ನನ್ನ ತಾಯಿಯನ್ನ ಬದುಕಿಸಿಕೊಡಿ: ಜಯನಗರದಲ್ಲಿ ಮಗನ ಅಳಲು

ಬೆಂಗಳೂರು: ಆಸ್ಪತ್ರೆಯಲ್ಲಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ರೋಗಿ ಪರದಾಡುತ್ತಿರುವ ಅಮಾನವೀಯ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕೊರೊನಾ ಪಾಸಿಟಿವ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ರು ಅವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ನೊಂದ ಮಗ ನಮ್ಮ ತಾಯಿಯನ್ನ ಉಳಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಇಂತಹ ಕರುಳು ಹಿಂಡುವ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಜಯನಗರ ಆಸ್ಪತ್ರೆಯಲ್ಲಿ. ಕೊರೊನಾ ಸೋಂಕಿತ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿದ್ದರೂ ಜಯನಗರದ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ICU ಬೆಡ್ […]

ನನ್ನ ತಾಯಿಯನ್ನ ಬದುಕಿಸಿಕೊಡಿ: ಜಯನಗರದಲ್ಲಿ ಮಗನ ಅಳಲು
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jul 16, 2020 | 2:00 PM

ಬೆಂಗಳೂರು: ಆಸ್ಪತ್ರೆಯಲ್ಲಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ರೋಗಿ ಪರದಾಡುತ್ತಿರುವ ಅಮಾನವೀಯ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕೊರೊನಾ ಪಾಸಿಟಿವ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ರು ಅವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ನೊಂದ ಮಗ ನಮ್ಮ ತಾಯಿಯನ್ನ ಉಳಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಇಂತಹ ಕರುಳು ಹಿಂಡುವ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಜಯನಗರ ಆಸ್ಪತ್ರೆಯಲ್ಲಿ.

ಕೊರೊನಾ ಸೋಂಕಿತ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿದ್ದರೂ ಜಯನಗರದ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ICU ಬೆಡ್ ಇಲ್ಲ ಬೇರೆ ಕಡೆ ನೋಡಿ ಎಂದು ಹೇಳ್ತಿದ್ದಾರಂತೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ತೋಚದೆ. ತನ್ನ ತಾಯಿಯನ್ನ ಬದುಕಿಸಿಕೊಡಿ ಎಂದು ಮಗ ಅಂಗಲಾಚಿದ ದೃಶ್ಯ ಮನ ಕಲಕುವಂತಿದೆ.

ಬೆಡ್ ಸಮಸ್ಯೆ ಬಗೆ ಹರಿಸ್ತೀವಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಎಲ್ಲರಿಗೂ ಸಿಗುವಂತೆ ಕ್ರಮ ಕೈಗೊಳ್ಳುತ್ತೀವಿ ಎಂದು ಹೇಳಿಕೆ ನೀಡಿ ಓಡಾಡುತ್ತಿರುವ ಸಚಿವರಿಗೆ ಜನಸಾಮಾನ್ಯರ ನೋವು ಗೊತ್ತಾಗುತ್ತಿಲ್ಲ. ತನ್ನನ್ನು ಆರೈಕೆ ಮಾಡಿ ಬೆಳೆಸಿದ ತಾಯಿಯನ್ನು ಉಳಿಸಿಕೊಳ್ಳಲು ಮಗ ಒದ್ದಾಡುತ್ತಿದ್ದಾನೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us