
ಕನ್ನಡಿಗ ಗೋಪಿನಾಥ್ ಜೀವನದ ಕಥೆ ಸೂರರೈ ಪೊಟ್ರು ಸಿನಿಮಾ ಚಿತ್ರ ಈಗ ಆಸ್ಕರ ರೇಸ್ಗೆ ಎಂಟ್ರಿ ಕೊಟ್ಟಿದೆ. ಸಾಮಾನ್ಯ ವಿಭಾಗದಲ್ಲಿ ಸೂರರೈ ಪೊಟ್ರು ಆಸ್ಕರ್ ಪ್ರವೇಶಿಸಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಸಂಗೀತ ಹಾಗೂ ಇತರ ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್ ವಿಭಾಗ ಪ್ರವೇಶಿಸಿದೆ .
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೂರರೈ ಪೊಟ್ರು ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಈ ಸಿನಿಮಾ ವಿಕ್ಷಣೆ ಮಾಡಿದ ಅಕಾಡೆಮಿ ಸ್ಕ್ರೀನಿಂಗ್ ಸದಸ್ಯರು ಆಸ್ಕರ್ಗೆ ನಾಮಿನೇಷನ್ ಮಾಡಿದ್ದಾರೆ.
ಸುಧಾ ಕೊಂಗರ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ, ಸೂರ್ಯ, ಪರೇಶ್ ರಾವಲ್, ಅಪರ್ಣಾ, ಊರ್ವರ್ಶಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ರೋಲ್ ಆದ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ
Published On - 9:41 pm, Tue, 26 January 21