ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರ ಆಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ

| Updated By: ಸಾಧು ಶ್ರೀನಾಥ್​

Updated on: Feb 06, 2021 | 2:30 PM

Son Died After Mothers Last Rites in Hassan.. ಗ್ರಾ.ಪಂ ಮಾಜಿ ಸದಸ್ಯ, ಗಂಗಾಮತಸ್ಥ ಜನಾಂಗದ ಮುಖಂಡ ಗಣೇಶ್ (57) ತನ್ನ ತಾಯಿ ಗೌರಮ್ಮ(75) ರ ಅಂತ್ಯ ಸಂಸ್ಕಾರ ನಡೆಸಿ ಮನೆಗೆ ಬಂದ 2 ಗಂಟೆಗೊಳಗೆ ಮೃತಪಟ್ಟಿದ್ದಾರೆ.

ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರ ಆಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ
ಪ್ರಾತಿನಿಧಿಕ ಚಿತ್ರ
Follow us on

ಹಾಸನ: ತಾಯಿ ಅಂತ್ಯ ಸಂಸ್ಕಾರದ ಬಳಿಕ ಪುತ್ರ ಕೂಡ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾ.ಪಂ ಮಾಜಿ ಸದಸ್ಯ, ಗಂಗಾಮತಸ್ಥ ಜನಾಂಗದ ಮುಖಂಡ ಗಣೇಶ್ (57) ತನ್ನ ತಾಯಿ ಗೌರಮ್ಮ(75) ರ ಅಂತ್ಯ ಸಂಸ್ಕಾರ ನಡೆಸಿ ಮನೆಗೆ ಬಂದ 2 ಗಂಟೆಗೊಳಗೆ ಮೃತಪಟ್ಟಿದ್ದು ತಾಯಿಯನ್ನೇ ಹಿಂಬಾಲಿಸಿದ್ದಾರೆ.

ಗಣೇಶ್ ಈ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಹಾಸನದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ತಾಯಿ ಗೌರಮ್ಮ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಕರೆದುಕೊಂಡು ಬರಲಾಗಿತ್ತು.

ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಕೆಲವೇ ಘಂಟೆಗಳಲ್ಲಿ ಗಣೇಶ್​ಗೆ ಹೃದಯಾಘಾತವಾಗಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಗಣೇಶ್ ಮೃತಪಟ್ಟಿದ್ದಾರೆ. ಮೃತ ಗಣೇಶ್​ಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಅಂತ್ಯಕ್ರಿಯೆ ಕೊಣನೂರಿನ ರುದ್ರಭೂಮಿಯಲ್ಲಿ ನೆರವೇರಿದೆ.

ಇದು ಜೀವನ | ಬದುಕಿನ ಬಂಡಿ ಎಳೆಯೋಕೆ ತಾಯಿ ಮಗನ ಹರ ಸಾಹಸ: ವಿಜಯಪುರದಲ್ಲೊಂದು ಮನಕಲಕುವ ಕತೆ

Published On - 10:11 am, Sat, 6 February 21