ವಿಕ್ಟೋರಿಯಾ ರಾಣಿ ನಿರ್ಮಿಸಿದ ಕೆರೆ ತುಂಬಿತುಳುಕುತಿದೆ! ಯುವಕರ ಕೈಬೀಸಿ ಕರೀತಿದೆ
ಗದಗ: ಅದು ವಿಕ್ಟೋರಿಯಾ ರಾಣಿ ನಿರ್ಮಿಸಿದ ಬೃಹತ್ ಕೆರೆ. ಬರಗಾಲದ ಬವಣೆಗೆ ತನ್ನ ಅಂದ ಕಳೆದುಕೊಂಡು ಬರಿದಾಗಿತ್ತು. ಆದ್ರೆ ನಿರಂತರ ಮಳೆಗೆ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಕೆರೆ ಕೊಡಿ ಹರಿಯುವ ದೃಶ್ಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಝುಳು ಝುಳು ಅಂತ ಹರಿಯುತ್ತಿದೆ. ಕೆರೆ ತುಂಬಿದ ಹಿನ್ನೆಲೆಯಲ್ಲಿ ಯುವ ಪೀಳಿಗೆ ಕೆರೆಯಲ್ಲಿ ಈಜಿ ಎಂಜಾಯ್ ಮಾಡಲು ಬರುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ […]
ಗದಗ: ಅದು ವಿಕ್ಟೋರಿಯಾ ರಾಣಿ ನಿರ್ಮಿಸಿದ ಬೃಹತ್ ಕೆರೆ. ಬರಗಾಲದ ಬವಣೆಗೆ ತನ್ನ ಅಂದ ಕಳೆದುಕೊಂಡು ಬರಿದಾಗಿತ್ತು. ಆದ್ರೆ ನಿರಂತರ ಮಳೆಗೆ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಕೆರೆ ಕೊಡಿ ಹರಿಯುವ ದೃಶ್ಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಹಾಲಿನ ನೊರೆಯಂತೆ ಝುಳು ಝುಳು ಅಂತ ಹರಿಯುತ್ತಿದೆ. ಕೆರೆ ತುಂಬಿದ ಹಿನ್ನೆಲೆಯಲ್ಲಿ ಯುವ ಪೀಳಿಗೆ ಕೆರೆಯಲ್ಲಿ ಈಜಿ ಎಂಜಾಯ್ ಮಾಡಲು ಬರುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ವಿಕ್ಟೋರಿಯಾ ರಾಣಿ ನಿರ್ಮಿಸಿದ ಕೆರೆಯಿದು. ಸದಾ ಬರಗಾಲ ಹೊಡೆತಕ್ಕೆ ಸಿಲುಕಿದ ವಿಕ್ಟೋರಿಯಾ ರಾಣಿ ಕೆರೆ ತನ್ನ ಅಂದ ಕಳೆದುಕೊಂಡಿತ್ತು.
ಆದ್ರೆ ಸತತ ಎರಡು ವರ್ಷಗಳಲ್ಲಿ ನಿರಂತರ ಮಳೆಗೆ ತನ್ನ ಒಡಲು ತುಂಬಿಕೊಂಡು ನಳನಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅದರಲ್ಲೂ ಕೆರೆ ಭರ್ತಿಯಾಗಿ ಕೊಡಿ ಬಿದ್ದಿದ್ದು, ಇಲ್ಲಿಗೆ ಬಂದ ಯುವ ಪಡೆ ಕೆರೆಯಲ್ಲಿ ಈಜು ಹೊಡೆದು ಮಸ್ತ್ ಎಂಜಾಯ್ ಮಾಡ್ತಾಯಿದ್ದಾರೆ..
ತುಂಬಿದ ಕೆರೆಯಲ್ಲಿ ಯುವಕರದ್ದೇ ಕಾರುಬಾರು. ಮೇಲಿನಿಂದ ಕೆರೆಗ ಜಿಗಿದು ವಿವಿಧ ಭಂಗಿಯಲ್ಲಿ ಡೈ ಹೊಡೆಯುವ ಯುವಕರ ದಂಡು ಸಖತ್ ಮಸ್ತಿ ಮಾಡ್ತಿದ್ದಾರೆ. ಯುವಕರ ನೀರಾಟ ನೋಡೋಕೆ ಸಖತ್ ಖುಷಿ ನೀಡಿದ್ರೂ, ಭಯ ಕೂಡ ಆಗುತ್ತೆ. ಒಟ್ನಲ್ಲಿ ಸತತ ಮಳೆಯಿಂದ ವಿಕ್ಟೋರಿಯಾ ರಾಣಿ ಕೆರೆ ತುಂಬಿ ಹರಿಯುತ್ತಿದ್ದು, ಯುವಕರು ಈಜುತ್ತಾ ಮಸ್ತ್ ಮಾಜಾ ಮಾಡುತ್ತಿದ್ದಾರೆ.
Published On - 9:46 am, Mon, 2 November 20