ಚಳಿಯಲ್ಲಿಯೇ ನೆಲದ ಮೇಲೆ ಮಲಗೋ ದುಃಸ್ಥಿತಿ, ಗಡಿ ಕಾಯೋ ಯೋಧನ ಪೋಷಕರ ಪರದಾಟ

ಗದಗ: ಕೊವಿಡ್ ಕೇರ್ ಕೇಂದ್ರದಲ್ಲಿ ದೇಶ ಕಾಯೋ ಯೋಧನ ಹೆತ್ತವರ ಪರದಾಟ ಜಿಲ್ಲೆಯ ನರಗುಂದ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕೊವಿಡ್​ ಸೆಂಟರ್​ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಯೋಧನ ಸೋಂಕಿತ ಪೋಷಕರು ಪರದಾಡುವಂಥ ಸ್ಥಿತಿ ಎದುರಾಗಿದೆ. ಕೊವಿಡ್​ ಕೇರ್​ ಸೆಂಟರ್​ನಲ್ಲಿ ಯೋಧನ ಪೋಷಕರಿಗೆ ಕಾಟ್​​ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲವಂತೆ. ಹಾಗಾಗಿ, ಮಳೆ ಮತ್ತು ಚಳಿಯಲ್ಲೇ ಸೋಂಕಿತ ದಂಪತಿ ನೆಲದ ಮೇಲೆ ಮಲಗಬೇಕಾಗಿದೆ. ಜೊತೆಗೆ, ಮಳೆಗಾಲವಾಗಿರೋದ್ರಿಂದ ಮಳೆ ನೀರು ಕಿಟಕಿ ಮೂಲಕ ಒಳಹೊಕ್ಕಿ ಇದರಿಂದ ಸೋಂಕಿತರಿಗೆ ನರಕಯಾತನೆಯಾಗುತ್ತಿದೆ. ಇನ್ನು […]

ಚಳಿಯಲ್ಲಿಯೇ ನೆಲದ ಮೇಲೆ ಮಲಗೋ ದುಃಸ್ಥಿತಿ, ಗಡಿ ಕಾಯೋ ಯೋಧನ ಪೋಷಕರ ಪರದಾಟ

Updated on: Aug 06, 2020 | 7:44 AM

ಗದಗ: ಕೊವಿಡ್ ಕೇರ್ ಕೇಂದ್ರದಲ್ಲಿ ದೇಶ ಕಾಯೋ ಯೋಧನ ಹೆತ್ತವರ ಪರದಾಟ ಜಿಲ್ಲೆಯ ನರಗುಂದ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕೊವಿಡ್​ ಸೆಂಟರ್​ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಯೋಧನ ಸೋಂಕಿತ ಪೋಷಕರು ಪರದಾಡುವಂಥ ಸ್ಥಿತಿ ಎದುರಾಗಿದೆ.

ಕೊವಿಡ್​ ಕೇರ್​ ಸೆಂಟರ್​ನಲ್ಲಿ ಯೋಧನ ಪೋಷಕರಿಗೆ ಕಾಟ್​​ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲವಂತೆ. ಹಾಗಾಗಿ, ಮಳೆ ಮತ್ತು ಚಳಿಯಲ್ಲೇ ಸೋಂಕಿತ ದಂಪತಿ ನೆಲದ ಮೇಲೆ ಮಲಗಬೇಕಾಗಿದೆ. ಜೊತೆಗೆ, ಮಳೆಗಾಲವಾಗಿರೋದ್ರಿಂದ ಮಳೆ ನೀರು ಕಿಟಕಿ ಮೂಲಕ ಒಳಹೊಕ್ಕಿ ಇದರಿಂದ ಸೋಂಕಿತರಿಗೆ ನರಕಯಾತನೆಯಾಗುತ್ತಿದೆ.

ಇನ್ನು ತಮ್ಮ ದುಃಸ್ಥಿತಿಯನ್ನ ಮಗನಿಗೆ ತಿಳಿಸಿದ ದಂಪತಿಯ ಮಾತು ಕೇಳಿ ಯೋಧನಿಗೆ ಶಾಕ್​ ಆಗಿದೆ. ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗಿರುವ ಯೋಧ ಹೆತ್ತವರ ಗೋಳಾಟ ಕೇಳಿ ಕೂಡಲೇ ಸ್ಥಳೀಯ ತಹಶೀಲ್ದಾರ್​ ಹಾಗೂ ಸೆಂಟರ್​ನ ವೈದ್ಯರ ಜೊತೆ ಇದರ ಕುರಿತು ಮಾತನಾಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಇವರ ಮಾತಿಗೆ ಡೋಂಟ್​ ಕೇರ್​.

ಹಾಗಾಗಿ, ಯೋಧನ ಕುಟುಂಬಸ್ಥರ ಪರದಾಟ ಕೇಳಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Published On - 7:43 am, Thu, 6 August 20