ರಮೇಶ್ ಜಾರಕಿಹೊಳಿ CD ಕೇಸ್; ಮೂವರನ್ನು ವಶಕ್ಕೆ ಪಡೆದ SIT

|

Updated on: Mar 14, 2021 | 12:40 PM

ರಮೇಶ್ ಜಾರಕಿಹೊಳಿ CD ಕೇಸ್ ಎಸ್​ಐಟಿಗೆ ವರ್ಗಾವಣೆಯಾಗುತ್ತಿದ್ದಂತೆ 3 ಜನರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ ಪತ್ರಕರ್ತ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೂಲದ ಪತ್ರಕರ್ತ, ಯುವತಿಯ ಗೆಳೆಯ ಸೇರಿ ಈಗಾಗಲೇ ವಿಚಾರಣೆ ಮಾಡಲಾಗಿದ್ದ ಮೂವರನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ.

ರಮೇಶ್ ಜಾರಕಿಹೊಳಿ CD ಕೇಸ್; ಮೂವರನ್ನು ವಶಕ್ಕೆ ಪಡೆದ SIT
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ CD ಕೇಸ್ ಎಸ್​ಐಟಿಗೆ ವರ್ಗಾವಣೆಯಾಗುತ್ತಿದ್ದಂತೆ 3 ಜನರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ ಪತ್ರಕರ್ತ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೂಲದ ಪತ್ರಕರ್ತ, ಯುವತಿಯ ಗೆಳೆಯ ಸೇರಿ ಈಗಾಗಲೇ ವಿಚಾರಣೆ ಮಾಡಲಾಗಿದ್ದ ಮೂವರನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಎಸ್​ಐಟಿ ಟೀಂ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಐವರನ್ನೂ ಬಿಟ್ಟು ಕಳುಹಿಸಲಾಗಿತ್ತು. ಈಗ ಮತ್ತೆ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಭಾಲ್ಕಿ ಪಟ್ಟಣದ ಅಭಿಷೇಕ್‌ನನ್ನು ವಶಕ್ಕೆ ಪಡೆದಿದ್ದ SIT
ಮಾರ್ಚ್ 11ರಂದು ಪೊಲೀಸರು ಭಾಲ್ಕಿ ಪಟ್ಟಣದ ಅಭಿಷೇಕ್‌ನನ್ನು ವಶಕ್ಕೆ ಪಡೆದಿದ್ದರು. ಅಭಿಷೇಕ್‌ನನ್ನು ವಶಕ್ಕೆ ಪಡೆದು 24 ಗಂಟೆಯಾದರೂ ಕೋರ್ಟ್‌ಗೆ ಹಾಜರುಪಡಿಸದ ಹಿನ್ನೆಲೆ ಭಾಲ್ಕಿ ಠಾಣೆಗೆ ಅಭಿಷೇಕ್‌ ದೊಡ್ಡಪ್ಪ ಕಿಡ್ನಾಪ್ ಎಂದು ದೂರು ನೀಡಿದ್ದರು. 2 ದಿನ ಅಜ್ಞಾತ ಸ್ಥಳದಲ್ಲಿಟ್ಟು ಸಿಡಿ ಬಗ್ಗೆ ವಿಚಾರಣೆ ನಡೆಸಿ ಬಳಿಕ SIT ಟೀಂ ಬಿಟ್ಟುಕಳಿಸಿತ್ತು.

