SSLC ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗೆ ಕೆಮ್ಮು-ವಾಂತಿ: ವಿದ್ಯಾರ್ಥಿ ಮನೆಗೆ, ಉಳಿದವರಿಗೆ ಆತಂಕ

ಬೆಂಗಳೂರು: SSLC ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬರು ತಲೆ ನೋವು ಮತ್ತು ಕೆಮ್ಮಿನಿಂದ ಬಳಲುತ್ತಿದ್ದು ಕೊಠಡಿಯಲ್ಲಿ ವಾಂತಿ ಮಾಡಿಕೊಂಡ ಘಟನೆ ನಗರದ ಮಲ್ಲೇಶ್ವರಂ ‌ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ. SSLC ಪರೀಕ್ಷೆ ಬರೆಯಲು ಇಂದು ಕೊಠಡಿಗೆ ಆಗಮಿಸಿದ್ದ ವಿದ್ಯಾರ್ಥಿಗೆ ಎಕ್ಸಾಂ ಶುರುವಾದ ಒಂದು ಗಂಟೆಯೊಳಗೆ ತಲೆ ನೋವು ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ತುಸು ಅಸ್ವಸ್ಥಗೊಂಡ ವಿದ್ಯಾರ್ಥಿ ಕೊಠಡಿಯಲ್ಲೇ ವಾಂತಿ ಮಾಡಿಕೊಂಡ. ಈ ಹಿನ್ನೆಲೆಯಲ್ಲಿ ಕೊಠಡಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಯ್ತು. ಕೂಡಲೇ ಪೋಷಕರಿಗೆ ಮಾಹಿತಿ ನೀಡಿದ […]

SSLC ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗೆ ಕೆಮ್ಮು-ವಾಂತಿ: ವಿದ್ಯಾರ್ಥಿ ಮನೆಗೆ, ಉಳಿದವರಿಗೆ ಆತಂಕ
Edited By:

Updated on: Jul 01, 2020 | 12:56 PM

ಬೆಂಗಳೂರು: SSLC ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬರು ತಲೆ ನೋವು ಮತ್ತು ಕೆಮ್ಮಿನಿಂದ ಬಳಲುತ್ತಿದ್ದು ಕೊಠಡಿಯಲ್ಲಿ ವಾಂತಿ ಮಾಡಿಕೊಂಡ ಘಟನೆ ನಗರದ ಮಲ್ಲೇಶ್ವರಂ ‌ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

SSLC ಪರೀಕ್ಷೆ ಬರೆಯಲು ಇಂದು ಕೊಠಡಿಗೆ ಆಗಮಿಸಿದ್ದ ವಿದ್ಯಾರ್ಥಿಗೆ ಎಕ್ಸಾಂ ಶುರುವಾದ ಒಂದು ಗಂಟೆಯೊಳಗೆ ತಲೆ ನೋವು ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ತುಸು ಅಸ್ವಸ್ಥಗೊಂಡ ವಿದ್ಯಾರ್ಥಿ ಕೊಠಡಿಯಲ್ಲೇ ವಾಂತಿ ಮಾಡಿಕೊಂಡ. ಈ ಹಿನ್ನೆಲೆಯಲ್ಲಿ ಕೊಠಡಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಯ್ತು. ಕೂಡಲೇ ಪೋಷಕರಿಗೆ ಮಾಹಿತಿ ನೀಡಿದ ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿದರು.

Published On - 12:35 pm, Wed, 1 July 20