ಶಿವಮೊಗ್ಗ: ಜನವರಿ 21ಮಲೆನಾಡಿದ ಭೂಮಿ ಕಂಪಿಸಿತ್ತು. ಜನರಲ್ಲಿ ಆತಂಕ ಮನೆ ಮಾಡಿತ್ತು. ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಜಿಲೆಟಿನ್ ತುಂಬಿದ್ದ ಲಾರಿಯೊಂದು ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಇನ್ನೇನು ಕ್ವಾರಿ ರೀಚ್ ಆಗ್ಬೇಕೆನ್ನುವಷ್ಟರಲ್ಲಿ ಲಾರಿ ಬ್ಲಾಸ್ಟ್ ಆಗಿತ್ತು. ಇದರ ತೀವ್ರತೆಗೆ ಲಾರಿಯಲ್ಲಿದ್ದ ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿತ್ತು.
ಇನ್ನು ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈಗಾಗಲೇ ಐದು ಮೃತದೇಹಗಳು ಪತ್ತೆಯಾಗಿದ್ದು ಆರನೇ ಮೃತದೇಹ ಯಾರದ್ದು ಎನ್ನುವ ಗುರುತು ಪತ್ತೆಯಾಗಿಲ್ಲ. ಸ್ಫೋಟಗೊಂಡ ಸ್ಥಳದಲ್ಲಿ ಎಷ್ಟು ಜನರು ಇದ್ದರೂ ಎನ್ನುವುದೇ ಇನ್ನೂ ಸ್ಪಷ್ಪವಾಗಿಲ್ಲ.
ಸದ್ಯ ಆಂಧ್ರ ಪ್ರದೇಶದ ಪವನ, ಜಾವೇದ್, ರಾಜು ಎಂಬ ಮೂವರು ಮೃತಪಟ್ಟಿದ್ದಾರೆ. ಭದ್ರಾವತಿಯ ಅಂತರಗಂಗೆಯ ಮಂಜುನಾಥ ಮತ್ತು ಪ್ರವೀಣ ಕೊನೆಯುಸಿರೆಳೆದಿದ್ದಾರೆ ಎಂಬುವುದು ತಿಳಿದು ಬಂದಿದೆ. ಐವರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವಗಳ ಹಸ್ತಾಂತರ ಮಾಡಲಾಗುತ್ತೆ.
Shivamogga Blast ಶೋಧ ಕಾರ್ಯಾಚರಣೆ ಮುಕ್ತಾಯ, ಇದುವರೆಗೆ ಐದು ಮಂದಿ ಮೃತದೇಹಗಳು ಪತ್ತೆ