ಕೊರೊನಾ ಮಾರಿ ಭೀತಿಯಿದ್ದರೂ ದೇವಿಯ ಬೆಳ್ಳಿ ಮುಖವಾಡ ಕದ್ದ ಖದೀಮರು

ಮೈಸೂರು: ಕೊರೊನಾ ಭೀತಿ ನಡುವೆಯೇ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕೆ. ಆರ್‌‌. ನಗರ ತಾಲ್ಲೂಕಿನ ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀ ದೊಡ್ಡಮ್ಮ ಕರಿಯಮ್ಮ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಖದೀಮರು ದೇವಸ್ಥಾನದ ಬಾಗಿಲು ಮುರಿದು ದೇವಿಯ ಬೆಳ್ಳಿಯ ಮುಖವಾಡ ಕಳ್ಳತನ ಮಾಡಿದ್ದಾರೆ. ಕಳೆದ ಐದಾರು ತಿಂಗಳ ಹಿಂದೆಯಷ್ಟೇ ಮುಖವಾಡವನ್ನು ಮಾಡಿಸಿ ಶ್ರೀ ದೊಡ್ಡಮ್ಮ ದೇವಿ ಮತ್ತು ಶ್ರೀ ಕರಿಯಮ್ಮ ದೇವಿ ವಿಗ್ರಹಗಳಿಗೆ ತಲಾ ಅರ್ಧ ಕೆ.ಜಿ. ಬೆಳ್ಳಿಯ ಮುಖವಾಡವನ್ನು ಹಾಕಲಾಗಿತ್ತು. ಆದರೆ ಕಳ್ಳರು ಈಗ ಆ […]

ಕೊರೊನಾ ಮಾರಿ ಭೀತಿಯಿದ್ದರೂ ದೇವಿಯ ಬೆಳ್ಳಿ ಮುಖವಾಡ ಕದ್ದ ಖದೀಮರು
Edited By:

Updated on: Jul 24, 2020 | 11:19 AM

ಮೈಸೂರು: ಕೊರೊನಾ ಭೀತಿ ನಡುವೆಯೇ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕೆ. ಆರ್‌‌. ನಗರ ತಾಲ್ಲೂಕಿನ ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀ ದೊಡ್ಡಮ್ಮ ಕರಿಯಮ್ಮ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.

ಖದೀಮರು ದೇವಸ್ಥಾನದ ಬಾಗಿಲು ಮುರಿದು ದೇವಿಯ ಬೆಳ್ಳಿಯ ಮುಖವಾಡ ಕಳ್ಳತನ ಮಾಡಿದ್ದಾರೆ. ಕಳೆದ ಐದಾರು ತಿಂಗಳ ಹಿಂದೆಯಷ್ಟೇ ಮುಖವಾಡವನ್ನು ಮಾಡಿಸಿ ಶ್ರೀ ದೊಡ್ಡಮ್ಮ ದೇವಿ ಮತ್ತು ಶ್ರೀ ಕರಿಯಮ್ಮ ದೇವಿ ವಿಗ್ರಹಗಳಿಗೆ ತಲಾ ಅರ್ಧ ಕೆ.ಜಿ. ಬೆಳ್ಳಿಯ ಮುಖವಾಡವನ್ನು ಹಾಕಲಾಗಿತ್ತು.

ಆದರೆ ಕಳ್ಳರು ಈಗ ಆ ಮುಖವಾಡವನ್ನು ಕದ್ದಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.