ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ 10 ಅಡಿ ಉದ್ದದ ಹೆಬ್ಬಾವು ರಕ್ಷಣೆ!

|

Updated on: Nov 02, 2020 | 10:20 AM

ಚಿಕ್ಕಬಳ್ಳಾಪುರ: ಮೀನುಗಳಿಗೆ ಹಾಕಿದ್ದ ಬಲೆಗೆ 10 ಅಡಿ ಉದ್ದದ ಹೆಬ್ಬಾವು ಸಿಕ್ಕಿಬಿದ್ದಿದೆ. ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಕಂಡು ಮೀನುಗಾರರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅದನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಿದ್ದಿಲು ಗ್ರಾಮದ ಕೆರೆಯಲ್ಲಿ ಹಾವು, ಮೀನಿನ ಬಲೆಗೆ ಬಿದ್ದಿದೆ. ಗೌರಿಬಿದನೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ನೆರವಿನೊಂದಿಗೆ, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟುಬಂದಿದ್ದಾರೆ.

ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ 10 ಅಡಿ ಉದ್ದದ ಹೆಬ್ಬಾವು ರಕ್ಷಣೆ!
Follow us on

ಚಿಕ್ಕಬಳ್ಳಾಪುರ: ಮೀನುಗಳಿಗೆ ಹಾಕಿದ್ದ ಬಲೆಗೆ 10 ಅಡಿ ಉದ್ದದ ಹೆಬ್ಬಾವು ಸಿಕ್ಕಿಬಿದ್ದಿದೆ. ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಕಂಡು ಮೀನುಗಾರರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅದನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಿದ್ದಿಲು ಗ್ರಾಮದ ಕೆರೆಯಲ್ಲಿ ಹಾವು, ಮೀನಿನ ಬಲೆಗೆ ಬಿದ್ದಿದೆ. ಗೌರಿಬಿದನೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ನೆರವಿನೊಂದಿಗೆ, ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟುಬಂದಿದ್ದಾರೆ.

Published On - 10:18 am, Mon, 2 November 20