ಎಸ್ಪಿಬಿ ಆರೋಗ್ಯ ಸ್ಥಿರವಾಗಿದೆ, ಫಿಜಿಯೋಥೆರಪಿ ಆರಂಭಿಸಲಾಗಿದೆ: ಚರಣ್

ಕೊರೊನಾ ಸೋಂಕಿಗೀಡಾಗಿ ಚೆನೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದೆರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಮಗ ಎಸ್ ಪಿ ಚರಣ್ ಹೊಸ ವಿಡಿಯೊವೊಂದರ ಮೂಲಕ ಎಸ್​ಪಿ ಅವರ ಶೀಘ್ರ ಚೇತರಿಕೆಗೆ ಎಡೆಬಿಡದೆ ಪ್ರಾರ್ಥಿಸುತ್ತಿರುವ ಕೊಟ್ಯಾಂತರ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ‘‘ನಮ್ಮ ತಂದೆ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು ಅವರಿಗೆ ಫಿಜಿಯೋಥೆರಪಿ ಶುರು ಮಾಡಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’’ ಎಂಬ […]

ಎಸ್ಪಿಬಿ ಆರೋಗ್ಯ ಸ್ಥಿರವಾಗಿದೆ, ಫಿಜಿಯೋಥೆರಪಿ ಆರಂಭಿಸಲಾಗಿದೆ: ಚರಣ್

Updated on: Aug 27, 2020 | 6:46 PM

ಕೊರೊನಾ ಸೋಂಕಿಗೀಡಾಗಿ ಚೆನೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದೆರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಮಗ ಎಸ್ ಪಿ ಚರಣ್ ಹೊಸ ವಿಡಿಯೊವೊಂದರ ಮೂಲಕ ಎಸ್​ಪಿ ಅವರ ಶೀಘ್ರ ಚೇತರಿಕೆಗೆ ಎಡೆಬಿಡದೆ ಪ್ರಾರ್ಥಿಸುತ್ತಿರುವ ಕೊಟ್ಯಾಂತರ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

‘‘ನಮ್ಮ ತಂದೆ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು ಅವರಿಗೆ ಫಿಜಿಯೋಥೆರಪಿ ಶುರು ಮಾಡಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’’ ಎಂಬ ವಿಡಿಯೋ ಸಂದೇಶವನ್ನು ಚರಣ್ ಬಿಡುಗಡೆ ಮಾಡಿದ್ದಾರೆ.

ಚರಣ್, ತಮ್ಮ ತಂದೆಯನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿ ಬಂದಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

‘‘ತಂದೆಯವದರು ಒಂದು ಕಾಗದದ ಮೇಲೆ ತಮ್ಮ ಅನಿಸಿಕೆಯನ್ನು ಬರೆಯಲು ಪ್ರಯತ್ನಿಸಿದರು, ಆದರೆ ಕೈಯಲ್ಲಿ ಪೆನ್ ಹಿಡಿದುಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ, ಈ ವಾರಾಂತ್ಯದ ವೇಳೆಗೆ ಅವರು ಬರೆಯಲು ಶಕ್ತರಾಗುತ್ತಾರೆಂಬ ಭರವಸೆ ನನಗಿದೆ’’ ಎಂದು ಚರಣ್ ಹೇಳಿದ್ದಾರೆ

ಏತನ್ಮಧ್ಯೆ, ಆಸ್ಪತ್ರೆ ಬಿಡುಗಡೆ ಮಾಡಿರುವ ಬುಲೆಟಿನ್​ನಲ್ಲಿ, ಎಸ್​ಪಿ ಅವರ ಆರೋಗ್ಯ ಸ್ಥಿರವಾಗಿದ್ದು ಅವರಿಗೆ ವೆಂಟಿಲೇಟರ್ ಮೇಲಿರಿಸಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಅಂತ ಹೇಳಲಾಗಿದೆ