ಜನ ಸಾಮಾನ್ಯರಿಂದಲೂ ಸಂವಿಧಾನ ಕರ್ತೃವಿನ ಸ್ಮರಣೆ: #BharathRatna ಟ್ರೆಂಡಿಂಗ್

ಬದುಕಿನುದ್ದಕ್ಕೂ ಸಾಮಾಜಿಕ ಸಮಾನತೆಯನ್ನು ಸಾರಿದ ಅಂಬೇಡ್ಕರರನ್ನು ವಿಧ ವಿಧವಾಗಿ ಸ್ಮರಿಸಿದ ನಾಗರಿಕರು, ಮರಣೋತ್ತರ ಭಾರತ ರತ್ನ ಗೌರವವಕ್ಕೆ ಪ್ರಾಪ್ತವಾದ ನಾಯಕನಿಗೆ #BharathRatna ಹ್ಯಾಷ್​ಟ್ಯಾಗ್​ನೊಂದಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಜನ ಸಾಮಾನ್ಯರಿಂದಲೂ ಸಂವಿಧಾನ ಕರ್ತೃವಿನ ಸ್ಮರಣೆ: #BharathRatna ಟ್ರೆಂಡಿಂಗ್
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 06, 2020 | 4:14 PM

ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣ ದಿನದಂದು ರಾಜಕೀಯ ನಾಯಕರ ಜೊತೆ ದೇಶದ ಜನತೆಯೂ ಸಂವಿಧಾನ ಕರ್ತೃವನ್ನು ಗೌರವದಿಂದ ಸ್ಮರಿಸಿದ್ದಾರೆ.

ಟ್ವಿಟರ್​​ನಲ್ಲಿ #BharathRatna ಹ್ಯಾಷ್​ಟ್ಯಾಗ್ ಟ್ರೆಂಡ್ ಆಗಿತ್ತು. ಬದುಕಿನುದ್ದಕ್ಕೂ ಸಾಮಾಜಿಕ ಸಮಾನತೆಯನ್ನು ಸಾರಿದ ಅಂಬೇಡ್ಕರರನ್ನು ವಿಧ ವಿಧವಾಗಿ ಸ್ಮರಿಸಿದ ನಾಗರಿಕರು, ಮರಣೋತ್ತರ ಭಾರತ ರತ್ನ ಗೌರವವಕ್ಕೆ ಪ್ರಾಪ್ತವಾದ ನಾಯಕನಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ವಕೀಲರಾಗಿ, ಆರ್ಥಿಕ ತಜ್ಞರಾಗಿ, ರಾಜಕಾರಣಿಯಾಗಿ, ಸಾಮಾಜಿಕ ಹೋರಾಟಗಾರನಾಗಿಯೂ ಸೇವೆ ಸಲ್ಲಿಸಿದ ಬಾಬಾ ಸಾಹೇಬರ ಕುರಿತು ಮಧ್ಯಾಹ್ನದ ವೇಳೆಗೆ 1000ಕ್ಕೂ ಅಧಿಕ ಮಂದಿ #BharathRatna ಬಳಸಿ ಟ್ವೀಟ್ ಮಾಡಿದ್ದರು.

ಸಂವಿಧಾನ ಕರ್ತೃವಿನ ಹೆಸರಲ್ಲಿದೆ ಸಾವಿರಾರು ಸಂಸ್ಥೆಗಳು.. ಅಂಬೇಡ್ಕರ್ ಹೆಸರಿನ ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ದೇಶದುದ್ದಕ್ಕೂ ಇವೆ. ನಾಗ್ಪುರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹೆಸರಿಡಲಾಗಿದೆ. ದೆಹಲಿಯಲ್ಲಿ ಅಂಬೇಡ್ಕರ್ ವಿಶ್ವವಿದ್ಯಾಲಯವಿದೆ. ಜಲಂಧರ್​​ನಲ್ಲಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿದೆ. ಅಷ್ಟೇ ಅಲ್ಲದೇ, ದೇಶದ ಉದ್ದಗಲಕ್ಕೂ ಸಾವಿರಾರು ಸಂಸ್ಥೆಗಳಿಗೆ ಅಂಬೇಡ್ಕರ್ ಹೆಸರಿಡಲಾಗಿದೆ.

ಸಂವಿಧಾನವನ್ನು ಬದಲಿಸುವ ಮಾತುಗಳು ಕೇಳಿಬರುತ್ತಿರುವ ಈ ದುರಿತ ಕಾಲದಲ್ಲಿ ಅಂಬೇಡ್ಕರ್ ಪದೇಪದೇ ನೆನಪಾಗುತ್ತಾರೆ. ಸದಾಕಾಲ ನಾವು ಅನುಸರಿಸುವ ಸಂವಿಧಾನದ ಮೂಲಕ ಅವರು ಭಾರತೀಯರ ಜೊತೆಗಿರುತ್ತಾರೆ ಎಂಬುದಂತೂ ದಿಟ ಎಂದು ಹಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇಂದು ಅಂಬೇಡ್ಕರ್​ ಮಹಾ ಪರಿನಿರ್ವಾಣ ದಿನ: ಸಂವಿಧಾನ ಕರ್ತೃವಿಗೆ ನಾಯಕರ ಕೃತಜ್ಞತೆ