ಹುಬ್ಬಳ್ಳಿ: ಹಾವು.. ಈ ಹೆಸರು ಕೇಳಿದ್ರೇನೆ ಭಯ ಆಗುತ್ತೆ. ಆದ್ರೆ ಕೆಲವರು ಹಾವನ್ನು ಜೊತೆಯಲ್ಲಿಟ್ಟುಕೊಂಡೆ ತಮ್ಮ ಒಂದೊತ್ತಿನ ಊಟಕ್ಕೆ ದುಡಿಮೆ ಮಾಡ್ಕೊಳ್ಳುತ್ತಾರೆ. ಅವರನ್ನ ಹಾವಾಡಿಗ ಅಂತಾರೆ. ಹಾವಾಡಿಗರಿಗೆ ಹಾವನ್ನು ಪಳಗಿಸುವ ಎಲ್ಲಾ ಟೆಕ್ನಿಕ್ಸ್ ಗೊತ್ತಿರುತ್ತೆ. ಹಾಗಾಗಿ ಅವರು ಹಾವಿನ ಜೊತೆ ಆಟ ಆಟ್ತಾರೆ.. ಆಡುಸ್ತಾರೆ. ಅದಕ್ಕೆ ಬ್ರಿಟಿಷರು ಭಾರತ ಅಂದ್ರೆ Land of snake charmers ಎಂದು ಅವರು ನಮ್ಮ ದೇಶವನ್ನು ಆಳುತ್ತಿದ್ದ ಕಾಲದಲ್ಲಿ ಲೇವಡಿ ಮಾಡಿದ್ದರು.
ಮುಂದುವರಿದ ಇಂದಿನ ಸೆಲ್ಫಿ ಯುಗದಲ್ಲಿ ಹಾವನ್ನು ಹಿಡಿದು ಫೋಟೋಗೆ ಫೋಸ್ ಕೊಡುತ್ತಾ ಸೆಲ್ಫಿ ತೆಗೆಸಿಕೊಳ್ಳುವ ಸಾಮಾನ್ಯ ಆಸೆ ಜನರಿಗೆ. ಇಲ್ಲೊಬ್ಬ ಭೂಪ ಹಾವಿನ ಜೊತೆ ಸರಸ ಆಡಲು ಹೋಗಿ ಮಸಣ ಸೇರಿದ್ದಾನೆ ಎಂಬುದು ಈಗಿನ ಸುದ್ದಿ. ಈ ಭೂಪ ಒಂದು ಹೆಜ್ಜೆ ಮುಂದೆ ಹೋಗಿ ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಮೃತಪಟ್ಟಿದ್ದಾನೆ. ಸಿದ್ದಪ್ಪ ತಳವಾರ(45) ಮೃತ ವ್ಯಕ್ತಿ.
ಚಟವೇ ಚಟ್ಟಕ್ಕೆ ದಾರಿಯಾಯ್ತು..
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ನಿವಾಸಿ ಸಿದ್ದಪ್ಪ ತಳವಾರ್ಗೆ ಹಾವುಗಳೊಂದಿಗೆ ಆಟವಾಡುವ ಹುಚ್ಚಿತ್ತು. ಎಲ್ಲೇ ಹಾವುಗಳು ಕಂಡರೂ ಅವುಗಳನ್ನು ಹಿಡಿದು ಆಟವಾಡುತ್ತಿದ್ದ. ಈ ಬಾರಿ ಸಹ ಅದೇ ರೀತಿ ಕಣ್ಣಿಗೆ ಬಿದ್ದ ಹಾವನ್ನು ಹಿಡಿದು ಆಟವಾಡಲು ಹೋಗಿದ್ದಾನೆ.
ವಿಪರ್ಯಾಸವೆಂದ್ರೆ ಈ ಬಾರಿ ಹಾವು ಯಮನ ರೂಪದಲ್ಲಿ ಸಿದ್ದಪ್ಪನ ಕುತ್ತಿಗೆ ಬಿಗಿದಿದೆ. ರೊಚ್ಚಿಗೆದ್ದ ಹಾವು ಸಿದ್ದಪ್ಪನನ್ನು ಕಚ್ಚಿದೆ. ಬಳಿಕ ಕೋಪಗೊಂಡ ವ್ಯಕ್ತಿ ತಾನೇ ಹಾವನ್ನು ಕೊಂದು ಹಾಕಿದ್ದಾನೆ. ಬಳಿಕ ಹಾವಿನ ವಿಷ ದೇಹಕ್ಕೆ ಏರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಹಾವುಗಳನ್ನು ಹಿಡಿದು ಕಾಡಿಗೆ ಬಿಡ್ತಿದ್ದ.. ಆದರೆ ತನಗೆ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ..