ಶಿಡ್ಲಘಟ್ಟದಲ್ಲಿ ಜಮೀನು ವಿವಾದ ಗಲಾಟೆ: ಸಿಸಿಟಿವಿ, ನೀರಾವರಿ ಪೈಪುಗಳನ್ನು ದುಷ್ಕರ್ಮಿಗಳು ಪೀಸ್ ಪೀಸ್​ ಮಾಡಿಬಿಟ್ಟರು

|

Updated on: Mar 29, 2024 | 1:51 PM

ಮೊದಲೇ ಬರಗಾಲ, ಹನಿಹನಿ ನೀರನ್ನು ಬಸಿದು ತೋಟದಲ್ಲಿ ಬೆಳೆ ಇಡಲಾಗಿತ್ತು. ಬೆಳೆ ಬಂದಿದ್ದರೆ ಒಂದಷ್ಟು ಮಂದಿಯ ಹೊಟ್ಟೆ ತುಂಬುತ್ತಿತ್ತು. ಆದರೆ ರೈತನ ಮೇಲಿನ ದ್ವೇಷಕ್ಕೆ ಬೆಳೆ ಹಾಗೂ ಹನಿ ನೀರಾವರಿ ಪೈಪುಗಳನ್ನು ಧ್ವಂಸಗೊಳಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸುವಂತಾಗಿದೆ.

ಶಿಡ್ಲಘಟ್ಟದಲ್ಲಿ ಜಮೀನು ವಿವಾದ ಗಲಾಟೆ: ಸಿಸಿಟಿವಿ, ನೀರಾವರಿ ಪೈಪುಗಳನ್ನು ದುಷ್ಕರ್ಮಿಗಳು ಪೀಸ್ ಪೀಸ್​ ಮಾಡಿಬಿಟ್ಟರು
ಶಿಡ್ಲಘಟ್ಟದಲ್ಲಿ ಜಮೀನು ವಿವಾದ: ನೀರಾವರಿ ಪೈಪುಗಳ ಪೀಸ್ ಪೀಸ್​ ಮಾಡಿಬಿಟ್ಟರು
Follow us on

ಜಮೀನು ವಿವಾದ ಹಿನ್ನೆಲೆ ತೋಟದಲ್ಲಿದ್ದ ನೀರಾವರಿ ಪೈಪುಗಳು (Irrigation pipes) ಹಾಗೂ ತೋಟಕ್ಕೆ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು (CC camera) ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ ಈ ವರದಿ ನೋಡಿ… ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ (Sidlaghatta) ತಾಲ್ಲೂಕಿನ ಎಸ್. ಗುಂಡ್ಲಹಳ್ಳಿ ಗ್ರಾಮದ ನಿವಾಸಿ ಶಾಂತಮ್ಮ ಹಾಗೂ ಗ್ರಾಮದ ಜಿ.ಎ. ಅಂಬರೀಶ ಸೇರಿದಂತೆ 7 ಜನರ ಮಧ್ಯೆ ಜಮೀನು ವಿವಾದವಿದೆ. ಗ್ರಾಮದ ಸ. ನಂ. 52/1 ರಲ್ಲಿ 0-24 ಗುಂಟೆ ಜಮೀನಿಗಾಗಿ ಈ ವಿವಾದ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಶಾಂತಮ್ಮ ಪರ ತಡೆಯಾಜ್ಞೆ ಇದೆ. ಆದರೂ ಕೆಲವು ದುಷ್ಕರ್ಮಿಗಳು ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ತೋಟದಲ್ಲಿದ್ದ ಹನಿ ನೀರಾವರಿ ಪೈಪುಗಳು ಹಾಗೂ ಸಿ.ಸಿ. ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ (miscreants).

ಇನ್ನು ತೋಟದಲ್ಲಿ ಬಾಳೆ, ಚೆಂಡು ಹೂವು, ಜೋಳ ಬೆಳೆಯಲಾಗಿತ್ತು. ಆದರೆ ಜಮೀನಿನಲ್ಲಿರುವ ರೈತರ ಮೇಲಿನ ದ್ವೇಷವನ್ನು ಬೆಳೆಗಳ ಮೇಲೆ ತೀರಿಸಿಕೊಳ್ಳಲಾಗಿದೆ. ದುಷ್ಕರ್ಮಿಗಳು ಬೆಳೆ ಹಾಗೂ ಹನಿ ನೀರಾವರಿ ಸಾಮಾಗ್ರಿಗಳನ್ನು ನಾಶಗೊಳಿಸುವ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Also Read: ನೂರಾರು ವರ್ಷದಿಂದ ನಂಬಿದ ಭಕ್ತರಿಗೆ ಈ ರತಿ-ಕಾಮಣ್ಣ ನೀಡುವ ಭಾಗ್ಯಗಳು ಒಂದೆರಡಲ್ಲ!

ಮೊದಲೇ ಬರಗಾಲ, ಹನಿಹನಿ ನೀರನ್ನು ಬಸಿದು ತೋಟದಲ್ಲಿ ಬೆಳೆ ಇಡಲಾಗಿತ್ತು. ಬೆಳೆ ಬಂದಿದ್ದರೆ ಒಂದಷ್ಟು ಮಂದಿಯ ಹೊಟ್ಟೆ ತುಂಬುತ್ತಿತ್ತು. ಆದರೆ ರೈತನ ಮೇಲಿನ ದ್ವೇಷಕ್ಕೆ ಬೆಳೆ ಹಾಗೂ ಹನಿ ನೀರಾವರಿ ಪೈಪುಗಳನ್ನು ಧ್ವಂಸಗೊಳಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