ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣ: ಮಣಿಪುರದ Spa ಯುವತಿ ಆಸ್ಕಾ ಅರೆಸ್ಟ್

ಮಂಗಳೂರು: ಡ್ಯಾನ್ಸರ್‌ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಹಿನ್ನೆಲೆಯಲ್ಲಿ ಕಿಶೋರ್ ಶೆಟ್ಟಿ ಜತೆ ಡ್ರಗ್ಸ್‌ ಪಾರ್ಟಿ ಮಾಡಿದ್ದ ಯುವತಿಯೊಬ್ಬಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ ಎಂಬ ಯುವತಿ ಅರೆಸ್ಟ್ ಆದವಳು. ಬಂಧಿತ ಯುವತಿ ಆಸ್ಕಾ ಮೂಲತಃ ಮಣಿಪುರದವರು. ಕೊರೊನಾ ಲಾಕ್‌ಡೌನ್ ವೇಳೆ ಕಿಶೋರ್‌ ಜತೆ ಆಸ್ಕಾ ಡ್ರಗ್ಸ್‌ ಪಾರ್ಟಿ ಮಾಡಿದ್ದಳು ಎಂದು ತಿಳಿದುಬಂದಿದೆ. ಈಕೆಯನ್ನು ಬಂಧಿಸಿ ಡ್ರಗ್ಸ್ ಟೆಸ್ಟ್ ಮಾಡಿಸಿದ್ದ ಪೊಲೀಸರು, ಟೆಸ್ಟ್‌ನಲ್ಲಿ ಯುವತಿ ಆಸ್ಕಾ ಡ್ರಗ್ಸ್‌ […]

ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣ: ಮಣಿಪುರದ Spa ಯುವತಿ ಆಸ್ಕಾ ಅರೆಸ್ಟ್
ಸಾಧು ಶ್ರೀನಾಥ್​

Updated on: Sep 22, 2020 | 11:11 AM

ಮಂಗಳೂರು: ಡ್ಯಾನ್ಸರ್‌ ಕಮ್ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಹಿನ್ನೆಲೆಯಲ್ಲಿ ಕಿಶೋರ್ ಶೆಟ್ಟಿ ಜತೆ ಡ್ರಗ್ಸ್‌ ಪಾರ್ಟಿ ಮಾಡಿದ್ದ ಯುವತಿಯೊಬ್ಬಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ ಎಂಬ ಯುವತಿ ಅರೆಸ್ಟ್ ಆದವಳು. ಬಂಧಿತ ಯುವತಿ ಆಸ್ಕಾ ಮೂಲತಃ ಮಣಿಪುರದವರು. ಕೊರೊನಾ ಲಾಕ್‌ಡೌನ್ ವೇಳೆ ಕಿಶೋರ್‌ ಜತೆ ಆಸ್ಕಾ ಡ್ರಗ್ಸ್‌ ಪಾರ್ಟಿ ಮಾಡಿದ್ದಳು ಎಂದು ತಿಳಿದುಬಂದಿದೆ. ಈಕೆಯನ್ನು ಬಂಧಿಸಿ ಡ್ರಗ್ಸ್ ಟೆಸ್ಟ್ ಮಾಡಿಸಿದ್ದ ಪೊಲೀಸರು, ಟೆಸ್ಟ್‌ನಲ್ಲಿ ಯುವತಿ ಆಸ್ಕಾ ಡ್ರಗ್ಸ್‌ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಈಕೆ ಜತೆ ಡ್ರಗ್ಸ್‌ ತೆಗೆದುಕೊಂಡಿದ್ದವರಿಗೂ ನೋಟಿಸ್‌ ಜಾರಿ ಮಾಡಲಾಗಿದ್ದು, ಯುವತಿಯರ ಜೊತೆ ಕಿಶೋರ್ ಸಹ ಡ್ರಗ್ಸ್‌ ಪಾರ್ಟಿ ಮಾಡಿದ್ದ ಎಂಬುದು ಗಮನಾರ್ಹ.

Published On - 9:28 am, Tue, 22 September 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us