ವಿಜಯವಾಡ ಇಂದ್ರಕೀಲಾದ್ರಿಯಲ್ಲಿ ಭೀಷ್ಮ ಏಕಾದಶಿ ವಿಶೇಷ: ವಿಷ್ಣುಸಹಸ್ರನಾಮ ವಿರಾಟ್​ ಪಾರಾಯಣ

|

Updated on: Feb 25, 2021 | 5:00 PM

ವಿಷ್ಣುಸಹಸ್ರನಾಮ ಸ್ತೋತ್ರ ಪಠಣೆಯಿಂದ ಭೀಷ್ಮನ ಹೆಸರು ಚರಿತ್ರೆಯಲ್ಲಿ ನಿಂತಿದೆ. ಭೀಷ್ಮ ಏಕಾದಶಿಯಂದು ವಿಷ್ಣು ಸಹಸ್ರನಾಮ ಪಠಿಸುವವರ ಜನ್ಮ ಸಾರ್ಥಕವಾಗುತ್ತದೆ ಎಂದು ತ್ರಿದಂಡಿ ಚಿನ್ನಜೀಯರ್ ಸ್ವಾಮೀಜಿ ಹೇಳಿದರು.

ವಿಜಯವಾಡ ಇಂದ್ರಕೀಲಾದ್ರಿಯಲ್ಲಿ ಭೀಷ್ಮ ಏಕಾದಶಿ ವಿಶೇಷ: ವಿಷ್ಣುಸಹಸ್ರನಾಮ ವಿರಾಟ್​ ಪಾರಾಯಣ
ವಿಜಯವಾಡದ ಇಂದ್ರಕೀಲಾದ್ರಿಯಲ್ಲಿ ತ್ರಿಂದಡಿ ಚಿನ್ನಜೀಯರ್ ಸ್ವಾಮೀಜಿ ಆಶೀರ್ವಚನ
Follow us on

ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡದ ವಿಜಯಕೀಲಾದ್ರಿಯಲ್ಲಿ ಭೀಷ್ಮ‌ ಏಕಾದಶಿ ಪ್ರಯುಕ್ತ ತ್ರಿದಂಡಿ ಚಿನ್ನ‌ಜಿಯರ್ ಸ್ವಾಮೀಜಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ 11ರಿಂದ ಸಂಜೆಯವರೆಗೆ ವಿಶೇಷ ಪೂಜೆಗಳು ನಡೆದವು. ಈ ಸಂದರ್ಭ ಚಿನ್ನಜೀಯರ್ ಸ್ವಾಮೀಜಿ ವಿಷ್ಣು ಸಹಸ್ರನಾಮ ಸ್ತ್ರೋತ್ರದ ವಿರಾಟ ಪಾರಾಯಣ ಮಾಡಿದರು. ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಪಾರಾಯಣ ಆಲಿಸಿ, ದೇವರಿಗೆ ಮತ್ತು ಸ್ವಾಮೀಜಿಗೆ ನಮಿಸಿದರು. ಟಿವಿ9 ನೆಟ್​ವರ್ಕ್​ನ ಪ್ರವರ್ತಕರೂ ಆಗಿರುವ ಹೈದರಾಬಾದ್​ನ ಮೈ ಹೋಂ ಗ್ರೂಪ್​ನ ಸಂಸ್ಥಾಪಕ ಜೂಪಲ್ಲಿ ರಾಮೇಶ್ವರರಾವ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.

ಮಧ್ಯಾಹ್ನ 3 ಗಂಟೆಯವರೆಗೂ ಪಾರಾಯಣ ಮುಂದುವರಿಯಿತು. ಈ ಸಂದರ್ಭ ಮಾತನಾಡಿದ ಚಿನ್ನಜೀಯರ್ ಸ್ವಾಮೀಜಿ, ವಿಷ್ಣುಸಹಸ್ರನಾಮ ಸ್ತೋತ್ರ ಪಠಣೆಯಿಂದ ಭೀಷ್ಮನ ಹೆಸರು ಚರಿತ್ರೆಯಲ್ಲಿ ನಿಂತಿದೆ. ಭೀಷ್ಮ ಏಕಾದಶಿಯಂದು ವಿಷ್ಣು ಸಹಸ್ರನಾಮ ಪಠಿಸುವವರ ಜನ್ಮ ಸಾರ್ಥಕವಾಗುತ್ತದೆ ಎಂದರು.

Published On - 4:57 pm, Thu, 25 February 21