ಮಿಂದ ಸಾಧ್ಯವಾಗಿಲ್ಲ. ಒಂದೊಮ್ಮೆ ನಮಗೆ ಸಮಯಾವಕಾಶ ಸಿಕ್ಕಿದ್ದರೆ 100 ಸ್ಥಾನವನ್ನು ಸುಲಭವಾಗಿ ಗೆಲ್ಲುತ್ತಿದ್ದೆವು ಎಂದಿದ್ದಾರೆ.
ಬಿಜೆಪಿಗೆ ವರದಾನವಾದ ಪ್ರವಾಹ?: ಹೈದರಾಬಾದ್ನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪ್ರವಾಹ ಎದುರಾಗಿತ್ತು. ಸಾಕಷ್ಟು ಜನರು ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ವೇಳೆ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಅಲ್ಲಿನ ಸರ್ಕಾರ ಎಡವಿತ್ತು. ಇದರಿಂದ ಕೋಪ ಗೊಂಡಿರುವ ಸಂತ್ರಸ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ವಾದವನ್ನು ಕೆಲ ರಾಜಕೀಯ ಪಂಡಿತರು ಮುಂದಿಡುತ್ತಿದ್ದಾರೆ.
ಬಿಜೆಪಿಗೆ ಹೆಚ್ಚಿದ ಆತ್ಮವಿಶ್ವಾಸ: ತೆಲಂಗಾಣದಲ್ಲಿ ಸ್ಥಾನ ಭದ್ರಮಾಡಿಕೊಳ್ಳಲು ಹವಣಿಸುತ್ತಿದ್ದ ಬಿಜೆಪಿಗೆ ಈ ಚುನಾವಣಾ ಫಲಿತಾಂಶ ದೊಡ್ಡ ಬಲ ನೀಡಿದೆ. ವಿಳಾಸಕ್ಕೆ ಇಲ್ಲದ ಪಕ್ಷ ಎಂದು ಕರೆಯಲ್ಪಡುತ್ತಿದ್ದ ಬಿಜೆಪಿ ನಿಧಾನವಾಗಿ ಪ್ರಾಬಲ್ಯ ಸಾಧಿಸುತ್ತಿದೆ. ಹೀಗಾಗಿ, 2023ರ ವಿಧಾನಸಭಾ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಲು ಬಿಜೆಪಿಗೆ ಇದು ಸಹಕಾರಿಯಾಗಿದೆ.
ಇನ್ನಷ್ಟು… GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಆರ್ಎಸ್-ಎಐಎಂಐಎಂ ನ ಹೈದರಾಬಾದ್ ನಡುವೆ ಯುದ್ಧ ಹೈದರಾಬಾದ್ ಪಾಲಿಕೆ ಚುನಾವಣೆ: ಸಚಿವ ಸುಧಾಕರ್ ಉಸ್ತುವಾರಿಯಲ್ಲಿ ರೆಡಿಯಾಯ್ತು ರಣತಂತ್ರ
Published On - 3:06 pm, Sun, 6 December 20