ಪದವಿ ಪ್ರವೇಶಾತಿಗೆ ನೂಕುನುಗ್ಗಲು, ಒಬ್ಬರ ಮೇಲೊಬ್ಬರು ಬಿದ್ದು ವಿದ್ಯಾರ್ಥಿಗಳಿಗೆ ಗಾಯ
ಹಾಸನ: ಪದವಿ ಕಾಲೇಜು ಪ್ರವೇಶಾತಿಗೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗಿ ಒಬ್ಬರ ಮೇಲೊಬ್ಬರು ಬಿದ್ದು ಗಾಯಗೊಂಡ ಘಟನೆ ಹಾಸನದಲ್ಲಿ ಸಂಭವಿಸಿದೆ. ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದ್ದು, ನೂರಾರು ವಿದ್ಯಾರ್ಥಿಗಳ ಜಮಾವಣೆಯಿಂದ ರೈಲಿಂಗ್ಸ್ ಮುರಿದುಬಿದ್ದಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೊರೊನ ಆತಂಕವಿದ್ದರೂ ಅಂತರ ಮರೆತು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲುಂಟಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಗೇಟ್ ಸಮೀಪ ತಡಗೆಂದು ಹಾಕಿದ್ದ ಕಬ್ಬಿಣದ ಸರಳು ಮುರಿದುಬಿದ್ದಿದೆ. ಪರಿಣಾಮ […]

ಹಾಸನ: ಪದವಿ ಕಾಲೇಜು ಪ್ರವೇಶಾತಿಗೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗಿ ಒಬ್ಬರ ಮೇಲೊಬ್ಬರು ಬಿದ್ದು ಗಾಯಗೊಂಡ ಘಟನೆ ಹಾಸನದಲ್ಲಿ ಸಂಭವಿಸಿದೆ.
ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದ್ದು, ನೂರಾರು ವಿದ್ಯಾರ್ಥಿಗಳ ಜಮಾವಣೆಯಿಂದ ರೈಲಿಂಗ್ಸ್ ಮುರಿದುಬಿದ್ದಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೊರೊನ ಆತಂಕವಿದ್ದರೂ ಅಂತರ ಮರೆತು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದರು.
ಈ ವೇಳೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲುಂಟಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಗೇಟ್ ಸಮೀಪ ತಡಗೆಂದು ಹಾಕಿದ್ದ ಕಬ್ಬಿಣದ ಸರಳು ಮುರಿದುಬಿದ್ದಿದೆ. ಪರಿಣಾಮ ಒಬ್ಬರ ಮೇಲೆ ಒಬ್ಬರಂತೆ ವಿದ್ಯಾರ್ಥಿಗಳು ಕೆಳಗೆ ಉರುಳಿಬಿದ್ದಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೆ ಎಲ್ಲರನ್ನು ಮೇಲೆತ್ತಿ ರಕ್ಷಿಸಿದ್ದಾರೆ.