ಡೀಲ್ ದುಡ್ಡಲ್ಲಿ ಜಾತ್ರೆ ಮಾಡಲು ಮುಂದಾಗಿದ್ದ ‘ಸಿಡಿ’ ಪತ್ರಕರ್ತ
ಇನ್ನು ಈ ಪ್ರಕರಣ ಸಂಬಂಧ ತುಮಕೂರಿನ ಶಿರಾ ಮೂಲದ ಕಿಂಗ್​ಪಿನ್ ಪತ್ರಕರ್ತ, ಐಷಾರಾಮಿ ಕಾರು ಖರೀದಿಗೆ ಲಕ್ಷ ಲಕ್ಷ ಹಣ ಸುರಿಯಲು ಪ್ಲ್ಯಾನ್ ಮಾಡಿಕೊಂಡಿದ್ದ. ಮಹೀಂದ್ರಾ ಕಂಪನಿಯ 2 ಕಾರು ಬುಕ್ ಮಾಡಿದ್ದ. ಜೊತೆಗೆ ಒಂದೂವರೆ ಲಕ್ಷ ಅಡ್ವಾನ್ಸ್ ಕೊಟ್ಟು ಮಹೀಂದ್ರಾ XUV-500 ಬುಕ್ ಮಾಡಿದ್ದು ₹25 ಸಾವಿರ ಅಡ್ವಾನ್ಸ್ ಕೊಟ್ಟು ಥಾರ್ ಜೀಪ್ ಬುಕ್ ಮಾಡಿದ್ದ. ಉಳಿದ ಹಣವನ್ನ ನಗದು ನೀಡಿ ಕಾರು ಪಡೆಯೋದಾಗಿ ತಿಳಿಸಿದ್ದಾನೆ. ತನ್ನ ಹಳೇ ಕಾರನ್ನೂ ಎಕ್ಸ್​ಚೇಂಜ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದ ಎಂಬ ಮಾಹಿತಿ ಉನ್ನತ ಮೂಲಗಳಿಂದ ಸಿಕ್ಕಿದೆ.

ಆದ್ರೆ ಫೆಬ್ರವರಿ 16ರಂದು ಕಾರು ಖರೀದಿ ನಿರ್ಧಾರ ಕೈಬಿಟ್ಟಿದ್ದ. ತುಮಕೂರಿನ ಶಿರಾ ಮೂಲದ ಪತ್ರಕರ್ತ ಕಿಂಗ್​ಪಿನ್ ಕಾರು ಶೋ ರೂಂನ ಸೇಲ್ಸ್ ಎಕ್ಸಿಕ್ಯೂಟಿವ್​ಗೆ ಮೇಲ್ ಮಾಡಿ ತನ್ನ ಹಣ, ಹಳೇ ಕಾರಿನ ದಾಖಲೆ ವಾಪಸ್ ನೀಡಲು ಮನವಿ ಮಾಡಿಕೊಂಡಿದ್ದ. ಬಳಿಕ ಕಾರು ಬುಕ್ಕಿಂಗ್​ಗೆ ನೀಡಿದ್ದ ಹಣ ವಾಪಸ್ ಪಡೆದು ಡೀಲ್ ಹಣದಲ್ಲಿ ಭೂಮಿ ಖರೀದಿಗೆ ನಿರ್ಧರಿಸಿದ್ದ. ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭೂಮಿ ಖರೀದಿಸಲು ತಯಾರಿ ನಡೆಸಿದ್ದು ಕೊಡಗಿನಲ್ಲಿ ಕಾಫಿ ತೋಟ ಖರೀದಿಸಲು ಪ್ಲ್ಯಾನ್ ಮಾಡಿದ್ದ. ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ ಸೇರಿ ಹಲವೆಡೆ ಕಾಫಿ ತೋಟಗಳನ್ನು ನೋಡಿ ಮಾತುಕಥೆ ನಡೆಸಿದ್ದ. ಮೈಸೂರಿನಲ್ಲಿ ಜಮೀನು ನೋಡುವಂತೆ ಸ್ನೇಹಿತರಿಗೆ ಹೇಳಿದ್ದ. ಸದ್ಯ ಈಗ SIT ಈ ಬಗ್ಗೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ಸ್ಫೋಟಕ ಅಂಶ ಪತ್ತೆ.. ಮೂವರಿಗಾಗಿ ಎಸ್​ಐಟಿ ಹುಡುಕಾಟ