ಬಳ್ಳಾರಿಗೆ ಭೇಟಿ ನೀಡಲು ಅವಕಾಶ ಕೋರಿ ಮಾಜಿ ಸಚಿವ ಜಿ ಜನಾರ್ಧನ ರೆಡ್ಡಿ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮನವಿ ಪುರಸ್ಕೃತಗೊಂಡಿದೆ. ಸರ್ವೋಚ್ಛ ನ್ಯಾಯಾಲಯವು ಎರಡು ದಿನಗಳ ಮಟ್ಟಿಗೆ ಭೇಟಿ ನೀಡಲು ಷರತ್ತಿನ ಸಮ್ಮತಿ ನೀಡಿದೆ.
ಆಗಸ್ಟ್ 30 ರಿಂದ 2 ದಿನ ಬಳ್ಳಾರಿಗೆ ಭೇಟಿ ನೀಡುವ ಅವಕಾಶವನ್ನು ಅಪೆಕ್ಸ್ ಕೋರ್ಟ್ ಒದಗಿಸಿದ್ದು, ಪೊಲೀಸ್ ಕಾವಲಿನಲ್ಲಿ ಮಾತ್ರ ಅಲ್ಲಿಗೆ ಹೋಗಬೇಕು ಹಾಗು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿ ಮೇಲೆ ಪ್ರಭಾವ ಬೀರಬಾರದು ಎಂದು ಆದೇಶಿಸಿದೆ.
ಇತ್ತೀಚೆಗೆ ನಿಧನರಾದ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರ ತಾಯಿಯ ತಿಥಿಕಾರ್ಯದಲ್ಲಿ ಪಾಲ್ಗೊಳ್ಳಲು ಜನಾರ್ಧನ ರೆಡ್ಡಿ ಅನುಮತಿ ಕೋರಿದ್ದರು