AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಗಮಧ್ಯೆಯೇ ಸೋಂಕಿತ ಸಾವು, ಆ್ಯಂಬುಲೆನ್ಸ್​ನಲ್ಲೇ ಅನಾಥವಾದ ಶವ

ಬೆಂಗಳೂರು: ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯನಗರದ 52 ವರ್ಷದ ವ್ಯಕ್ತಿ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆಯೇ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೆಲ ದಿನಗಳಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವಿಜಯನಗರದಲ್ಲಿರುವ ಮಾರುತಿ ಕ್ಲಿನಿಕ್‌ಗೆ ವ್ಯಕ್ತಿ ಹೋಗಿದ್ದರು. ನಂತರ ವೈದ್ಯರು ಪರಿಶೀಲನೆ ಮಾಡಿ ಕೊವಿಡ್ ಟೆಸ್ಟ್‌ಗೆ ಸೂಚಿಸಿದ್ದರು. ಗುರುವಾರ ರಾತ್ರಿ ಕೊವಿಡ್-19 ಟೆಸ್ಟ್ ಮಾಡಿಸಿದ್ದ ವ್ಯಕ್ತಿ ಭಾನುವಾರ ಕೊರೊನಾ ಇರುವುದು […]

ಮಾರ್ಗಮಧ್ಯೆಯೇ ಸೋಂಕಿತ ಸಾವು, ಆ್ಯಂಬುಲೆನ್ಸ್​ನಲ್ಲೇ ಅನಾಥವಾದ ಶವ
ಆಯೇಷಾ ಬಾನು
| Edited By: |

Updated on:Jul 01, 2020 | 12:26 PM

Share

ಬೆಂಗಳೂರು: ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯನಗರದ 52 ವರ್ಷದ ವ್ಯಕ್ತಿ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆಯೇ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೆಲ ದಿನಗಳಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವಿಜಯನಗರದಲ್ಲಿರುವ ಮಾರುತಿ ಕ್ಲಿನಿಕ್‌ಗೆ ವ್ಯಕ್ತಿ ಹೋಗಿದ್ದರು. ನಂತರ ವೈದ್ಯರು ಪರಿಶೀಲನೆ ಮಾಡಿ ಕೊವಿಡ್ ಟೆಸ್ಟ್‌ಗೆ ಸೂಚಿಸಿದ್ದರು. ಗುರುವಾರ ರಾತ್ರಿ ಕೊವಿಡ್-19 ಟೆಸ್ಟ್ ಮಾಡಿಸಿದ್ದ ವ್ಯಕ್ತಿ ಭಾನುವಾರ ಕೊರೊನಾ ಇರುವುದು ದೃಢವಾಗಿತ್ತು. ವೈದ್ಯರು ನಿಮ್ಮ ಮನೆಗೆ ಬಂದು ಕರೆದೊಯ್ಯುತ್ತಾರೆಂದು ಸೋಂಕಿತನಿಗೆ ಹೇಳಿದ್ದರು. ನಂತರ ರೋಗಿಗೆ ಬಿಬಿಎಂಪಿ ಅಧಿಕಾರಿಗಳು ಕರೆ ಮಾಡಿ ನಿಮ್ಮ ಮನೆಗೆ ಬರುತ್ತೇವೆಂದು ಮಾಹಿತಿ ನೀಡಿದ್ದರು.

ಸೋಮವಾರ ಸೋಂಕಿತನಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸೋಂಕಿತ ವ್ಯಕ್ತಿ BBMP ಅಧಿಕಾರಿಗಳಿಗೆ ಕರೆ ಮಾಡಿದ್ದ, ಆದ್ರೆ ಅವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕರೆ ಕಟ್ ಮಾಡಿದ್ರು. ಆಶಾ ಕಾರ್ಯಕರ್ತೆ ಕೂಡ ಮನೆಗೆ ಬಂದು ಮಾಹಿತಿ ಪಡೆದಿದ್ರು. ಇದಾದ ಬಳಿಕ ಯಾರೂ ಕೂಡ ಮನೆಗೆ ಬಂದಿಲ್ಲ.

ಉಸಿರಾಟ ಸಮಸ್ಯೆಯಾಗಿ ಕೊರೊನಾ ಸೋಂಕಿತ ಪರದಾಡಿದ್ದಾರೆ. ಹೀಗಾಗಿ ಆಪ್ತಮಿತ್ರ ಸಹಾಯವಾಣಿಗೂ ಕರೆ ಮಾಡಿದ್ದರು. ಯಾರೂ ಕೂಡ ಸೋಂಕಿತ ವ್ಯಕ್ತಿಯ ಕರೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಈವರೆಗೂ ಸೋಂಕಿತನ ಮೃತದೇಹವನ್ನು ಯಾರೂ ಮುಟ್ಟಿಲ್ಲ. ಮಾಹಿತಿಯನ್ನೂ ನೀಡದ ಹಿನ್ನೆಲೆ ಕುಟುಂಬಸ್ಥರ ಪರದಾಡುವಂತಾಗಿದೆ.

ಆ್ಯಂಬುಲೆನ್ಸ್​ನಲ್ಲೇ ಅನಾಥವಾಗಿದೆ ಮೃತದೇಹವನ್ನು ಕೊರೊನಾ ಸೋಂಕಿನಿಂದ ನಡುರಸ್ತೆಯಲ್ಲೇ ಮೃತಪಟ್ಟ ವ್ಯಕ್ತಿಯ ದೇಹ ಆ್ಯಂಬುಲೆನ್ಸ್​ನಲ್ಲೇ ಇದೆ. ಕೊರೊನಾ ಬಂದಿದೆ ಅಂದ್ರು ಹೆಣ ತಗೋಂಡೋಗಿ ಅಂತ ಕುಟುಂಬಸ್ಥರಿಗೆ ಸಿಬ್ಬಂದಿ ಹೇಳುತ್ತಿದ್ದಾರಂತೆ. ರಾತ್ರಿ 2 ಗಂಟೆಯಿಂದ ಮೃತದೇಹ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೇ ಇದೆ. ಮೃತದೇಹ ಮನೆಗೂ ತೆಗೆದುಕೊಂಡು ಹೋಗಲಾಗದೇ, ಆಸ್ಪತ್ರೆಯವರೂ ಮುಟ್ಟದೇ ಅನಾಥವಾಗಿದೆ.

Published On - 12:25 pm, Wed, 1 July 20